ಪಾಕಿಸ್ತಾನ ಹಾಗೂ ಸ್ಕಾಟ್‌ಲೆಂಡ್ ನಡುವಿನ ಪಂದ್ಯ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ
ಶಾರ್ಜಾ(ನ.07): ಈಗಾಗಲೆ ಸೆಮಿಫೈನಲ್ ಪ್ರವೇಶಿಸಿರುವ ಪಾಕಿಸ್ತಾನ(Pakistan) ಇಂದು ಸೂಪರ್ 12 ಹಂತದ ತನ್ನ ಅಂತಿಮ ಪಂದ್ಯ ಆಡುತ್ತಿದೆ. ಸ್ಕಾಟ್‌ಲೆಂಡ್(Scotland) ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶ ಯಾವುದೇ ಬದಲಾವಣೆ ತರುವುದಿಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಕಾಟ್‌ಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಇತ್ತ ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!
ಪಾಕಿಸ್ತಾನ ತಂಡ: (Pak Squad)
ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್(ನಾಯಕ), ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಆಲಿ, ಶದಬ್ ಖಾನ್, ಇಮಾದ್ ವಾಸಿಮ್, ಹಸನ್ ಆಲಿ, ಹ್ಯಾರಿಸ್ ರೌಫ್, ಶಾಹೀನ್ ಆಫ್ರಿದಿ
ಸ್ಕಾಟ್‌ಲೆಂಡ್ ತಂಡ: (Sco squad);
ಜಾರ್ಜ್ ಮನ್ಸೆ, ಕೈಲ್ ಕೊಯೆಟ್ಜರ್, ಮ್ಯಾಥ್ಯೂ ಕ್ರಾಸ್, ರಿಚೆ ಬೆರಿಂಗ್ಟನ್, ಡೈಲನ್ ಬಡ್ಜ್, ಮಿಚೆಲ್ ಲೀಸ್ಕ್, ಕ್ರಿಸ್ ಗ್ರಿವೆಸ್, ಮಾರ್ಕ್ ವ್ಯಾಟ್, ಹಮ್ಜಾ ತಾಹೀರ್, ಸಫ್ಯಾನ್ ಶರೀಫ್, ಬ್ರಾಡ್ಲೆ ವೀಲ್,
T20 World cup 2021 ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಏಕೈಕ ತಂಡ ಪಾಕಿಸ್ತಾನ. ಆಡಿದ ನಾಲ್ಕು ಪಂದ್ಯದಲ್ಲಿ ನಾಲ್ಕರಲ್ಲೂ ಗೆಲುವು ಸಾಧಿಸಿರುವ ಪಾಕಿಸ್ತಾನ ಇದೀಗ ಸ್ಕಾಟ್‌ಲೆಂಡ್ ವಿರುದ್ಧ ಸುಲಭ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್ ಪ್ರವೇಶಿಸಲು ಸಜ್ಜಾಗಿದೆ.
T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!
ಈ ಬಾರಿಯ ಚುಟುಕು ಸಮರದಲ್ಲಿ ಸ್ಕಾಟ್‌ಲೆಂಡ್ ಒಂದು ಗೆಲುವು ಕಂಡಿಲ್ಲ. ಎಲ್ಲಾ ಪಂದ್ಯದಲ್ಲಿ ಸೋಲು ಅನುಭಸಿದೆ. ಹೀಗಾಗಿ ಸ್ಕಾಟ್‌ಲೆಂಡ್ ಕನಿಷ್ಠ ಒಂದು ಗೆಲುವಿಗಾಗಿ ಹೋರಾಟ ನಡೆಸಲಿದೆ. ಸೆಮಿಫೈನಲ್ ಪ್ರವೇಶ ಈಗಾಗಲೇ ಮುಗಿದ ಅಧ್ಯಯಾವಾಗಿದೆ.
ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದ ಬಳಿಕ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನಕ್ಕೆ ಏರಿದೆ. 5 ರಲ್ಲಿ 4 ಪಂದ್ಯದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ 8 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. ಆದರೆ 4 ಪಂದ್ಯದಲ್ಲಿ 4ರಲ್ಲೂ ಗೆಲುವು ಸಾಧಿಸಿದ ಪಾಕಿಸ್ತಾನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಸ್ಕಾಟ್‌ಲೆಂಡ್ ವಿರುದ್ಧ ಗೆಲುವು ಸಾಧಿಸಿದರೆ ಪಾಕಿಸ್ತಾನ ಮತ್ತೆ ಮೊದಲ ಸ್ಥಾನಕ್ಕೆ ಏರಲಿದೆ.
ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವಿನಿಂದ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಎರಡನೇ ಗುಂಪಿನಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಇಂಗ್ಲೆಂಡ್ ತಂಡದ ಸೋಲಿಲ್ಲದೆ ಸರದಾನಾಗಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಸೌತ್ ಆಫ್ರಿಕಾ ಛಿದ್ರ ಮಾಡಿತ್ತು. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೌತ್ ಆಫ್ರಿಕಾ ಮಣಿಸಿತ್ತು. ಆದರೆ ಸೆಮಿಫೈನಲ್ ಪ್ರವೇಶಸಲು ಸೌತ್ ಆಫ್ರಿಕಾ ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನ ಬಹುತೇಕ ಸೋಲಿಲ್ಲದೆ ಸಮಿಫೈನಲ್ ಪ್ರವೇಶ ಖಚಿತವಾಗಿದೆ.
ಬಾಬರ್ ಅಜಮ್: ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ದಾಖಲಿಸಲು ನಿರ್ಧರಿಸಿದ್ದೇವೆ. ನಾವು ಗೆಲುವಿನ ಓಟವನ್ನು ಮುಂದುವರಿಸಲು ಇಚ್ಚಿಸುತ್ತೇವೆ. ಅಭಿಮಾನಿಗಳು ಪಾಕಿಸ್ತಾನ ತಂಡಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ನಮ್ಮ ಪ್ರದರ್ಶನದಿಂದ ನಾವು ಸಂತಸರಾಗಿದ್ದೇವೆ. ಇಂದಿನ ಪಂದ್ಯದಲ್ಲೂ ಅದೇ ರೀತಿ ಪ್ರದರ್ಶನ ನೀಡಲಿದ್ದೇವೆ ಎಂದು ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಭಾರತ ವಿರುದ್ದ ನಾವು ಆಡಲು ಸದಾ ಸಿದ್ದ, ಫಲಿತಾಂಶ ಏನೇ ಆಗಿರಬಹುದು. ಆದರೆ ಬಲಿಷ್ಠ ಎದುರಾಳಿ ವಿರುದ್ಧ ಉತ್ತಮ ಹೋರಾಟ ನೀಡಲು ಪ್ರಯತ್ನಿಸುತ್ತೇವೆ. ನಾವು ಪಾಕಿಸ್ತಾನ ತಂಡವನ್ನು ಮಣಿಸಲು ಶಕ್ತರಾಗಿದ್ದೇವೆ. ಉತ್ತಮ ಹೋರಾಟ ನೀಡಬೇಕು ಎಂದು ಸ್ಕಾಟ್‌ಲೆಂಡ್ ನಾಯಕ ಕೈಯಲ್ ಕೊಯೆಟ್ಜರ್ ಹೇಳಿದ್ದಾರೆ.
