ಉತ್ತರ ಪ್ರದೇಶ(ಫೆ.22): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ. ಬ್ಯಾಟಿಂಗ್‌ನಲ್ಲಿ ದೀಪ್ತಿ ಶರ್ಮಾ ಅಜೇಯ 49 ರನ್ ಸಿಡಿಸಿ ಕಾಣಿಕೆ ನೀಡಿದರೆ, ಬೌಲಿಂಗ್‌ನಲ್ಲಿ ಪೂನಂ ಯಾದವ್ 4 ವಿಕೆಟ್ ಕಬಳಿಸಿ ಆಸೀಸ್ ತಂಡವನ್ನು ಆಲೌಟ್ ಮಾಡಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಆಸೀಸ್ ಗರ್ವಭಂಗ ಮಾಡಿದ ಮಹಿಳಾ ಟೀಂ ಇಂಡಿಯಾ

ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಉತ್ತರ ಪ್ರದೇಶದ ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಮುಂದಿನ ಪಂದ್ಯಗಳಲ್ಲಿ ಭಾರತ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿತ್ತು. 133ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ 115 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಮಹಿಳಾ ತಂಡ 17 ರನ್ ಗೆಲುವು ಸಾಧಿಸಿತು. ಫೆ.24ರಂದು ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧ ಹೋರಾಟ ನಡೆಸಲಿದೆ.