ಸಿಸಿಎಲ್ ಗ್ರೌಂಡ್ ನಲ್ಲಿ ಮಗಳ ಹಾಡಿಗೆ ಸುದೀಪ್ ಸ್ಟೆಪ್ಸ್ , ಮೈದಾನದಲ್ಲಿ ಕಿಚ್ಚನ ಹವಾ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ccl)2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತನ್ನ ಅಬ್ಬರ ಮುಂದುವರೆಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಮಣಿಸಿ ಗೆಲುವಿನ ನಗೆ ಬೀರಿದೆ. ಮಧುರೈನಲ್ಲಿ ನಡೆದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಕಿಚ್ಚ ಸುದೀಪ್.

ಮಗಳ ಹಾಡಿಗೆ ಕಿಚ್ಚನ ಡಾನ್ಸ್
ಗ್ರೌಂಡ್ ಹೊರಗೆ ಕಿಚ್ಚ ಸುದೀಪ್ ಭರ್ಜರಿ ಡಾನ್ಸ್ ಮಾಡಿದ್ದಾರೆ. ಮಾರ್ಕ್ ಸಿನಿಮಾದ ಮಗಳೇ ಹಾಡಿರುವ ಐಟಂ ಸಾಂಗ್ ಗೆ ಸುದೀಪ್ ಸ್ಟೆಪ್ ಹಾಕಿದ್ದಾರೆ. ಸಾನ್ವಿ ಸುದೀಪ್ ಕೂಡ ಮೈದಾನಕ್ಕೆ ಬಂದಿದ್ದು, ಪಂದ್ಯದ ಕೊನೆಯವರೆಗೂ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಒಂದ್ಕಡೆ ಅವರು ಮಸ್ತ್ ಮಲೈಕಾ ಹಾಡನ್ನು ಹಾಡ್ತಿದ್ರೆ ಸುದೀಪ್ ಡಾನ್ಸ್ ಮಾಡ್ತಿದ್ರು.
ಸೈಕೋ ಸೈತಾನ್
ಬರೀ ಮಸ್ತ್ ಮಲೈಕಾ ಹಾಡಿಗೆ ಮಾತ್ರವಲ್ಲ ಸುದೀಪ್, ಸೈಕೋ ಸೈತಾನ್ ಹಾಡಿಗೂ ಡಾನ್ಸ್ ಮಾಡಿದ್ದಾರೆ. ದಾದಾ ಯಾರ್ ಗೊತ್ತಾ ಹಾಡಿಗೆ, ಮಂಜುನಾಥ್, ಕಾರ್ತಿಕ್ ಜಯರಾಮ್ ಜೊತೆ ಸುದೀಪ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.
ಮೈದಾನದಲ್ಲಿ ಕಿಚ್ಚನ ಹವಾ
ತಂಡದ ಪ್ರತಿಯೊಬ್ಬ ಆಟಗಾರರನ್ನೂ ಸುದೀಪ್ ಪ್ರೋತ್ಸಾಹಿಸ್ತಾರೆ. ಆಟ ಶುರುವಾದ ಆರಂಭದಿಂದ ಕೊನೆಯವರೆಗೂ ಸುದೀಪ್ ಸ್ಟ್ರೆಂಥ್ ಒಂದೇ ರೀತಿ ಇರುತ್ತೆ. ಅಭಿನಯ ಚಕ್ರವರ್ತಿ ಸುದೀಪ್ ಬರೀ ನಟನೆ ಮಾತ್ರವಲ್ಲ ಮೈದಾನದಲ್ಲಿ ಅಧ್ಬುತ ಆಟ ಬಲ್ಲವರು. ಉತ್ತಮ ಕ್ಯಾಪ್ಟನ್ ಹೇಗಿರಬೇಕು ಎಂಬುದನ್ನು ಸುದೀಪ್ ನೋಡಿ ಕಲಿಯಬೇಕು.
ಗೆಲುವು ಸಂಭ್ರಮಿಸಿದ ಸುದೀಪ್ ಸಾನ್ವಿ
ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಈವರೆಗೆ ಎರಡು ಪಂದ್ಯಗಳನ್ನು ಆಡಿದೆ. ಎರಡೂ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಜನವರಿ 23 ರಂದು ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ದೋಜರ್ಸ್ ಮಣಿಸಿದೆ. ಗೆಲುವನ್ನು ಕಿಚ್ಚ ಸುದೀಪ್ ಮಗಳು ಸಾನ್ವಿ ಜೊತೆ ಸಂಭ್ರಮಿಸಿದ್ದಾರೆ.
9 ವಿಕೆಟ್ ಗಳ ಭರ್ಜರಿ ಜಯ
ಕರ್ನಾಟಕ ಬುಲ್ಡೋಜರ್ ತನ್ನ ಮೊದಲ ಪಂದ್ಯವನ್ನು ಪಂಜಾಬ್ ದಿ ಶೇರ್ ಜೊತೆ ಆಡಿತ್ತು. 31 ರನ್ ಗಳ ಜಯ ಸಾಧಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. ತೆಲುಗು ವಾರಿಯರ್ಸ್ ನೀಡಿದ 227 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕರ್ನಾಟಕ ಬುಲ್ಡೋಜರ್ಸ್ ಸುಲಭ ಜಯ ಸಾಧಿಸಿದೆ. ಇನ್ನೂ ಎರಡು ಓವರ್ ನಾಲ್ಕು ಬಾಲ್ ಬಾಕಿ ಇರುವಾಗ್ಲೇ ಕರ್ನಾಟಕ ಬುಲ್ದೋಜರ್ಸ್ ಗೆಲುವು ಸಾಧಿಸಿತ್ತು. ರಾಜೀವ್ ಶತಕ ತಂಡಕ್ಕೆ ದೊಡ್ಡ ಬಲ ನೀಡಿತ್ತು.
ಕೊನೆ ಲೀಗ್ ಪಂದ್ಯ ಎಂದು ?
ಕರ್ನಾಟಕ ಬುಲ್ಡೋಜರ್ಸ್ ಕೊನೆ ಲೀಗ್ ಪಂದ್ಯ ಭಾನುವಾರ ನಡೆಯಲಿದೆ. ಭೋಜ್ಪುರಿ ದಬಾಂಗ್ಸ್ ಜೊತೆ ಕರ್ನಾಟಕ ಬುಲ್ದೋಜರ್ಸ್ ಸೆಣೆಸಲಿದೆ. ಎರಡು ಪಂದ್ಯ ಗೆದ್ದು ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಕರ್ನಾಟಕ ಬುಲ್ಡೋಜರ್ಸ್ ಗೆ ಮೂರೂ ಪಂದ್ಯ ಗೆದ್ದಿರುವ ಬೆಂಗಾಲ್ ಟೈಗರ್ಸ್ ಟಫ್ ಫೈಟ್ ನೀಡುವ ಸಾಧ್ಯತೆ ಇದೆ.
ಗೆದ್ದೇ ಗೆಲ್ಲುವ ಛಲ
ಎರಡು ಬಾರಿ ಕಿಚ್ಚ ಸುದೀಪ್ ತಂಡ ಸಿಸಿಎಲ್ ಕಪ್ ಎತ್ತಿ ಹಿಡಿದಿದೆ. ಆದ್ರೆ ಕೆಲ ವರ್ಷಗಳಿಂದ ಕಪ್ ನಮ್ಮ ಕೈಸೇರಿಲ್ಲ. ಈ ಬಾರಿ ಕಪ್ ಗೆಲ್ಲುವ ಮಹದಾಸೆಯಲ್ಲಿ ತಂಡವಿದೆ.
ಎಲ್ಲಿ ನೋಡ್ಬಹುದು?
ಸಿಸಿಎಲ್ ಪಂದ್ಯಗಳನ್ನು ವೀಕ್ಷಕರು ಜಿಯೋ ಹಾಟ್ಸ್ಟಾರ್ ನಲ್ಲಿ ವೀಕ್ಷಣೆ ಮಾಡಬಹುದು. ಸೆಮಿ ಫೈನಲ್ ಒನ್ ಮತ್ತು 2 ಹಾಗೂ ಫೈನಲ್ ಪಂದ್ಯ ಹೈದ್ರಾಬಾದ್ ನಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

