ಕಳೆದ ಒಂದು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ವೈಭವ್ ಸೂರ್ಯವಂಶಿ ಸದ್ಯದ ಫಾರ್ಮ್ ನೋಡಿದ್ರೆ, ಅವನನ್ನು ಆಡಿಸಬೇಕಿತ್ತು ಎಂದು ಸುನೀಲ್ ಗಾವಸ್ಕರ್ ಹೇಳಿದ್ದಾರೆ. ಆದರೆ, ಇದೀಗ ಸಂಜು ಸ್ಯಾಮ್ಸನ್ ಅಥವಾ ಅಭಿಷೇಕ್ ಇಬ್ಬರನ್ನೂ ಕೂರಿಸದೇ ವೈಭವ್‌ನನ್ನು ಆಡಿಸಲು ಐಡಿಯಾ ಕೊಟ್ಟಿದ್ದಾರೆ.
ಲಂಡನ್: ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬೆನ್ನಲ್ಲೇ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ (Team India Management) ವಿರುದ್ಧ ಮಾಜಿ ನಾಯಕ ಸುನಿಲ್ ಗವಾಸ್ಕರ್ (ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬರುವ ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದಲ್ಲೇ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಆಡಿಸಲೇಬೇಕೆಂದು ಗವಾಸ್ಕರ್ ಆಗ್ರಹಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಜುಲೈ 1 ರಂದು ಡರ್ಹಾಮ್‌ನಲ್ಲಿ ನಡೆಯಲಿದೆ.
ವೈಭವ್ ಸೂರ್ಯವಂಶಿ ಸದ್ಯದ ಫಾರ್ಮ್
'ಕಳೆದ ಒಂದು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ವೈಭವ್ ಸೂರ್ಯವಂಶಿ ಸದ್ಯದ ಫಾರ್ಮ್ ನೋಡಿದ್ರೆ, ಅವನನ್ನು ಆಡಿಸಬೇಕಿತ್ತು. ಒಂದು ಮ್ಯಾಚ್‌ನಲ್ಲಿ ಅಭಿಷೇಕ್ ಜೊತೆ, ಇನ್ನೊಂದು ಮ್ಯಾಚ್‌ನಲ್ಲಿ ಸಂಜು ಜೊತೆ ಓಪನಿಂಗ್ ಮಾಡಿಸಬಹುದಿತ್ತು. ಅವನು ಒಬ್ಬನೇ ಮ್ಯಾಚ್ ಗೆಲ್ಲಿಸ್ತಾನೆ ಅಂತ ನಾನು ಹೇಳ್ತಿಲ್ಲ. ಕೆಲವೊಮ್ಮೆ 10-15 ರನ್‌ಗೆ ಔಟ್ ಆಗಬಹುದು. ಆದರೆ, ಒಬ್ಬ ಯುವ ಆಟಗಾರನನ್ನು ಪರೀಕ್ಷೆ ಮಾಡಲು ಇದಕ್ಕಿಂತ ಒಳ್ಳೆ ಅವಕಾಶ ಸಿಗುತ್ತಿರಲಿಲ್ಲ. ಇನ್ನಾದರೂ ತಡ ಮಾಡಬೇಡಿ, ಫಾರ್ಮ್‌ನಲ್ಲಿ ಇಲ್ಲದ ಬ್ಯಾಟರ್‌ಗಳನ್ನು ಕೂರಿಸಿ ಇಂಗ್ಲೆಂಡ್ ವಿರುದ್ಧ ಅವನನ್ನು ಆಡಿಸಿ" ಎಂದು ಗವಾಸ್ಕರ್ ಹೇಳಿದ್ದಾರೆ.
ಸಂಜು ಅಭಿಷೇಕ್ ಕೂರಿಸೋದು ಸರಿಯಲ್ಲ
‘ಸಂಜು ಮತ್ತು ಅಭಿಷೇಕ್‌ನನ್ನು ದಿಢೀರ್ ಅಂತ ಕೈಬಿಡುವುದು ಸರಿ ಅಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಒಬ್ಬರನ್ನು ಹೊರಗಿಟ್ಟು ವೈಭವ್‌ನನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬಹುದು. ಇಂಗ್ಲೆಂಡ್‌ಗೆ ಶಾಕ್ ಕೊಡಬೇಕಂದ್ರೆ ಅವನನ್ನು ಕಣಕ್ಕಿಳಿಸಬೇಕು. ಅವನು ಕ್ರೀಸ್‌ನಲ್ಲಿ ಸೆಟ್ ಆದರೆ, ಇಂಗ್ಲೆಂಡ್ ಬೌಲರ್‌ಗಳು ಸುಸ್ತಾಗುತ್ತಾರೆ’ ಎಂದು ಗವಾಸ್ಕರ್ ಸೇರಿಸಿದ್ದಾರೆ.
ಸಚಿನ್ ದಾಖಲೆ ಮುರಿಯಲು ಸಜ್ಜು
ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಚೇಸಿಂಗ್‌ನಲ್ಲಿ ವಿಫಲವಾಗಿತ್ತು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಭರ್ಜರಿ ಪ್ರದರ್ಶನ ನೀಡಿದ್ದ ವೈಭವ್, ಇತ್ತೀಚೆಗೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಕೇವಲ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಒಂದು ವೇಳೆ ಜುಲೈ 1 ರಂದು 15 ವರ್ಷದ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದು, ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.


