ಕೊಹ್ಲಿ ಸೆಂಚುರಿಗೆ ಪಾಕಿಸ್ತಾನಕ್ಕೆ ಸೋಲು ಖಚಿತವಾಗಿದ್ದರೆ, ಇತ್ತ ಸಚಿನ್ ದಾಖಲೆ ಪುಡಿ ಪುಡಿಯಾಗಿದೆ. ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ ಶತಕ, ಯಾವೆಲ್ಲಾ ದಾಖಲೆ ಸೃಷ್ಟಿಸಿದೆ?
ದುಬೈ(ಫೆ.23) ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಇದು ಕೊಹ್ಲಿ ಏಕದಿನದಲ್ಲಿ ಸಿಡಿಸಿದ 51ನೇ ಶತಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಹ್ಲಿ ಶತಕದಿಂದ ಪಾಕಿಸ್ತಾನದ ಸೋಲು ಕಂಡಿದೆ. ಇಷ್ಟೇ ಅಲ್ಲ ಆತಿಥ್ಯ ದೇಶ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಿಂದ ಬಹುತೇಕ ಹೊರಬಿದ್ದಿದೆ.. ಇಷ್ಟೇ ಅಲ್ಲ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸಚಿನ್ ಮುರಿದಿದ್ದರೆ. ಕೊಹ್ಲಿ ಆಕರ್ಷಕ ಇನ್ನಿಂಗ್ಸ್‌ನಿಂದ ನಿರ್ಮಾಣವಾದ ದಾಖಲೆ ಯಾವುದು?
ಸೆಂಚುರಿ ದಾಖಲೆ
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಸೆಂಚುರಿ ಸಿಡಿಸಿದ ಮೊದಲ ಟೀಂ ಇಂಡಿಯಾ ಕ್ರಿಕೆಟಿಗ ಅನ್ನೋ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತೀಯ ಬ್ಯಾಟರ್ ಸಿಡಿಸಿದ ಗರಿಷ್ಟ ಸ್ಕೋರ್ ರೊಹಿತ್ ಶರ್ಮಾ ಅವರ 91 ರನ್ ಆಗಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ 91 ರನ್ ಸಿಡಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಅಜೇಯ 100 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ಮಣಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ
ಪಾಕಿಸ್ತಾನ ವಿರುದ್ದ ಬ್ಯಾಟಿಂಗ್ ಆರಂಭಿಸಿದ ಕೆಲವೇ ಹೊತ್ತಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಏಕದಿನದಲ್ಲಿ 14,000 ರನ್ ಮೈಲಿಗಲ್ಲು ಸಾಧಿಸಿದ್ದರು. ಕೊಹ್ಲಿ ಕೇವಲ 287 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನದಲ್ಲಿ 14,000 ರನ್ ಸಾಧನೆ
ವಿರಾಟ್ ಕೊಹ್ಲಿ: 287 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್: 350 ಇನ್ನಿಂಗ್ಸ್
ಕುಮಾರ್ ಸಂಗಕ್ಕಾರ: 478 ಇನ್ನಿಂಗ್ಸ್
ಏಕದಿನದಲ್ಲಿ ಕೊಹ್ಲಿ 51ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ
ಫೀಲ್ಡಿಂಗ್‌ನಲ್ಲೂ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಏಕದನದಲ್ಲಿ ಕೊಹ್ಲಿ 157 ಕ್ಯಾಚ್ ಮೂಲಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಮುರಿದಿದ್ದಾರೆ. ಅಜರುದ್ದೀನ್ 156 ಕ್ಯಾಚ್ ಮೂಲಕ ಇತಿಹಾಸ ರಚಿಸಿದ್ದರು.
ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 111 ಎಸೆತದಲ್ಲಿ ಅಜೇಯ 100 ರನ್ ಸಿಡಿಸಿದ್ದಾರೆ. 90ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 7 ಬೌಂಡರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಹಾಗೂ ಟೀಂ ಇಂಡಿಯಾ ಗೆಲುವು ಎರಡು ಜೊತೆ ಜೊತೆಯಾಗಿ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟು 82 ಶತಕ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧನೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 82 ಶತಕದ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 71 ಅಂತಾರಾಷ್ಟ್ರೀಯ ಸೆಂಚುರಿ ಸಿಡಿಸಿದ್ದಾರೆ.
ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಗೆಲ್ಲೋದ್ಯಾರು? ಐಐಟಿ ಬಾಬ ಸ್ಫೋಟಕ ಭವಿಷ್ಯ
