ಸುರೇಶ್ ರೈನಾ ವಿರಾಟ್ ಕೊಹ್ಲಿ ಜೊತೆಗಿನ ಆಟದ ಅನುಭವ ಹಂಚಿಕೊಂಡಿದ್ದಾರೆ. ಎದುರಾಳಿ ತಂಡಗಳು ಕೊಹ್ಲಿಯನ್ನು ಕೆಣಕದಂತೆ ಎಚ್ಚರಿಕೆ ನೀಡುತ್ತಿದ್ದರಂತೆ. ರೈನಾ-ಕೊಹ್ಲಿ ಜೋಡಿ ವಿಭಿನ್ನ; ಕೆಣಕಿದರೆ ತಿರುಗೇಟು ನೀಡಿ ಗೆಲ್ಲುವವರೆಗೂ ಬಿಡುತ್ತಿರಲಿಲ್ಲವಂತೆ. ಇಬ್ಬರ ಪಾಲುದಾರಿಕೆ ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಎಂದಿದ್ದಾರೆ.
ನವದೆಹಲಿ: ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಜೊತೆಯಾಗಿ ಟೀಂ ಇಂಡಿಯಾಗಾಗಿ ಹಲವು ಪಂದ್ಯಗಳಲ್ಲಿ ಆಟವಾಡಿದ್ದಾರೆ. ಈ ಇಬ್ಬರು ಆಟಗಾರರು ಪರಸ್ಪರ ವೃತ್ತಿಜೀವನದ ಜೊತೆ ಖಾಸಗಿ ಬದುಕಿನಲ್ಲಿಯೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸುರೇಶ್ ರೈನಾ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವಿರಾಟ್ ಕೊಹ್ಲಿ ಅಭಿಮಾನಿಗಳು ಆಶ್ವರ್ಯ ವ್ಯಕ್ತಪಡಿಸುತ್ತಿದ್ದು ಮತ್ತು ಖುಷಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಕುರಿತಾದ ಹೊಸ ವಿಷಯವೊಂದು ಬಹಿರಂಗಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಫಿಲ್ಮಿಗ್ಯಾನ್‌ಗೆ ನೀಡಿದ ಸಂದರ್ಶನ ವೈರಲ್ ಆಗಿದೆ. ಎದುರಾಳಿ ತಂಡದಲ್ಲಿ ವಿರಾಟ್ ಕೊಹ್ಲಿಗಾಗಿಯೇ ಪಂದ್ಯಕ್ಕೂ ಮುನ್ನವೇ ವಿಶೇಷ ಸಭೆಗಳು ನಡೆಯುತ್ತವೆ. ಆ ಸಭೆಗಳಲ್ಲಿ ಪಂದ್ಯದ ವೇಳೆ ಯಾವುದೇ ಕಾರಣಕ್ಕೂ ವಿರಾಟ್ ಕೊಹ್ಲಿ ಅವರನ್ನು ಚೇಷ್ಠೆ ಮಾಡಬೇಡಿ.ಒಂದು ವೇಳೆ ಚೇಷ್ಠೆ ಅಥವಾ ಕೀಟಲೆ ಮಾಡಿದ್ರೆ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ ಎಂಬ ಮಾಹಿತಿಯನ್ನು ಸುರೇಶ್ ರೈನಾ ಹಂಚಿಕೊಂಡಿದ್ದಾರೆ.
ನಮ್ಮಿಬ್ಬರ ಜೋಡಿ ತುಂಬಾ ವಿಭಿನ್ನ
ವಿಶ್ವ ಕ್ರಿಕೆಟ್‌ನಲ್ಲಿ ನನ್ನ ಹೆಚ್ಚು ಪಾರ್ಟನರ್‌ಶಿಪ್ ವಿರಾಟ್ ಕೊಹ್ಲಿ ಜೊತೆಗಿದೆ. ಹಾಗಾಗಿ ಆಟದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮನಸ್ಥಿತಿ ಹೇಗಿರುತ್ತೆ ಎಂದು ನನಗೆ ಗೊತ್ತಿದೆ. ನಾನು ಸ್ವಲ್ಪ ಶಾಂತ ಸ್ವಭಾವದ ಆಟಗಾರ. ಆದ್ರೆ ವಿರಾಟ್ ಕೊಹ್ಲಿ ಹಾಗಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ. ನಾನು ಪಂಜಾಬಿಯಾಗಿರೋದರಿಂದ ವಿರಾಟ್ ಕೊಹ್ಲಿ ಜೊತೆ ಆಡುವಾಗ ನಮ್ಮಿಬ್ಬರ ಜೋಡಿ ವಿಭಿನ್ನವಾಗಿರುತ್ತದೆ ಎಂದು ಸುರೇಶ್ ರೈನಾ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನು ಮತ್ತು ವಿರಾಟ್ ಕೊಹ್ಲಿ ಜೊತೆಯಾಗಿ ಆಡುವಾಗ ಎದುರಾಳಿ ತಂಡದ ಆಟಗಾರರು ನಮ್ಮನ್ನು ಕೀಟಲೆ ಮಾಡಿದರೆ ಅದಕ್ಕೆ ತಿರುಗೇಟು ನೀಡುವವರೆಗೂ ನಾವು ಸುಮ್ಮನಿರುತ್ತಿರಲಿಲ್ಲ. ಆ ಪಂದ್ಯದ ಗೆಲುವನ್ನು ನಮ್ಮದಾಗಿಸಿಕೊಳ್ಳುವರೆಗೂ ನಾವಿಬ್ಬರು ಬ್ಯಾಟ್ ಬೀಸುತ್ತಿದ್ದೇವು ಎಂದು ಹಳೆಯ ದಿನಗಳನ್ನು ಸುರೇಶ್ ರೈನಾ ನೆನಪು ಮಾಡಿಕೊಂಡಿದ್ದರು.
ಇದನ್ನೂ ಓದಿ: ರಾಹುಲ್ ಎದುರೇ ಕಾಂತಾರ ಸ್ಟೈಲ್ ರಿಕ್ರಿಯೇಟ್ ಮಾಡಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
ಕೆಎಲ್ ರಾಹುಲ್‌ನ್ನು ಬಿಡದ ಕೊಹ್ಲಿ
ಈ ವರ್ಷದ ಐಪಿಎಲ್ ಪಂದ್ಯದ ವೇಳೆ ಬೆಂಗಳೂರಿನಲ್ಲಿ ಪಡೆದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ದೆಹಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸಿತ್ತು. ಪಂದ್ಯದ ಗೆಲುವಿನ ಬಳಿಕ ಕೆಎಲ್ ರಾಹುಲ್, ಕಾಂತಾರ ಶೈಲಿಯಲ್ಲಿ ಬ್ಯಾಟ್‌ನಿಂದ ವೃತ್ತ ಎಳೆದು ಈ ಮೈದಾನ ನನ್ನದು ಎಂದು ಸನ್ನೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ದೆಹಲಿ ವಿರುದ್ಧ ಬೆಂಗಳೂರು ಗೆದ್ದಿತ್ತು. ಈ ವೇಳೆ ನಾನು ವೃತ್ತ ಎಳೆಯಬಲ್ಲೆವು ಎಂದು ಕೆಎಲ್ ರಾಹುಲ್‌ಗೆ ಟಾಂಗ್ ನೀಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ಔಟಾಗಿದ್ದರು. ಕೃನಾಲ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಜೊತೆಯಾಟ ಪಂದ್ಯದ ಗೆಲುವಿಗೆ ಕಾರಣವಾಗಿತ್ತು.
ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ಪಂಜಾಬ್ ಸೋತ ತಕ್ಷಣ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಶ್ರೇಯಸ್ ಅಯ್ಯರ್ ವಿರುದ್ಧ ಸನ್ನೆ ಮಾಡಿದ್ದರು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಐಪಿಎಲ್ 2025ರ ವಿರಾಟ್ ಕೊಹ್ಲಿಯ ಟಾಪ್ 3 ಅಗ್ರೆಸಿವ್ ವಿಡಿಯೋ ವೈರಲ್!


