ಪಾಕಿಸ್ತಾನ ಇಡೀ ತಂಡದ ವೇತನಕ್ಕಿಂತ ದುಬಾರಿಯಾದ ವಾಚ್ ಕಟ್ಟಿ ಹಾರ್ದಿಕ್ ಪಾಂಡ್ಯ ಆಡಿದ್ದಾರೆ. ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಟ್ಟಿದ್ದ ವಾಚ್ ಬೆಲೆ ಎಷ್ಟು ಗೊತ್ತಾ?

ದುಬೈ(ಫೆ.23) ಪಾಕಿಸ್ತಾನ ವಿರುದ್ಧದ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ. ಗಲ್ಲಿ ಗಲ್ಲಿಯಲ್ಲಿ ಸಂಭ್ರಮ ಜೋರಾಗುತ್ತಿದೆ. ಪಾಕಿಸ್ತಾನ ತಂಡವನ್ನು ಭಾರತ ನಿರಾಯಾಸವಾಗಿ ಬಗ್ಗು ಬಡಿದಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಬ್ಯಾಟಿಂಗ್‌ನಲ್ಲಿ ಎಡವಿದ್ದಾರೆ. ಪಾಕಿಸ್ತಾನ ವಿರುದ್ದ ಹಾರ್ದಿಕ್ ಪಾಂಡ್ಯ ದುಬಾರಿ ವಾಚ್ ಕಟ್ಟಿ ಆಡಿದ್ದರು. ಇದರ ಬೆಲೆ ಪಾಕಿಸ್ತಾನ ಇಡೀ ತಂಡದ ವೇತನಕ್ಕಿಂತ ದುಬಾರಿಯಾಗಿದೆ.

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರಿಚಾರ್ಡ್ ಮಿಲೆ ಬ್ರಾಂಡೆಡ್ ವಾಚ್ ಕಟ್ಟಿ ಕಣಕ್ಕಿಳಿದಿದ್ದರು. ರಿಚರ್ಡ್ ಮಿಲೆ ವಾಚ್‌ನಲ್ಲಿ ಹಲವು ಮಾದರಿ ಇವೆ. ಈ ಪೈಕಿ ಹಾರ್ದಿಕ್ ಪಾಂಡ್ಯ ಕಟ್ಟಿದ್ದು ಲಿಮಿಟೆಡ್ ಎಡಿಶನ್ ವಾಚ್. ಇದು ವಿಶ್ವದಲ್ಲೇ ಕೇವಲ 50 ವಾಚ್ ಮಾತ್ರ ಉತ್ಪಾದನೆ ಮಾಡಲಾಗಿದೆ. ಹೌದು, ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲೆ ಕ್ಯಾಲಿಬರ್ CRMA7 ವಾಚ್ ಕಟ್ಟಿ ಕಣಕ್ಕಿಳಿದಿದ್ದರು. ಇದರ ಬೆಲೆ ಬರೋಬ್ಬರಿ $300,000(ಅಮೆರಿಕನ್ ಡಾಲರ್). ಭಾರತೀಯ ರೂಪಾಯಿಗಳಲ್ಲಿ 2.59 ಕೋಟಿ ರೂಪಾಯಿ.

ಸಚಿನ್ ದಾಖಲೆ ಬ್ರೇಕ್, ಪಾಕಿಸ್ತಾನಕ್ಕೆ ಸೋಲಿನ ಶಾಕ್; ಕೊಹ್ಲಿ ಸೆಂಚುರಿ ರೆಕಾರ್ಡ್ ಲಿಸ್ಟ್

ಹಾರ್ದಿಕ್ ಪಾಂಡ್ಯ ಕೈಗೆ ಕಟ್ಟಿದ ವಾಚ್ ಬೆಲೆ, ಪಾಕಿಸ್ತಾನದ ಇಡೀ ತಂಡ ವೇತನಕ್ಕಿಂತ ದುಬಾರಿಯಾಗಿದೆ. ಪಾಕಿಸ್ತಾನದ ಎ ಗ್ರೇಡ್ ಆಟಗಾರನ ತಿಂಗಳ ವೇತನ 4.5 ಮಿಲಿಯನ್ ಪಾಕಿಸ್ತಾನ ರೂಪಾಯಿ. ಇದು ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 13.95 ಲಕ್ಷ ರೂಪಾಯಿ. ಪಾಕಿಸ್ತಾನದ ತಂಡದಲ್ಲಿರುವ ಬಾಬರ್ ಅಜಮ್, ಶಹೀನ್ ಅಫ್ರಿದಿ ಹಾಗೂ ಮೊಹಮ್ಮದ್ ರಿಜ್ವಾನ್ ಮಾತ್ರ ಎ ಗ್ರೇಡ್ ಆಟಗಾರರಾಗಿದ್ದಾರೆ. ಇನ್ನು ಬಿ ಗ್ರೇಡ್ ಆಟದಾರರ ತಿಂಗಳ ವೇತನ 4.64 ಲಕ್ಷ ರೂಪಾಯಿ. ಹೀಗಾಗಿ ಪಾಕಿಸ್ತಾನದ ತಂಡದ 11 ಆಟಗಾರರ ವೇತನಕ್ಕಿಂತ ದುಬಾರಿ ವಾಚ್ ಕಟ್ಟಿ ಹಾರ್ದಿಕ್ ಪಾಂಡ್ಯ ಪಂದ್ಯ ಆಡಿದ್ದಾರೆ.

2.59 ಕೋಟಿ ರೂಪಾಯಿ ಮೌಲ್ಯದ ರಿಚರ್ಡ್ ಮಿಲೆ ವಾಚ್ ಕಟ್ಟಿ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 8 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಆದರೆ ಇದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. 8 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 31 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. 

Scroll to load tweet…

ಹಾರ್ದಿಕ್ ಪಾಂಡ್ಯ ಕಟ್ಟಿದ ರಿಚಾರ್ಜ್ ಮಿಲೆ ವಾಚ್ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿದೆ. ಈ ಪೈಕಿ ವಿರಾಟ್ ಕೊಹ್ಲಿ, ಕ್ರಿಸ್ಟಿಯಾನೋ ರೋನಾಲ್ಡೋ ಇದೇ ಮಾಡೆಲ್ ವಾಚ್ ಹೊಂದಿದ್ದಾರೆ. ಹಾಲಿವುಡ್ ಸ್ಟಾರ್ ಮಾರ್ಗರೋಟ್ ರೊಬಿ, ಪರೆಲ್ ವಿಲಿಯಮ್ಸ್ ಕೂಡ ಈ ವಾಚ್ ಹೊಂದಿದ್ದಾರೆ. ಎಫ್1 ಡ್ರೈವರ್ ಚಾಲ್ಲ್ಸ್ ಲೆಕ್ಲೆರ್ಕ್, ಮಾಜಿ ಚಾಂಪಿಯನ್ ಫಿಲ್ಪೆ ಮಾಸಾ ಕೂಡ ಇದೇ ಮಾದರಿ ವಾಚ್ ಹೊಂದಿದ್ದಾರೆ.

ಪಾಕಿಸ್ತಾನ ಮಣಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ