ಭಾರತ ವಿರುದ್ಧ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಪಂದ್ಯದ ಗತಿ ಬದಲಿಸುವಂತೆ ತಸ್‌ಬ್ಹಿ ಹಿಡಿದು ಪ್ರಾರ್ಥಿಸಿದ್ದಾರೆ. ಈ ವೇಳೆ ಸುರೇಶ್ ರೈನಾ ಕೊಟ್ಟ ಕೌಂಟರ್‌ಗೆ ಪಾಕಿಸ್ತಾನ ನಾಯಕ ಹೈರಾಣಾಗಿದ್ದಾರೆ. ಅಷ್ಟಕ್ಕೂ ಪಂದ್ಯದ ನಡುವೆ ನಡೆದಿದ್ದೇನು?
ದುಬೈ(ಫೆ.24) ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಪಾಕಿಸ್ತಾನ ವಿರುದ್ಧ ಅಭಿಮಾನಿಗಳು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಭಾರತದ ವಿರುದ್ಧದ ಸೋಲಿನಿಂದ ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಪಯಣ ಕೂಡ ಬಹುತೇಕ ಅಂತ್ಯಗೊಂಡಿದೆ. ಪಂದ್ಯದ ಬಳಿಕ ಟ್ರೋಲ್, ಟೀಕೆ ಸಾಮಾನ್ಯ. ಆದರೆ ಇಂಡೋ ಪಾಕ್ ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಟ್ರೋಲ್ ಆದ ಘಟನೆ ನಡೆದಿದೆ. ಪಾಕಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ರನ್ ಗಳಿಸಲು ತಿಣುಕಾಡುತ್ತಿತ್ತು. ಈ ವೇಳೆ ರಿಜ್ವಾನ್ ಮುಸ್ಲಿಮರು ಪ್ರಾರ್ಥಿಸುವ ತಸ್‌ಬ್ಹಿ ಮಣಿಗಳನ್ನು ಹಿಡಿದು ಪ್ರಾರ್ಥನೆ ಆರಂಭಿಸಿದ್ದಾರೆ. ಮೈದಾನದ ಪರದೆಯಲ್ಲಿ ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ ಕಮೆಂಟರಿ ನೀಡುತ್ತಿದ್ದ ಸುರೇಶ್ ರೈನಾ ಕೌಂಟರ್ ಕೊಟ್ಟಿದ್ದಾರೆ. ಈ ಕೌಂಟರ್‌ನಿಂದ ರಿಜ್ವಾನ್ ಮತ್ತೆ ಟ್ರೋಲ್ ಆಗಿದ್ದಾರೆ.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ರನ್ ಗಳಿಸಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾ ಕರಾರುವಕ್ ದಾಳಿಗೆ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿತು. ಒಂದೊಂದು ರನ್ ಗಳಿಸುವುದು ಪ್ರಯಾಸದ ಕೆಲಸವಾಗಿ ಪರಿಣಮಿಸಿತು. ಇದರ ಜೊತೆಗೆ ಟೀಂ ಇಂಡಿಯಾ ವಿಕೆಟ್ ಕಬಳಿಸುತ್ತಾ, ಪಾಕಿಸ್ತಾನ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು.
ಸಚಿನ್ ದಾಖಲೆ ಬ್ರೇಕ್, ಪಾಕಿಸ್ತಾನಕ್ಕೆ ಸೋಲಿನ ಶಾಕ್; ಕೊಹ್ಲಿ ಸೆಂಚುರಿ ರೆಕಾರ್ಡ್ ಲಿಸ್ಟ್
ಪಾಕಿಸ್ತಾನ ತಿಣುಕಾಟ ಆರಂಭಗೊಳ್ಳುತ್ತಿದ್ದಂತೆ ಪಂದ್ಯದ ಗತಿ ಬದಲಿಸುವಂತೆ ನಾಯಕ ಮೊಹಮ್ಮದ್ ರಿಜ್ವಾನ್ ದೇವರ ಮೊರೆ ಹೋಗಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಾಕಿಸ್ತಾನ ಬ್ಯಾಟಿಂಗ್ ವೀಕ್ಷಿಸುತ್ತಿದ್ದ ರಿಜ್ವಾನ್, ಮುಸ್ಲಿಮರು ಪ್ರಾರ್ಥನೆ ವೇಳೆ ಬಳಸುವ ತಸ್‌ಬ್ಹಿ ಸರ ಹಿಡಿದು ಪ್ರಾರ್ಥನೆ ಆರಂಭಿಸಿದ್ದಾರೆ. ವಿಶೇಷವಾಗಿ ಪರಿಸ್ಥಿತಿ ಬದಲಿಸುವಂತೆ, ಸಂಕಷ್ಟದಿಂದ ಪಾರುಮಾಡುವಂತೆ ತಸ್‌ಬ್ಹೀ ಹಿಡಿದು ಪ್ರಾರ್ಥನೆ ಸಲ್ಲಿಸುತ್ತಾರೆ. ಇದರಂತೆ ರಿಜ್ವಾನ್ ಕೂಡ ಪ್ರಾರ್ಥನೆ ಆರಂಭಿಸಿದ್ದಾರೆ.
ಇದೇ ವೇಳೆ ಕಮೆಂಟರಿ ನೀಡುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಈ ಕುರಿತು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ತಂಡದ ಪರಿಸ್ಥಿತಿ ಬದಲಿಸುವಂತೆ ರಿಜ್ವಾನ್ ಪಾರ್ಥಿಸುತ್ತಿದ್ದಾರೆ. ಆದರೆ ಇತ್ತ ಭಾರತದ ನಾಯಕ ರೋಹಿತ್ ಶರ್ಮಾ ಮಹಾಮೃತ್ಯಂಜಯ ಮಂತ್ರ ಪಠಿಸುತ್ತಿದ್ದಾರೆ ಎಂದು ಕೌಂಟರ್ ನೀಡಿದ್ದಾರೆ.
ಸುರೇಶ್ ರೈನಾ ಕೌಂಟರ್ ನೀಡುತ್ತಿದ್ದಂತೆ ಮೊಹಮ್ಮದ್ ಶಮಿ ಎಸೆದ ಎಸೆತ ಡಾಟ್ ಬಾಲ್ ಆಗಿದೆ. ಹೀಗಾಗಿ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಲವರು ಕಮೆಂಟ್ ಮಾಡುತ್ತಿದ್ದಾರೆ. ಮಹಾಮೃತ್ಯಂಜಯ ಮಂತ್ರ ಗೆದ್ದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪಾರ್ಟ್ ಟೈಮ್ ಕ್ರಿಕೆಟಿಗರಾಗಿ ಫುಲ್ ಟೈಮ್ ಪ್ರಾರ್ಥನೆಯಲ್ಲಿ ತೊಡಗಿದರೆ ಹೀಗೆ ಆಗುತ್ತೆ ಎಂದು ಒಂದಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಸಿಡಿಸಿತ್ತು. ಭಾರತದ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ ಆಲೌಟ್ ಹಿನ್ನಡೆ ಅನುಭವಿಸಿತ್ತು. ಚೇಸಿಂಗ್ ಮಾಡಿದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಭಾರತ ಸತತ 2 ಪಂದ್ಯ ಗೆದ್ದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ಆತಿಥೇಯ ಪಾಕಿಸ್ತಾನ ಸತತ 2 ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.
ಪಾಕಿಸ್ತಾನ ಇಡೀ ತಂಡದ ಸ್ಯಾಲರಿಗಿಂತ ದುಬಾರಿ ಬೆಲೆಯ ವಾಚ್ ಕಟ್ಟಿ ಆಡಿದ ಪಾಂಡ್ಯ, ಬೆಲೆ ಎಷ್ಟು?
