IND vs NZ:ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಗಂಗೂಲಿಗೆ ಟ್ರೋಫಿ ಗಿಫ್ಟ್, ರೋಹಿತ್ ನಾಯಕತ್ವಕ್ಕೆ ಸಲಾಮ್!
- ಗಂಟೆ ಬಾರಿ ಕೋಲ್ಕತಾ ಪಂದ್ಯಕ್ಕೆ ಚಾಲನೆ ನೀಡಿದ್ದ ಗಂಗೂಲಿ
- ಕ್ಲೀನ್ ಸ್ವೀಪ್ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
- ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ರೋಹಿತ್ ದಾಖಲೆ
ಕೋಲ್ಕತಾ(ನ.22): ರಾಹುಲ್ ದ್ರಾವಿಡ್ (Rahul Dravid) ಮಾರ್ಗದರ್ಶನ, ರೋಹಿತ್ ಶರ್ಮಾ(Rohit sharma) ನಾಯತ್ವ ಗೆಲುವಿಗೆ ಇನ್ನೇನು ಬೇಕು ಹೇಳಿ. ಅಂಡರ್ 19, ಇಂಡಿಯಾ ಎ ತಂಡಕ್ಕೆ ಕೋಚ್ ಆಗಿ ಭಾರಿ ಯಶಸ್ಸು ಕಂಡಿರುವ ರಾಹುಲ್ ದ್ರಾವಿಡ್, ಇದೀಗ ಟೀಂ ಇಂಡಿಯಾದಲ್ಲಿ ತಮ್ಮ ಯಶಸ್ಸು ಮುಂದುವರಿಸಿದ್ದಾರೆ. ಮೊದಲ ಸವಾಲಿನಲ್ಲಿ ದ್ರಾವಿಡ್ ಹಾಗೂ ರೋಹಿತ್ ಜೋಡಿ ಕ್ಲೀನ್ ಸ್ವೀಪ್(Clean Sweep Victory) ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್(New zealand) ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ(Team India) 3-0 ಅಂತರದಲ್ಲಿ ಕೈವಶ ಮಾಡಿದೆ. ಈ ಗೆಲುವು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇನ್ನು ಮಾಜಿ ಕ್ರಿಕೆಟಿಗರು ರೋಹಿತ್ ಸೈನ್ಯದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ನಾಯಕತ್ವಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಹಿತ್ ನಾಯಕತ್ವದಲ್ಲಿ ಮುಂದಿನ ಟಿ20 ವಿಶ್ವಕಪ್ ಗೆಲ್ಲಲಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.
IND vs NZ T20: ಅಕ್ಸರ್ ಪಟೇಲ್ ಜಾದೂ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು!
ಗಂಟೆ ಬಾರಿ ಪಂದ್ಯಕ್ಕೆ ಚಾಲನೆ:
ಕೋಲ್ಕತಾದಲ್ಲಿ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಇಂಗ್ಲೆಂಡ್‌ನಲ್ಲಿರುವ ಲಾರ್ಡ್ಸ್ ಮೈದಾನ ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿದೆ. ಆದರೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನವನ್ನು(Eden Gardens) ಭಾರತದ ಕ್ರಿಕೆಟ್ ಕಾಶಿ ಎಂದು ಕರೆಯುತ್ತಾರೆ. ಲಾರ್ಡ್ಸ್ ಮೈದಾನದಲ್ಲಿ(Lords Stadium) ಪಂದ್ಯಕ್ಕೆ ಗಂಟೆ ಬಾರಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ವಿಶೇಷವಾಗಿ ಟೆಸ್ಟ್ ಪಂದ್ಯಕ್ಕೆ ಈ ಸಂಪ್ರದಾವಿದೆ. ಇದೇ ಸಂಪ್ರದಾಯವನ್ನು ಕೋಲ್ಕಾತದಲ್ಲಿ ಅನುಸರಿಸಲಾಗುತ್ತದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಿ20 ಪಂದ್ಯಕ್ಕೆ ಸೌರವ್ ಗಂಗೂಲಿ ಗಂಟೆ ಬಾರಿ ಚಾಲನೆ ನೀಡಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ 73 ರನ್ ಗೆಲುವು ಸಾಧಿಸಿದೆ.
"
ರೋಹಿತ್ ದಾಖಲೆ:
ಕೋಲ್ಕತಾ ಪಂದ್ಯದಲ್ಲಿ ರೋಹಿತ್ ಶರ್ಮಾ ಕೆಲ ದಾಖಲೆ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟರ್ ಅನ್ನೋ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 150 ಸಿಕ್ಸರ್ ಸಿಡಿಸಿದ ಎರಡನೇ ಕ್ರಿಕೆಟಿಗ ರೋಹಿತ್ ಶರ್ಮಾ. ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾರ್ಟಿನ್ 165 ಸಿಕ್ಸರ್ ಸಿಡಿಸಿದ್ದಾರೆ.
IND vs NZ : ಕೋಲ್ಕತಾ ಟಿ20 ಪಂದ್ಯಕ್ಕೂ ಮುನ್ನ 11 ಮಂದಿ ಬಂಧನ!
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಟಿ20ಯಲ್ಲಿ ವಿರಾಟ್ ಕೊಹ್ಲಿ 29 ಬಾರಿ 50+ ಸ್ಕೋರ್ ಸಿಡಿಸಿದ್ದಾರೆ. ಇದೀಗ ರೋಹಿತ್ ಶರ್ಮಾ 30 ಬಾರಿ 50+ ಸ್ಕೋರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನು ಟಿ20ಯಲ್ಲಿ ಗರಿಷ್ಠ 50+ ಸ್ಕೋರ್ ಸಿಡಿಸಿದ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ನಾಯಕನಾಗಿ ರೋಹಿತ್ ಶರ್ಮಾ ಗೆಲುವಿನ ಪರ್ಸಂಟೇಜ್ 81.81. ಟ್ರೋಫಿ ಕೈವಶ ಮಾಡುವಲ್ಲಿ ರೋಹಿತ್‌ಗೆ ಸರಿಸಾಟಿ ಯಾರೂ ಇಲ್ಲ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಒಂದು ಬಾರಿ ಟ್ರೋಫಿ ಗೆದ್ದಿದ್ದಾರೆ. ಇನ್ನು ನಿಧಾಸ್ ಟ್ರೋಫಿ, ಇದೀಗ ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ರೋಹಿತ್ ಟ್ರೋಫಿ ಗೆದ್ದಿದ್ದಾರೆ.
ಕೋಲ್ಕತಾ ಪಂದ್ಯದ ಸ್ಕೋರ್:
ಕೋಲ್ಕತಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 184 ರನ್ ಸಿಡಿಸಿತ್ತು. ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದರು. ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20, ಹರ್ಷಲ್ ಪಟೇಲ್ 18 ಹಾಗೂ ದೀಪಕ್ ಚಹಾರ್ ಅಜೇಯ 21 ರನ್ ಸಿಡಿಸಿದ್ದರು. ಇತ್ತ ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಏಕಾಂಗಿ ಹೋರಾಟ ನೀಡಿದರು. ಗಪ್ಟಿಲ್ 51 ರನ್ ಕಾಣಿಕೆ ನೀಡಿದರು. ಅಕ್ಸರ್ ಪಟೇಲ್ ಮೋಡಿಯಿಂದ ನ್ಯೂಜಿಲೆಂಡ್ 111 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 73 ರನ್ ಗೆಲುವು ದಾಖಲಿಸಿತು.
ಜೈಪುರದಲ್ಲಿ ನಡೆದ ಮೊದಲ ಟಿ20ಯಲ್ಲಿ ಟೀಂ ಇಂಡಿಯಾ 5 ವಿಕೆಟ್ ಗೆಲುವು ಸಾಧಿಸಿತ್ತು. ರಾಂಚಿಯಲ್ಲಿ ನಡೆದ 2ನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು ಕಂಡಿತ್ತು.