Asianet Suvarna News Asianet Suvarna News

Syed Mushtaq Ali Trophy: ಇಂದು ಕರ್ನಾಟಕ-ತಮಿಳುನಾಡು ಫೈನಲ್‌ ಕದನ!

*ಕರ್ನಾಟಕಕ್ಕೆ 3ನೇ ಬಾರಿ ಟ್ರೋಫಿ ಗೆಲ್ಲುವ ಗುರಿ
*ಪ್ರಮುಖ ಆಟಗಾರರ ಅನುಪಸ್ಥಿತಿ: ಸ್ಪಿನ್ನ​ರ್‍ಸ್ ಮೇಲೆ ನಿರೀಕ್ಷೆ
*3 ಬಾರಿಗೆ ಟಿ20 ಟ್ರೋಫಿ ಗೆಲ್ಲಲಿರುವ ಮೊದಲ ತಂಡ!

Syed Mushtaq Ali Trophy Final Match  Karnataka Vs Tamilnadu in Delhi on Monday mnj
Author
Bengaluru, First Published Nov 22, 2021, 6:32 AM IST
  • Facebook
  • Twitter
  • Whatsapp

ನವದೆಹಲಿ(ನ.20): ಹಾಲಿ ಚಾಂಪಿಯನ್‌ ತಮಿಳುನಾಡು (Tamilnadu) ಸತತ 2ನೇ ವರ್ಷ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿ (Syed Mushtaq Ali Trophy) ಗೆಲ್ಲುವ ಕನಸು ಕಾಣುತ್ತಿದ್ದು, ತಮಿಳುನಾಡಿನ ಹಾದಿಯಲ್ಲಿ ಬಲಿಷ್ಠ ಕರ್ನಾಟಕ (Karnataka Team) ಎದುರು ನಿಂತಿದೆ. ಸೋಮವಾರ ನಡೆಯಲಿರುವ ಫೈನಲ್‌  ಪಂದ್ಯದಲ್ಲಿ (Final Match) ಉಭಯ ತಂಡಗಳು ಸೆಣಸಲಿದ್ದು, 3ನೇ ಬಾರಿಗೆ ಫೈನಲ್‌ಗೇರಿರುವ ಕರ್ನಾಟಕ 3ನೇ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. 2021ರ ಫೈನಲ್‌ ಪಂದ್ಯವು 2019ರ ಫೈನಲ್‌ನ ಮರು ಪಂದ್ಯದಂತೆ ಇರಲಿದೆ. ಈ ತಂಡಗಳು 2019ರ ಫೈನಲ್‌ನಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಕರ್ನಾಟಕ 1 ರನ್‌ನಿಂದ ಗೆದ್ದು 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು.

ಪ್ರಮುಖ ಆಟಗಾರರ ಅನುಪಸ್ಥಿತಿ:

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಕರ್ನಾಟಕ ಗೆಲುವಿನ ಓಟ ಮುಂದುವರಿಸಿದೆ. ನಾಯಕ ಮನೀಶ್‌ ಪಾಂಡೆ (Manish Pandey) ಫೈನಲ್‌ನಲ್ಲೂ ಆರಂಭಿಕನಾಗಿ ಆಡುವ ನಿರೀಕ್ಷೆ ಇದೆ. ಪಾಂಡೆ ತಮ್ಮ ಆರಂಭಿಕ ಜೊತೆಗಾರ ರೋಹನ್‌ ಕದಂರಿಂದ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಿದ್ದಾರೆ. ಸೆಮಿಫೈನಲ್‌ನಲ್ಲಿ ಆಕರ್ಷಕ ಆಟವಾಡಿದ್ದ ಕದಂ, ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

IND vs NZ:ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಗಂಗೂಲಿಗೆ ಟ್ರೋಫಿ ಗಿಫ್ಟ್, ರೋಹಿತ್ ನಾಯಕತ್ವಕ್ಕೆ ಸಲಾಮ್!

ಮಧ್ಯಮ ಕ್ರಮಾಂಕದಲ್ಲಿ ಕರುಣ್‌ ನಾಯರ್‌, ಅನಿರುದ್ಧ ಜೋಶಿ, ಬಿ.ಆರ್‌.ಶರತ್‌ ಜವಾಬ್ದಾರಿಯುತ ಆಟ ಆಡಬೇಕಿದೆ. ತಂಡಕ್ಕೆ ಮತ್ತೊಮ್ಮೆ ಅಭಿನವ್‌ ಮನೋಹರ್‌ರ ಸ್ಫೋಟಕ ಇನ್ನಿಂಗ್ಸ್‌ನ ಅವಶ್ಯಕತೆ ಎದುರಾಗಬಹುದು. ಆಡಿರುವ 3 ಇನ್ನಿಂಗ್ಸ್‌ಗಳಲ್ಲೂ ಅಭಿನವ್‌ ಉತ್ತಮ ಪ್ರದರ್ಶನ ತೋರಿದ್ದು, ಮುಂದಿನ ತಿಂಗಳು ನಡೆಯಲಿದೆ ಎನ್ನಲಾದ ಐಪಿಎಲ್‌ ಹರಾಜಿನಲ್ಲಿ ಬಹು ಬೇಡಿಕೆಯ ಆಟಗಾರನಾಗಿ ಹೊರಹೊಮ್ಮಬಹುದು.

ಸ್ಪಿನ್ನ​ರ್‍ಸ್ ಮೇಲೆ ನಿರೀಕ್ಷೆ:

ಕರ್ನಾಟಕದ ಸ್ಪಿನ್ನರ್‌ಗಳಾದb(Spinners) ಕೆ.ಸಿ.ಕರಿಯಪ್ಪ ಹಾಗೂ ಜೆ.ಸುಚಿತ್‌ ತಮ್ಮ ಲಯವನ್ನು ಫೈನಲ್‌ನಲ್ಲೂ ಮುಂದುವರಿಸಬೇಕಿದೆ. ಇವರಿಬ್ಬರ 8 ಓವರ್‌ಗಳು ಪಂದ್ಯದ ಗತಿಯನ್ನೇ ಬದಲಿಸಬಹುದು. ಇನ್ನು ಅನನುಭವಿ ವೇಗಿಗಳಾದ ವಿದ್ಯಾಧರ್‌ ಪಾಟೀಲ್‌, ವೈಶಾಖ್‌ ವಿಜಯ್‌ಕುಮಾರ್‌ ಹಾಗೂ ಎಂ.ಬಿ.ದರ್ಶನ್‌ ಒಮ್ಮೊಮ್ಮೆ ದುಬಾರಿಯಾದರೂ ತಂಡವನ್ನು ಫೈನಲ್‌ಗೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಮೂವರು ಫೈನಲ್‌ನಲ್ಲೂ ಮಿಂಚಿನ ದಾಳಿ ನಡೆಸಬೇಕಿದೆ.

ಸತತ 3ನೇ ಬಾರಿಗೆ ಫೈನಲ್‌ನಲ್ಲಿ ಆಟ!

ಇನ್ನು ತಮಿಳುನಾಡು ಸತತ 3ನೇ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದ್ದು, 3ನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ತಂಡ 2006-07, 2020ರಲ್ಲಿ ಪ್ರಶಸ್ತಿ ಜಯಿಸಿತ್ತು. ಸಂಘಟಿತ ಪ್ರದರ್ಶನದ ಮೂಲಕ ಫೈನಲ್‌ಗೇರಿರುವ ತಮಿಳುನಾಡು, ತನ್ನ ಆಕ್ರಮಣಕಾರಿ ಬ್ಯಾಟರ್‌ಗಳಾದ ಎನ್‌.ಜಗದೀಶನ್‌ ಹಾಗೂ ಹರಿ ನಿಶಾಂತ್‌ ಮೇಲೆ ಹೆಚ್ಚು ವಿಶ್ವಾಸವಿರಿಸಲಿದೆ. ಹೊಸ ಪ್ರತಿಭೆ ಸಾಯಿ ಸುದರ್ಶನ್‌ ಕೂಡ ಭರವಸೆ ಮೂಡಿಸಿದ್ದಾರೆ. ನಾಯಕ ವಿಜಯ್‌ ಶಂಕರ್‌ ತಂಡದ ಪರ ಟೂರ್ನಿಯಲ್ಲಿ ಗರಿಷ್ಠ ರನ್‌ (181 ರನ್‌) ಬಾರಿಸಿದ ಆಟಗಾರ ಎನಿಸಿದ್ದು, ಉತ್ತಮ ಲಯದಲ್ಲಿದ್ದಾರೆ. ತಂಡದ ಬೌಲರ್‌ಗಳು ಸಹ ಲಯ ಕಾಯ್ದುಕೊಂಡಿದ್ದು, ಕರ್ನಾಟಕಕ್ಕೆ ದೊಡ್ಡ ಮೊತ್ತ ಕಲೆಹಾಕಲು ಸವಾಲು ಎದುರಾಗಬಹುದು.

MS Dhoni IPL 2022 ಟೂರ್ನಿ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ CSK ನಾಯಕ..!

ಕರ್ನಾಟಕ ವಿರುದ್ಧ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ತಮಿಳುನಾಡು ಕೊನೆ ಬಾರಿಗೆ ಗೆದ್ದಿದ್ದು 2017ರಲ್ಲಿ. ಕರ್ನಾಟಕ ತನ್ನ ಗೆಲುವಿನ ದಾಖಲೆಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ತಮಿಳುನಾಡು ಸೋಲಿನ ಸರಪಳಿ ಕಳಚಲು ಎದುರು ನೋಡುತ್ತಿದೆ.

3 ಬಾರಿಗೆ ಟಿ20 ಟ್ರೋಫಿ ಗೆಲ್ಲಲಿರುವ ಮೊದಲ ತಂಡ!

ಇಂದು ಯಾರೇ ಗೆದ್ದರೂ 3ನೇ ಬಾರಿಗೆ ಮುಷ್ತಾಕ್‌ ಅಲಿ ಟ್ರೋಫಿ ಗೆಲ್ಲಲಿರುವ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಲಿದ್ದಾರೆ. ಇದುವರೆಗೂ ಕರ್ನಾಟಕ, ತಮಿಳುನಾಡು, ಬರೋಡಾ, ಗುಜರಾತ್‌ ತಲಾ 2 ಬಾರಿ ಟ್ರೋಫಿ ಜಯಿಸಿವೆ. ಪಂಜಾಬ್‌ 3, ಬರೋಡಾ 2 ಬಾರಿ ರನ್ನರ್‌-ಅಪ್‌ ಆಗಿ̧ವ̤

Follow Us:
Download App:
  • android
  • ios