T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!
- ಪಂದ್ಯ ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಸೌತ್ ಆಫ್ರಿಕಾ
- ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ
- ಮೊದಲ ಗುಂಪಿನಿಂದ ಇಂಗ್ಲೆಂಡ್, ಆಸ್ಟ್ರೇಲಿಯಾ ಸೆಮೀಸ್‌ಗೆ ಲಗ್ಗೆ
ಶಾರ್ಜಾ(ನ.06): ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ಸಾಧಿಸಿದೆ. ಆದರೆ ಸೌತ್ ಆಫ್ರಿಕಾ T20 World Cup 2021 ಟೂರ್ನಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ 132 ರನ್ ಸಿಡಿಸುತ್ತಿದ್ದಂತೆ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. ಇಷ್ಟೇ ಅಲ್ಲ ಆಸ್ಟ್ರೇಲಿಯಾ ಅಧಿಕೃತವಾಗಿ ಸೆಮಿಫೈನಲ್ ಸುತ್ತಿಗೆ ಪ್ರವೇಶ ಪಡೆಯಿತು.
Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?
ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ರಸಿ ವ್ಯಾಂಡರ್ ಡಸೆನ್ ಅಜೇಯ 94, ಆ್ಯಡಿನನ್ ಮರ್ಕ್ರಾಮ್ ಅಜೇಯ 52 ಹಾಗೂ ಕ್ವಿಂಟನ್ ಡಿಕಾಕ್ 34 ರನ್ ನೆರವಿನಿಂದ ಸೌತ್ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು.
190 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಭರ್ಜರಿ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ ಹಾಗೂ ಜೇಸನ್ ರಾಯ್ ಅಬ್ಬರಿಸಿದರು. ಆದರೆ 20 ರನ್ ಸಿಡಿಸಿದ ಜೇಸನ್ ರಾಯ್ ರಿಟೈರ್ಡ್ ಹರ್ಟ್ ಆದರು. ಹೀಗಾಗಿ ಆರಂಭಿಕ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು.
ರಾಯ್ ಪೆವಿಲಿಯನ್ ಸೇರಿಕೊಂಡ ಬೆನ್ನಲ್ಲೇ ಜೋಸ್ ಬಟ್ಲರ್ 15 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಜಾನಿ ಬೈರ್‌ಸ್ಟೋ ಕೇವಲ 1 ರನ್ ಸಿಡಿಸಿ ಔಟಾದರು. 59 ರನ್‌ಗಳಿಗೆ ಇಂಗ್ಲೆಂಡ್ 2ನೇ ವಿಕೆಟ್ ಕಳೆದುಕೊಂಡಿತು. ಕುಸಿದ ತಂಡಕ್ಕೆ ಮೊಯಿನ್ ಆಲಿ ಹಾಗೂ ಡೇವಿಡ್ ಮಲಾನ್ ಆಸರೆಯಾದರು.
T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!
ಮೊಯಿನ್ ಆಲಿ 27 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ಡೇವಿಡ್ ಮಲಾ 33 ರನ್ ಸಿಡಿಸಿ ನಿರ್ಗಮಿಸಿದರು. ಇಂಗ್ಲೆಂಡ್ 132 ರನ್ ಸಿಡಿಸುತ್ತಿದ್ದಂತೆ ಸೌತ್ ಆಫ್ರಿಕಾ T20 World Cup 2021 ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. ಇತ್ತ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ಸೆಮಿಫೈನಲ್ ರೇಸ್‌ನಿಂದ ಹೊರಬೀಳುತ್ತಿದ್ದಂತೆ ಸೌತ್ ಆಫ್ರಿಕಾ ತಂಡ ನಿರಾಸೆ ಅನುಭವಿಸಿತು. ಪಂದ್ಯದಲ್ಲಿ ಗೆಲುವು ಸಾಧಿಸುವತ್ತ ಚಿತ್ತ ಹರಿಸಲಿಲ್ಲ. ಪರಿಣಾಮ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ನಾಯಕ ಇಯಾನ್ ಮಾರ್ಗನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ಅಂತಿಮ 12 ಎಸೆತದಲ್ಲಿ ಇಂಗ್ಲೆಂಡ್ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು.
T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್
ಲಿಯಮಾ 17 ಎಸೆತದಲ್ಲಿ28 ರನ್ ಸಿಡಿಸಿ ಔಟಾದರು. ಲಿಯಾಮ್ ವಿಕೆಟ್ ಪತನ ಇಂಗ್ಲೆಂಡ್ ತಂಡಕ್ಕೆ ತೀವ್ರ ಹಿನ್ನಡೆ ತಂದುಕೊಟ್ಟಿತು. ಆದರೆ ಕ್ರಿಸ್ ವೋಕ್ಸ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿ ಸೌತ್ ಆಫ್ರಿಕಾಗೆ ಶಾಕ್ ನೀಡಿದರು. ಇದರಿಂದ ಅಂತಿಮ 6 ಎಸೆತದಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಬೇಕಿತ್ತು.
ಕ್ರಿಸ್ ವೋಕ್ಸ್ ಕೇವಲ 7 ರನ್ ಸಿಡಿಸಿ ಔಟಾದರು. ಮಾರ್ಗನ್ 17 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತು. ಈ ಮೂಲಕ T20 World Cup 2021 ಮೊದಲ ಸೋಲು ಕಂಡಿತು. ಇತ್ತ ಪಂದ್ಯ ಗೆದ್ದರೂ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿತು.
ಮೊದಲ ಗುಂಪಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪ್ರವೇಶ ಪಡೆಯಿತು. ಕಠಿಣ ಹೋರಾಟ ನೀಡಿದ ಸೌತ್ ಆಫ್ರಿಕಾ ತಂಡ ನಿರ್ಗಮಿಸಿತು. ಇನ್ನು ಇದಕ್ಕು ಮೊದಲೇ ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡ ಹೊರಬಿದ್ದಿದೆ.