ಟೀಂ ಇಂಡಿಯಾ ಗೆಲುವಿನ ಪಾರ್ಟಿ; ಸುವರ್ಣನ್ಯೂಸ್ ಜೊತೆ ಸಂಭ್ರಮ ಕ್ಷಣ ಹಂಚಿಕೊಂಡ ಗವಾಸ್ಕರ್!
ಆಸೀಸ್ ನೆಲದಲ್ಲಿನ ಭಾರತದ ಟೆಸ್ಟ್ ಸರಣಿ ಗೆಲುವನ್ನು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಸುನಿಲ್ ಗವಾಸ್ಕರ್ ಅತೀಯಾಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಈ ಸಂಭ್ರಮದ ಕ್ಷಣವನ್ನು ಗವಾಸ್ಕರ್, ಸುವರ್ಣನ್ಯೂಸ್.ಕಾಂ ಜೊತೆ ಹಂಚಿಕೊಂಡಿದ್ದಾರೆ.
ಗಬ್ಬಾ(ಜ.24): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ ಇನ್ನೂ ಮಾಸಿಲ್ಲ. ತವರಿಗೆ ಆಗಮಿಸಿದ ಟೀಂ ಇಂಡಿಯಾ ಆಟಗಾರರಿಗೆ ಸನ್ಮಾನ, ಮೆರವಣಿಗೆಗಳು ನಡೆಯುತ್ತಿದೆ. ಟೀಂ ಇಂಡಿಯಾ ಗೆಲುವನ್ನು ವೀಕ್ಷಕ ವಿವರಣೆಗಾರರು, ಕ್ರಿಕೆಟ್ ವಿಶ್ಲೇಷಕರು ಅಷ್ಟೇ ಸಂಭ್ರಮಿಸಿದ್ದಾರೆ. ಅದರಲ್ಲೂ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಭಾರತದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ರೀತಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಜೊತೆ ಹಂಚಿಕೊಂಡಿದ್ದಾರೆ.
"
ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ ಪ್ರಧಾನಿ ಮೋದಿ, ಸಚಿನ್ ಸೇರಿ ದಿಗ್ಗಜರ ಅಭಿನಂದನೆ!.
ಗಬ್ಬಾ ಟೆಸ್ಟ್ ಪಂದ್ಯದ ಅಂತಿಮ ದಿನ ಪ್ರತಿ ಎಸೆತವೂ ಟಿ20 ಪಂದ್ಯಕ್ಕಿಂತ ರೋಚಕವಾಗಿತ್ತು. ಬೃಹತ್ ಗುರಿ ಬೆನ್ನಟ್ಟಿದ್ದ ಭಾರತ ಯಶಸ್ವಿಯಾಗಿ ಪಂದ್ಯ ಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಸರಣಿ ವೇಳೆ ವೀಕ್ಷಕ ವಿವರಣೆಗಾರರಾಗಿದ್ದ ಸುನಿಲ್ ಗವಾಸ್ಕರ್ ಹಾಗೂ ತಂಡಕ್ಕೆ ವಿದಾಯ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗವಾಸ್ಕರ್ ಭಾರತದ ಗೆಲುವಿಗೆ ಕುಣಿದು ಕುಪ್ಪಳಿಸಿದ್ದಾರೆ.
ಟೀಂ ಇಂಡಿಯಾ ಸರಣಿ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?
ಫೇರ್‌ವೆಲ್ ಪಾರ್ಟಿಯಲ್ಲಿ ನಾನು ಗ್ಲಾಸ್ ಎತ್ತಿ ಕೋಣೆಯ ಸುತ್ತಲು ಸಂಭ್ರಮಿಸಿದೆ. ನನ್ನ ಗೆಲುವಿನ ಸಂಭ್ರವನ್ನು ಆಸ್ಟ್ರೇಲಿಯನ್ನರು ಹುರಿದುಂಬಿಸಿದ್ದಾರೆ. ಇದೇ ವೇಳೆ ವಿಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಆಗಮಿಸಿ ನನ್ನ ತಬ್ಬಿಕೊಂಡು, ನಾವು ಗೆದ್ದೆವು, ನಾವು ಗೆದ್ದೆವು ಎಂದು ಕಿರುಚಿದರು. ಗೆಲುವು ಸ್ಮರಣೀಯವಾಗಿದೆ. ನೆನಪು ಯಾವತ್ತೂ ಅಚ್ಚಳಿಯದೇ ಉಳಿದಿರುತ್ತದೆ. ಈ ಗೆಲುವಿನಿಂದ ನಾನಿನ್ನೂ ಹೊರಬಂದಿಲ್ಲ. ಈಗಲೂ ನಾನು ಚಂದ್ರನ ಮೇಲೆ ಕಕ್ಷೆಯಲ್ಲೇ ಸುತ್ತುತ್ತಿದ್ದೇನೆ ಎಂದು ಗವಾಸ್ಕರ್ ಸುವರ್ಣನ್ಯೂಸ್ ಜೊತೆ ಸಂತಸ ಕ್ಷಣ ಹಂಚಿಕೊಂಡಿದ್ದಾರೆ.
ಆಸೀಸ್ ನಾಡಲ್ಲಿ ಟೆಸ್ಟ್ ದಿಗ್ವಿಜಯ; ಟೀಂ ಇಂಡಿಯಾಗೆ ಭರ್ಜರಿ ಬೋನಸ್ ಘೋಷಿಸಿದ ದಾದಾ..!
ಗವಾಸ್ಕರ್ ಈ ಗೆಲುವನ್ನ ಈ ಪರಿ ಆಚರಿಸಲು ಹಲವು ಕಾರಣಗಳಿವೆ. ಭಾರತದ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಜೊತೆಗೆ ಪ್ರಮುಖ ಆಟಗಾರರೆಲ್ಲಾ ಇಂಜುರಿಯಾಗಿದ್ದರು. ಜೊತೆಗೆ ಜನಾಂಗೀಯ ನಿಂದನೆ ಸೇರಿದಂತೆ ಹಲವು ಅಡೆ ತಡೆಗಳನ್ನು ಟೀಂ ಇಂಡಿಯಾ ಎದರಿಸಿತ್ತು. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯ ಮಹತ್ವ ಪಡೆದಿತ್ತು.
ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್ 5 ರಿಯಲ್ ಹೀರೋಗಳಿವರು!.
ಗಬ್ಬಾ ಮೈದಾನದಲ್ಲಿ ಕಳೆದ 36 ವರ್ಷಗಳಿಂದ ಭಾರತ ಗೆಲುವು ಸಾಧಿಸಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾಗೆ ಆಡಲು ಭಯವೇಕೆ ಎಂದು ಆಸೀಸ್ ಮಾಧ್ಯಮಗಳು ಪ್ರಶ್ನಿಸಿತ್ತು. ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ತಂಡವನ್ನು ಬಗ್ಗು ಬಡಿಯುವುದು ಸುಲಭದ ಮಾತಲ್ಲ. ಆದರೆ ಪ್ರಮುಖ ಆಟಗಾರರಿಲ್ಲದೆ ಅಜಿಂಕ್ಯ ರಹಾನೆ ನೇತೃತ್ವದ ತಂಡ ಈ ಸಾಧನ ಮಾಡಿದೆ. ಇವೆಲ್ಲವೂ ಈ ಗೆಲುವಿನ ರೋಚಕತೆ ಹೆಚ್ಚಿಸಿತ್ತು.