ಟಿ20 ವಿಶ್ವಕಪ್ ಟೂರ್ನಿ ಬಿಗ್ ಫೈಟ್‌ಗೆ ಕೌಂಟ್‌ಡೌನ್ ಅ.24ಕ್ಕೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಇಂಡೋ ಪಾಕ್ ಪಂದ್ಯದ ವೈರಲ್ ಮೆಮ್ಸ್

ನವದೆಹಲಿ(ಅ.22); T20 World Cup 2021 ಟೂರ್ನಿಯ ಬದ್ಧವೈರಿಗಳ ಕದನಕ್ಕೆ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಿಶ್ವಕಪ್ ಟೂರ್ನಿ ಇತರ ಎಲ್ಲಾ ಪಂದ್ಯಕ್ಕಿಂತ ಇಂಡೋ ಪಾಕ್ ಫೈಟ್ ಅತ್ಯಂತ ಮಹತ್ವದ್ದಾಗಿದೆ. ಅಭಿಮಾನಿಗಳಿಗೆ ಫೈನಲ್ ಪಂದ್ಯ ಸೋತರೂ ಬೇಜಾರಿಲ್ಲ, ಆದರೆ ಇಂಡೋ ಪಾಕ್ ಪಂದ್ಯದಲ್ಲಿ ಸೋಲು ಉಭಯ ದೇಶದ ಅಭಿಮಾನಿಗಳು ಸಹಿಸುವುದಿಲ್ಲ. ಈ ಕುರಿತು ಈಗಲೇ ಟೀಕೆ, ವಿಡಂಬನೆ, ಹಾಸ್ಯಭರಿತ ಮೆಮ್ಸ್ ವೈರಲ್ ಆಗುತ್ತಿದೆ.

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಇದುವರೆಗೆ ಭಾರತವನ್ನು ಮಣಿಸಿಲ್ಲ. ಆದರೆ ಕಳೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಪಾಕಿಸ್ತಾನ ಟ್ರೋಫಿ ಗೆದ್ದುಕೊಂಡಿತ್ತು. ಈ ಎರಡು ವಿಚಾರಗಳನ್ನು ಹಿಡಿದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. 

ಓವೈಸಿ ಬೆನ್ನಲ್ಲೇ ಇಂಡೋ-ಪಾಕ್ ಪಂದ್ಯ ಬಹಿಷ್ಕರಿಸಲು ಆಗ್ರಹಿಸಿದ ಕೇಂದ್ರ ಸಚಿವ!

ಟಿ20 ಕ್ರಿಕೆಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ಬಲಿಷ್ಠ ತಂಡಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಒತ್ತಡ ನಿಭಾಯಿಸಿ ಉತ್ತಮ ಪ್ರದರ್ಶನ ನೀಡುವ ತಂಡ ಗೆಲುವು ಸಾಧಿಸಲಿದೆ. ಆದರೆ ಎರಡು ದೇಶದ ಅಭಿಮಾನಿಗಳು ಈಗಲೇ ಕೆಸರೆರೆಚಾಟ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೆಮ್ಸ್ ಇಲ್ಲಿದೆ.

T20 World Cup: ಪಾಕ್‌ ವಿರುದ್ಧದ ಪಂದ್ಯ ರದ್ದು ಮಾಡಲು ಆಗ್ರಹ : ಬಿಸಿಸಿಐ ಹೇಳಿದ್ದೇನು..?


Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…