T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!
- ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು
- ಟೀಂ ಇಂಡಿಯಾ ಸೆಮಿಫೈನಲ್ ರೇಸ್‌ನಿಂದ ಹೊರಕ್ಕೆ
- ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
ಅಬು ಧಾಬಿ(ನ.07): ಟೀಂ ಇಂಡಿಯಾ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. T20 World cup 2021 ಟೂರ್ನಿಯಲ್ಲಿ ಸೆಮಿಫೈನಲ್(Semifinal) ಪ್ರವೇಶಿಸುವ ಟೀಂ ಕೊಹ್ಲಿ ಸೈನ್ಯದ(Virat Kohli0 ಆಸೆಯೂ ನೇರವೇರಲಿಲ್ಲ. ಆಫ್ಘಾನಿಸ್ತಾನ(Afghanistan) ವಿರುದ್ಧ 8 ವಿಕೆಟ್ ಗೆಲುವು ಸಾಧಿಸಿದ ನ್ಯೂಜಿಲೆಂಡ್(New zealand) ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದ ಟೀಂ ಇಂಡಿಯಾ(Team India) ಟೂರ್ನಿಯಿಂದ ಹೊರಬಿದ್ದಿದೆ.
T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ಪಂದ್ಯದ ಫಲಿತಾಂಶ ಟೀಂ ಇಂಡಿಯಾಗೂ ಅತೀ ಮುಖ್ಯವಾಗಿತ್ತು. ಹೀಗಾಗಿ ಆಫ್ಘಾನಿಸ್ತಾನ ತಂಡಕ್ಕೆ ಭಾರತೀಯ ಅಭಿಮಾನಿಗಳು(Fans) ಬೆಂಬಲ ನೀಡಿದ್ದರು. ಆದರೆ ಫಲ ಕೊಡಲಿಲ್ಲ. ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಅಧಿಕಾರಯುತವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ಅಬ್ಬರಿಸಲಿಲ್ಲ. ನಜೀಬುಲ್ಲಾ ಜರ್ದಾನ್ ಅಬ್ಬರದಿಂದ ಆಫ್ಘಾನ್ ದಿಟ್ಟ ಹೋರಾಟ ನೀಡಿತು ಜರ್ದಾನ್ 73 ರನ್ ಕಾಣಿಕೆ ನೀಡಿದರು. ಈ ಮೂಲಕ ಆಫ್ಘಾನಿಸ್ತಾನ 124 ರನ್ ಸಿಡಿಸಿತು. ನ್ಯೂಜಿಲೆಂಡ್ ತಂಡಕ್ಕೆ 125 ರನ್ ಟಾರ್ಗೆಟ್(Target) ಟೀಂ ಇಂಡಿಯಾ ಅಭಿಮಾನಿಗಳ ಆತಂಕ ಹೆಚ್ಚಿಸಿತು.
Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?ಸುಲಭ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಡೀಸೆಂಟ್ ಆರಂಭ ಪಡೆಯಿತು. ಮಾರ್ಟಿನ್ ಗಪ್ಟಿಲ್ ಹಾಗೂ ಡರಿಲ್ ಮೆಚೆಲ್ 26 ರನ್ ಜೊತೆಯಾಟ ನೀಡಿದರು. ಆದರೆ ಮುಜೀಪ್ ಎಸೆತದಲ್ಲಿ ಮಿಚೆಲ್ ವಿಕೆಟ್ ಪತನಗೊಂಡಿತು. ಮಿಚೆಲ್ 17 ರನ್ ಸಿಡಿಸಿ ಔಟಾದರು. ಇತ್ತ ಮಾರ್ಟಿನ್ ಗಪ್ಟಿಲ್ 28 ರನ್ ಸಿಡಿಸಿ ಔಟಾದರು.
ಮುಜೀಬ್ ಹಾಗೂ ರಶೀದ್ ಖಾನ್ ಮೋಡಿಗೆ ನ್ಯೂಜಿಲೆಂಜ್ ಆರಂಭಿಕರು ವಿಕೆಟ್ ಪತನಗೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೋನ್ ಕೊನ್ವೆ ಜೊತೆಯಾಟದಿಂದ ನ್ಯೂಜಿಲೆಂಡ್ ಚೇತರಿಸಿಕೊಂಡಿತು. ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಬಳಿಕ ಗೇರ್ ಬದಲಾಯಿಸಿತು.
ನ್ಯೂಜಿಲೆಂಡ್ ಗೆಲುವಿಗೆ ಅಂತಿಮ 24 ಎಸೆತದಲ್ಲಿ ರನ್ ಅವಶ್ಯಕತೆ ಇತ್ತು. ಇವರಿಬ್ಬರ ಹೋರಾಟದಿಂದ ನ್ಯೂಜಿಲೆಂಡ್ ಗೆಲುವಿನ ಹಾದಿಯಲ್ಲಿ ಸಾಗಿತು. ಕೇನ್ ವಿಲಿಯಮ್ಸನ್ ಅಜೇಯ 40 ರನ್ ಹಾಗೂ ಕೊನ್ವೇ ಅಜೇಯ 36 ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ 18.1 ಓವರ್‌ಗಳಲ್ಲಿ 8 ವಿಕೆಟ್ ಗೆಲುವು ಸಾಧಿಸಿತು.
ಆಫ್ಘಾನ್ ವಿರುದ್ಧದ ಗೆಲುವಿನಿಂದ ನ್ಯೂಜಿಲೆಂಡ್ ನೇರವಾಗಿ ಸೆಮಿಫೈನಲ್ ಪ್ರವೇಶ ಪಡೆಯಿತು. ಇತ್ತ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ನವೆಂಬರ್ 8 ರಂದು ನಮಿಬಿಯಾ ವಿರುದ್ಧ ಅಂತಿಮ ಪಂದ್ಯ ಆಡಲಿದೆ.
ಸೆಮಿಫೈನಲ್ ಕದನ:
ಮೊದಲ ಗುಂಪಿನಿಂದ ಇಂಗ್ಲೆಂಡ್(England) ಹಾಗೂ ಆಸ್ಟ್ರೇಲಿಯಾ(Australia) ಸೆಮಿಫೈನಲ್ ಹಂತ ಪ್ರವೇಶಿಸಿದೆ. ಎರಡನೇ ಗುಂಪಿನಿಂದ ಪಾಕಿಸ್ತಾನ(Pakistan) ಹಾಗೂ ನ್ಯೂಜಿಲೆಂಡ್(New zealand) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದೆ.
ಇನ್ನು ಶ್ರೀಲಂಕಾ)Srilanka), ಬಾಂಗ್ಲಾದೇಶ(Bangladesh), ಆಫ್ಘಾನಿಸ್ತಾನ(Afghanistan) ನಮಿಬಿಯಾ(Namibia), ಸ್ಕಾಟ್‌ಲೆಂಡ್(Scotland) ತಂಡಗಳು ಕೂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಕಣದಲ್ಲಿ ನಾಲ್ಕು ತಂಡಗಳು ಮಾತ್ರ ಉಳಿದುಕೊಂಡಿದೆ. ಈ ತಂಡಗಳ ಪೈಕಿ ಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.
ನವೆಂಬರ್ 10 ರಂದು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಡೆದರೆ, ನವೆಂಬರ್ 11 ರಂದು 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇನ್ನ ನವೆಂಬರ್ 14 ರಂದು ಫೈನಲ್(T20 World cup 2021 Final) ಪಂದ್ಯ ನಡೆಯಲಿದೆ.