Suryakumar Yadav : ಸೂರ್ಯಕುಮಾರ್ ಯಾದವ್ 468 ದಿನಗಳ ನಂತ್ರ ಫಾರ್ಮ್ ಗೆ ಬಂದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್ ಗಳಿಸಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರ ಪತ್ನಿ.

ಮುಂದಿನ ತಿಂಗಳು ಆರಂಭವಾಗಲಿರುವ 2026 ರ ಟಿ20 ವಿಶ್ವಕಪ್ (T20 World Cup )ಗೆ ಮುನ್ನ ನಡೆದ ಭಾರತ - ನ್ಯೂಜಿಲ್ಯಾಂಡ್ ಡ್ರೆಸ್ ರಿಹರ್ಸಲ್ ಸರಣಿಯಲ್ಲಿ ಭಾರತ 2 -0 ಮುನ್ನಡೆ ಸಾಧಿಸಿದೆ. ಶುಕ್ರವಾರ ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ, ನ್ಯೂಜಿಲ್ಯಾಂಡನ್ನು ಏಳು ವಿಕೆಟ್ಗಳಿಂದ ಮಣಿಸಿದೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Surya kumar Yadav), ಫಾರ್ಮ್ ಗೆ ಮರಳಿದ್ದು, ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಸೂರ್ಯಕುಮಾರ್ ಫಾರ್ಮ್ ಗೆ ಬರಲು ಹೆಂಡ್ತಿ ಕಾರಣ 

ಒಬ್ಬ ಪುರುಷ ಯಶಸ್ಸಿನ ಹಿಂದೆ ಮಹಿಳೆ ಇರ್ತಾಳೆ ಎನ್ನುವ ಮಾತಿದೆ. ಆದ್ರೆ ಇದನ್ನು ಅನೇಕರು ನಂಬೋದಿಲ್ಲ. ಹೆಂಡ್ತಿ ಮಾತು ಕೇಳಿದ್ದೇ ತಪ್ಪಾಯ್ತು ಎನ್ನುವವರೇ ಹೆಚ್ಚು. ಒಂದ್ವೇಳೆ ಹೆಂಡ್ತಿ ಮಾತಿನಿಂದ ಯಶಸ್ಸು ಸಿಕ್ಕಿದ್ರೂ ಬಹುತೇಕ ಪುರುಷರು ಅದನ್ನು ಒಪ್ಪಿಕೊಳ್ಳೋದಿಲ್ಲ. ಆದ್ರೆ ಶುಕ್ರವಾರ ಫಾರ್ಮ್ ಗೆ ವಾಪಸ್ ಆಗಿ ಅಜೇಯ 82 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಮಾತ್ರ ತಮ್ಮ ಪತ್ನಿಯನ್ನು ಮನಸ್ಸು ಬಿಚ್ಚಿ ಹೊಗಳಿದ್ದಾರೆ. ಮತ್ತೆ ಫಾರ್ಮ್ ಗೆ ಬರಲು ಪತ್ನಿಯೇ ಕಾರಣ ಎಂದಿದ್ದಾರೆ. ಬಿಸಿಸಿಐ, ಸೂರ್ಯಕುಮಾರ್ ಯಾದವ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಸಿಸಿಎಲ್ ಗ್ರೌಂಡ್ ನಲ್ಲಿ ಮಗಳ ಹಾಡಿಗೆ ಸುದೀಪ್ ಸ್ಟೆಪ್ಸ್ , ಮೈದಾನದಲ್ಲಿ ಕಿಚ್ಚನ ಹವಾ

ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಕೆಲವೊಮ್ಮೆ, ನಾನು ಮನೆಗೆ ಹೋದಾಗ, ಮನೆಯಲ್ಲಿ ಒಬ್ಬ ಕೋಚ್ ಕುಳಿತಿರುತ್ತಾರೆ. ಅವರನ್ನು ನಾನು ಮದುವೆಯಾಗಿದ್ದೇನೆ. ಅವರು ನನಗೆ ಸಮಯ ತೆಗೆದುಕೊಳ್ಳುವಂತೆ ಹೇಳುತ್ತಲೇ ಇರುತ್ತಾರೆ. ಅವರು ನನ್ನನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರಿಗೆ ನನ್ನ ಮನಸ್ಸನ್ನು ತಿಳಿದಿದೆ. ಹಾಗಾಗಿ ನಾನು ಅವರ ಸಲಹೆಯನ್ನು ಪಾಲಿಸಿದೆ. ಎಚ್ಚರಿಕೆಯಿಂದ ಆಡಿದೆ. ನನ್ನ ಇನ್ನಿಂಗ್ಸ್ನಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುವ ಬಗ್ಗೆ ಯೋಚಿಸಿದೆ. ಕೊನೆಯ ಪಂದ್ಯದಲ್ಲಿ ಮತ್ತು ಈ ಪಂದ್ಯದಲ್ಲಿ ನಾನು ಅದನ್ನೇ ಮಾಡಿದ್ದೇನೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ, ಟೈಂ ಕೊಟ್ಟು ಆಟ ಆಡುವಂತೆ ಸಲಹೆ ನೀಡಿದ್ದರು. ಅದನ್ನು ಸೂರ್ಯಕುಮಾರ್ ಯಾದವ್ ಪಾಲಿಸಿದ್ದಾರೆ. ಜೊತೆಗೆ ಸಕ್ಸಸ್ ಕಂಡಿದ್ದಾರೆ.

ನೆಟ್ಸ್ ನಲ್ಲಿ ಎಷ್ಟೇ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ರೂ, ಮ್ಯಾಚ್ ನಲ್ಲಿ ಆಡಿದ ಹಾಗಲ್ಲ. ಮ್ಯಾಚ್ ನಲ್ಲಿ ರನ್ ಗಳಿಸುವವರೆಗೆ ಆತ್ಮವಿಶ್ವಾಸ ಬರೋದಿಲ್ಲ. ನನಗೆ ಎರಡು ಮೂರು ದಿನ ಟೈಂ ಸಿಕ್ಕಿತ್ತು. ಮನೆಗೆ ಬಂದೆ. ಸೋಶಿಯಲ್ ಮೀಡಿಯಾದಿಂದ ಸಂಪೂರ್ಣ ದೂರವಿದ್ದೆ. ಕಳೆದ ಮೂರು ವಾರಗಳಿಂದ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ದೆ ಅಂತ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಕಾಲೇಜಿನಲ್ಲಿ ದೇವಿಶಾ ಶೆಟ್ಟಿ ಡಾನ್ಸ್ ನೋಡಿ ಸೂರ್ಯಕುಮಾರ್ ಯಾದವ್ ಪ್ರೀತಿಗೆ ಬಿದ್ದಿದ್ದರು. ಮೇ, 2016ರಲ್ಲಿ ನಿಶ್ಚಿತಾರ್ಥ ಮಾಡ್ಕೊಂಡಿದ್ದ ಜೋಡಿ ಜುಲೈ 7, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆ. ಕಲೆಯನ್ನೇ ವೃತ್ತಿ ಮಾಡ್ಕೊಂಡಿದ್ದಾರೆ. ಉದ್ಯಮಿಯಾಗಿಯೂ ಕೆಲಸ ಮಾಡ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ದೇವಿಶಾ ಶೆಟ್ಟಿ ದಕ್ಷಿಣ ಕನ್ನಡದ ಜೊತೆ ನಂಟಿದೆ. ಹಾಗಾಗಿ ಆಗಾಗ ಸೂರ್ಯಕುಮಾರ್ ಯಾದವ್ ಜೊತೆ ದಕ್ಷಿಣ ಕನ್ನಡದ ದೇವಸ್ಥಾನಗಳಿಗೆ ಭೇಟಿ ನೀಡ್ತಿರುತ್ತಾರೆ.

ಆರ್‌ಸಿಬಿ ದೋಖಾ? ಹೊತ್ತು ಮೆರೆಸಿದ ಕನ್ನಡಿಗರಿಗೇ ಅನ್ಯಾಯ ಮಾಡಲು ಹೊರಟಿದೆ RCB!

ಇನ್ನು ನಿನ್ನೆ ನಡೆದ ಮ್ಯಾಚ್ ಬಗ್ಗೆ ಹೇಳೋದಾದ್ರೆ ನ್ಯೂಜಿಲೆಂಡ್ ಭಾರತಕ್ಕೆ 209 ರನ್ಗಳ ಗುರಿ ನೀಡಿತ್ತು. ಭಾರತ 16 ನೇ ಓವರ್ನಲ್ಲಿ ಗುರಿ ಮುಟ್ಟಲು ಯಶಸ್ವಿಯಾಯ್ತು. ಭಾರತೀಯ ಬ್ಯಾಟ್ಸ್ಮನ್ಗಳು ನ್ಯೂಜಿಲೆಂಡ್ ಬೌಲರ್ಗಳ ಬೆವರಿಳಿಸಿದ್ರು. ಸೂರ್ಯಕುಮಾರ್ ಯಾದವ್ 82 ರನ್ ಗಳಿಸಿದ್ರೆ ಇಶಾನ್ ಕಿಶನ್ 76 ರನ್ ಕಲೆ ಹಾಕಿದ್ದರು.

Scroll to load tweet…