ನಟಿ ಅವನೀತ್‌ ಕೌರ್‌ ಅವರ ಫ್ಯಾನ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರಕ್ಕೆ ವಿರಾಟ್‌ ಕೊಹ್ಲಿ ಆಕಸ್ಮಿಕವಾಗಿ ಲೈಕ್ ಒತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ ಅನ್ನು ದೂಷಿಸಿದ ಕೊಹ್ಲಿ, ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಮೇ.2): ನಟಿ ಅವನೀತ್‌ ಕೌರ್‌ ಅವರ ಫ್ಯಾನ್‌ ಪೇಜ್‌ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರವೊಂದಕ್ಕೆ ವಿರಾಟ್‌ ಕೊಹ್ಲಿ ಲೈಕ್‌ ಒತ್ತಿದ್ದು ಸುದ್ದಿಯಾಗಿತ್ತು. ಈ ಬಗ್ಗೆ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಶುಕ್ರವಾರ ತಮ್ಮ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ಅಧಿಕೃತ ಸ್ಪಷ್ಟೀಕರಣವನ್ನು ನೀಡಿದ್ದಾರೆ.ಅವರು 'ಲೈಕ್'ಗೆ ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ ಅನ್ನು ದೂಷಣೆ ಮಾಡಿದ್ದು, "ಇದರ ಹಿಂದೆ ಯಾವುದೇ ಉದ್ದೇಶವಿಲ್ಲ" ಎಂದು ತಿಳಿಸಿದ್ದಾರೆ.

ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಇದನ್ನು ಬರೆದುಕೊಂಡಿದ್ದಾರೆ. "ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ನನ್ನ ಲೈಕ್‌ಅನ್ನು ಇರಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಕೊಹ್ಲಿಯ ಈ ಆಕ್ಟಿವಿಟಿ ಅಭಿಮಾನಿಗಳ ಹಾಗೂ ನೆಟ್ಟಿಗರ ಅಚ್ಚರಿಗೆ ಕಾರಣವಾಗಿತ್ತು. ಅವನೀತ್‌ ಕೌರ್‌ ಅವರ ಫ್ಯಾನ್‌ಪೇಜ್‌ ಅವನೀತ್‌ ಅವರ ಹಲವಾರು ಚಿತ್ರಗಳನ್ನು ಹಂಚಿಕೊಂಡ ಪೋಸ್ಟ್‌ಗೆ ವಿರಾಟ್‌ ಕೊಹ್ಲಿ ಲೈಕ್‌ ಒತ್ತಿದ್ದರು.
ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರ ಹುಟ್ಟುಹಬ್ಬದ (ಮೇ. 1) ದಿನ, ಆಕೆಗೆ ಹೃದಯಸ್ಪರ್ಶಿ ವಿಶ್‌ಗಳನ್ನು ಮಾಡಿದ ಬಳಿಕ ವಿರಾಟ್‌ ಕೊಹ್ಲಿ ಅವನೀತ್‌ ಕೌರ್‌ಗೆ ಲೈಕ್‌ ಒತ್ತಿದ್ದು, ಮೀಮ್ಸ್‌ಗಳಿಗೆ ಕಾರಣವಾಗಿತ್ತು. ಅಲ್ಲದೆ, ವಿರಾಟ್‌ ಕೊಹ್ಲಿ ಹೀಗೇ ಮಾಡಿದ್ದು ಏಕೆ ಎನ್ನುವುದು ಚರ್ಚೆಗೆ ಕಾರಣವಾಗಿತ್ತು.

ಕ್ರಿಕೆಟಿಗ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅವನೀತ್ ಅವರನ್ನು ಫಾಲೋ ಮಾಡಿಲ್ಲ, ಆದರೆ ಅವರ ಫೋಟೋಗಳನ್ನು ಲೈಕ್ ಮಾಡಿದ್ದಾರೆ, ಅದು ಕೂಡ ಅಭಿಮಾನಿ ಪುಟದಲ್ಲಿ ಹಂಚಿಕೊಂಡ ಫೋಟೋಗಳು ಎಂದು ಅಭಿಮಾನಿಗಳು ಗಮನಸೆಳೆದಿದ್ದಾರೆ. ಈಗ ಕೊಹ್ಲಿ ಈ ವಿಚಾರದ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಮುಂದಾಗಬಹುದಾದ ಊಹೆಗಳ ಬಗ್ಗೆ ಅಂತ್ಯ ಹಾಡಿದ್ದಾರೆ.

ಇದರ ನಡುವೆ ಗುರುವಾರ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಜೊತೆ ಇರುವ ಚಿತ್ರಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ಪೇಜ್‌ನಲ್ಲಿ ಹಂಚಿಕೊಂಡು ಭಾವುಕ ನೋಟ್‌ ಬರೆದು, ಆಕೆಗೆ ಜನ್ಮದಿನದ ವಿಶ್‌ ಮಾಡಿದ್ದರು."ನನ್ನ ಆತ್ಮೀಯ ಗೆಳೆತಿ, ನನ್ನ ಜೀವನ ಸಂಗಾತಿ, ನನ್ನ ಸುರಕ್ಷಿತ ಸ್ಥಳ, ನನ್ನ ಆತ್ಮೀಯ ಅರ್ಧಾಂಗಿ, ನನ್ನ ಎಲ್ಲವೂ. ನೀವು ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕ ಬೆಳಕು. ನಾವು ಪ್ರತಿದಿನ ನಿನ್ನನ್ನು ಹೆಚ್ಚು ಪ್ರೀತಿಸುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್‌," ಎಂದು ಅವರು ಬರೆದಿದ್ದರು.