ಐರ್ಲೆಂಡ್ ವಿರುದ್ದ 2 ಸೋಲು, ಇಂಗ್ಲೆಂಡ್ ವಿರುದ್ದ ಮೊದಲ ಪಂದ್ಯ ಮಳೆಯಿಂದ ರದ್ದು. ಇದರ ನಡುವೆ ಟಿ20 ತಂಡದಿಂದ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ಸೂರ್ಯಕುಮಾರ್ ಹೇಳಿದ್ದೇನು?
ಮುಂಬೈ (ಜು.04) ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯ ಆಡಲು ಸಜ್ಜಾಗಿದೆ. ವೈಭವ್ ಸೂರ್ಯವಂಶಿ ಕಣಕ್ಕಿಳಿಯುತ್ತಾರಾ ಅನ್ನೋ ಪ್ರಶ್ನೆಗಳು ಚರ್ಚೆಯಾಗುತ್ತಿದೆ. ಇದರ ನಡುವೆ ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ತಂಡದಿಂದ ಹೊರಬಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಕುರಿತು ಪ್ರತಿಕ್ರಿಯಿಸಿದ್ದಾರೆ. ಸೂರ್ಯಕುಮಾರ್ ನೀಡಿದ ಉತ್ತರ ವೈರಲ್ ಆಗಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಯಾದವ್ ಉತ್ತರ
ಒಂದೆಡೆ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧದ 2 ಪಂದ್ಯ ಸೋತು ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ವೈಭವ್ ಸೂರ್ಯವಂಶಿಗೆ ಅವಕಾಶ ಕುರಿತು ಒತ್ತಡ ಹೆಚ್ಚಾಗುತ್ತಿದೆ. ಇದರ ನಡುವೆ ಕಾರ್ಯಕ್ರಮದಲ್ಲಿ ಪಾಪರಾಜಿಗಳು ಸೂರ್ಯಕುಮಾರ್ ಯಾದವ್ ಆಗಮಿಸುತ್ತಿದ್ದಂತೆ, ನಿಮ್ಮನ್ನು ಟೀಂ ಇಂಡಿಯಾ ಟಿ20 ತಂಡದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, ನನ್ನನ್ನು? ಉತ್ತಮವಾಗಿ ನಡೆಯುತ್ತಿದೆಯಲ್ವಾ ಎಂದು ಸೂರ್ಯಕುಮಾರ್ ಮರು ಪ್ರಶ್ನೆ ಹಾಕಿ ತೆರಳಿದ್ದಾರೆ.
ತಂಡದ ನಾಯಕತ್ವ, ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ ಸೂರ್ಯಕುಮಾರ್ ಯಾದವ್ ಕ್ರೀಡಾ ಸ್ಪೂರ್ತಿಯನ್ನು ಎಲ್ಲರು ಕೊಂಡಾಡಿದ್ದಾರೆ. ನಾನು ಇಲ್ಲದಿದ್ದರೂ ಟೀಂ ಇಂಡಿಯಾ ಉತ್ತಮವಾಗಿ ಆಡುತ್ತಿದೆಯಲ್ವಾ ಎಂದು ಮರು ಪ್ರಶ್ನೆ ಹಾಕುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಾಸಿಟೀವ್ ಉತ್ತರದ ಮೂಲಕ ಗಮನಸೆಳೆದ ಸೂರ್ಯ
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಸತತ 2ನೇ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಆಯ್ಕೆ ಮಾಡಿದಾಗ ಹಲವರಿಗೆ ಅಚ್ಚರಿಯಾಗಿತ್ತು. ಟಿ20 ನಾಯಕತ್ವವನ್ನು ಶ್ರೇಯಸ್ ಅಯ್ಯರ್‌ಗೆ ನೀಡಲಾಗಿತ್ತ. ಇತ್ತ ಸೂರ್ಯಕುಮಾರ್ ಯಾದವ್ ನಾಯಕತ್ವ ಮಾತ್ರವಲ್ಲ, ತಂಡದಿಂದಲೂ ಹೊರಬಿದ್ದಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಪ್ರತಿ ಭಾರಿ ಪಾಸಿಟೀವ್ ಪ್ರತಿಕ್ರಿಯೆ ನೀಡಿದ್ದಾರೆ. ತಂಡಕ್ಕೆ ಆಯ್ಕೆಯಾಗಿಲ್ಲ, ನಾಯಕ ಸ್ಥಾನ, ತಂಡದಿಂದ ಹೊರಗೊಳಿದರೂ ಟೀಂ ಇಂಡಿಯಾ, ಆಯ್ಕೆ ಸಮಿತಿ, ಬಿಸಿಸಿಐ ಕುರಿತು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕನಿ ಬಡ್ತಿ ಪಡೆಯುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ಅಭಿನಂದನೆ ಸಲ್ಲಿಸಿ ಶುಭಕೋರಿದ್ದರು.
ಸೂರ್ಯಕುಮಾರ್ ಯಾದವ್ ಪ್ರತಿ ಬಾರಿಯೂ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಪ್ರಶ್ನೆಗಳಿಗೂ ವಿವಾದಿತ ಉತ್ತರ ನೀಡಿಲ್ಲ. ಇಷ್ಟೇ ಅಲ್ಲ ಟೀಂ ಇಂಡಿಯಾದ ಆತ್ಮವಿಶ್ವಾಸ ಕುಗ್ಗವಂತೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದೇ ಕಾರಣದಿಂದ ಸೂರ್ಯಕುಮಾರ್ ಮಾತುಗಳನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡುತ್ತಾರೆ.


