IND vs PAK ರೋಚಕ ಗೆಲುವು ಮಾತ್ರವಲ್ಲ,ದಾಖಲೆ ನಿರ್ಮಿಸಿದ ಪಾಕಿಸ್ತಾನ ಧೂಳೀಪಟ ಮಾಡಿದ ಭಾರತ!
ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಇದುವರೆಗಿನ ಎಲ್ಲಾ ರೋಚಕತೆಯನ್ನು ಅಳಿಸಿಹಾಕಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಸೋಲೇ ಗತಿ ಅನ್ನೋ ಪರಿಸ್ಥಿತಿ ಎದುರಾಗಿತ್ತು. ಆದರೆ ಕ್ರೀಸ್‌ನಲ್ಲಿ ಕೊಹ್ಲಿಯ ಆಟ ಭಾರತೀಯ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿಸಿತ್ತು. ದಿಟ್ಟ ಹೋರಾಟದಿಂದ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಗೆ ಕೆಲ ದಾಖಲೆ ಬರೆದಿದೆ.
ಮೆಲ್ಬೋರ್ನ್(ಅ.23): ಭಾರತೀಯರ ದೀಪಾವಳಿ ಸಂಭ್ರಮ ಡಬಲ್ ಆಗಿದೆ. ಇದಕ್ಕೆ ಕಾರಣ ಟಿ20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ದದ ಗೆಲುವು. ರೋಚಕ ಹೋರಾಟದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸಾಧಿಸಿದ 4 ವಿಕೆಟ್ ಗೆಲುವಿಗೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರೆ, ಇನ್ನೂ ಹಲವು ಭಾಗಗಳಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಲಾಗುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಮಾತ್ರ ಸಾಧಿಸಿಲ್ಲ. ಇದರ ಜೊತೆಗೆ ಕೆಲ ದಾಖಲೆಯನ್ನೂ ಬರೆದಿದೆ. ಟಿ20 ವಿಶ್ವಕಪ್ ಟೂರ್ನಿ ಪಂದ್ಯದ ಕೊನೆಯ 3 ಓವರ್‌ನಲ್ಲಿ ಗರಿಷ್ಠ ರನ್ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಭಾರತ ಬರೆದಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 3 ಓವರ್‌ಗಳಲ್ಲಿ ಗರಿಷ್ಠ ರನ್ ಸಿಡಿಸಿ ಪಂದ್ಯ ಗೆದ್ದ ದಾಖಲೆಗಳಲ್ಲಿ ಭಾರತ ಇದೀಗ ಆಸ್ಟ್ರೇಲಿಯಾ ಜೊತೆ ಮೊದಲ ಸ್ಥಾನ ಹಂಚಿಕೊಂಡಿದೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಭಾರತ ಅಂತಿಮ 3 ಓವರ್‌ಗಳಲ್ಲಿ 48 ರನ್ ಸಿಡಿಸಿದೆ. ಈ ಮೂಲಕ 4 ವಿಕೆಚ್ ರೋಚಕ ಗೆಲುವು ದಾಖಲಿಸಿದೆ. ಇನ್ನು 2010ರಲ್ಲಿ ಆಸ್ಟ್ರೇಲಿಯಾ ಕೂಡ ಪಾಕಿಸ್ತಾನ ವಿರುದ್ಧ 48 ರನ್ ಸಿಡಿಸಿ ಗೆಲುವು ದಾಖಲಿಸಿತ್ತು.
ವಿರಾಟ್ ಕಿಂಗ್ ಕೊಹ್ಲಿ ಚಾಂಪಿಯನ್ ಆಟ; ಪಾಕ್ ಸದೆ ಬಡಿದ ಟೀಂ ಇಂಡಿಯಾ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 3 ಓವರ್‌ಗಳಲ್ಲಿ ಗರಿಷ್ಠ ರನ್ ಚೇಸ್
48 ರನ್, ಆಸ್ಟ್ರೇಲಿಯಾ vs ಪಾಕಿಸ್ತಾನ, 2010
48 ರನ್ ಭಾರತ vs ಪಾಕಿಸ್ತಾನ, 2022 *
42 ರನ್ ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ, 2014
41 ರನ್ ಶ್ರೀಲಂಕಾ vs ಭಾರತ, 2010
ಟಿ20 ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ ಪಟ್ಟಿಯಲ್ಲಿ ಭಾರತದ 4ನೇ ಪಂದ್ಯ ಇದಾಗಿದೆ. 2016ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಇದೀಗ 4ನೇ ಬಾರಿಗೆ ಈ ರೋಚಕ ಗೆಲುವಿನ ಇತಿಹಾಸ ಬರೆದಿದೆ.
ಇಂಡೋ ಪಾಕ್ ಪಂದ್ಯ ನಡೆಯುತ್ತಿರುವ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಅಪ್ಪು ಗಂಧದ ಗುಡಿ ಪೋಸ್ಟರ್!
ಟಿ20 ಪಂದ್ಯದಲ್ಲಿ ಭಾರತಕ್ಕೆ ಕೊನೆಯ ಎಸೆತದಲ್ಲಿ ರೋಚಕ ಗೆಲುವಿನ ಸಿಂಚನ
ಆಸ್ಟ್ರೇಲಿಯಾ ವಿರುದ್ಧ, ಸಿಡ್ನಿ ಮೈದಾನ, 2016
ಬಾಂಗ್ಲಾದೇಶ ವಿರುದ್ಧ, ಕೊಲೊಂಬೊ ಮೈದಾನ, 2018
ವೆಸ್ಟ್ ಇಂಡೀಸ್ ವಿರುದ್ಧ, ಚೆನ್ನೈ ಮೈದಾನ, 2019
ಪಾಕಿಸ್ತಾನ ವಿರುದ್ಧ, ಮೆಲ್ಬೋರ್ನ್ ಮೈದಾನ, 2022
ಪಾಕಿಸ್ತಾನ ಈ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತ್ತು. ಮಸೂದ್ ಹಾಗೂ ಇಫ್ತಿಕಾರ್ ಅಹಮ್ಮದ್ ಹಾಫ್ ಸೆಂಚುರಿ ಸಿಡಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ನೆರವಾದರು. ಈ ಗುರಿ ಚೇಸ್ ಮಾಡಿದ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ 4 ವಿಕೆಟ್ ಗೆಲುವು ಕಂಡಿತು. ವಿರಾಟ್ ಕೊಹ್ಲಿ ಅಜೇಯ 82 ಹಾಗೂ ಹಾರ್ದಿಕ್ ಪಾಂಡ್ಯ 40 ರನ್ ಕಾಣಿಕೆ ನೀಡಿದರು.