ಟೀಂ ಇಂಡಿಯಾ ಸರಣಿ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಭಾರತದ ಕೈವಶವಾಗಿದೆ. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಬಳಕಿ ಭರ್ಜರಿ ಕಮ್‌ಬ್ಯಾಕ್ ಮಾಡಿತು. ಜನಾಂಗೀಯ ನಿಂದನೆ ಸೇರಿದಂತೆ ಹಲವು ಅಡೆ ತಡೆ ಎದುರಿಸಿದ ಟೀಂ ಇಂಡಿಯಾ, ಕಾಂಗರೂ ನಾಡಿನಲ್ಲಿ ಸತತ 2ನೇ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ರಚಿಸಿದೆ. ಈ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆದ ಬದಲಾವಣೆಗಳೇನು? ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಈ ಗೆಲುವಿನಿಂದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಟಿಕೆಟ್ ಬಹುತೇಕ ಪಕ್ಕಾ ಆಗಿದೆ.
ಐತಿಹಾಸಿಕ ಗೆಲುವಿನ ಬಳಿಕ 2019-21ರ ಟೆಸ್ಟ್ ಚಾಂಪಿಯನ್ ಟೂರ್ನಿಯ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ.
5 ಟೆಸ್ಟ್ ಸರಣಿಯ 13 ಪಂದ್ಯಗಳಲ್ಲಿ ಟೀಂ ಇಂಡಿಯಾ 9 ಗೆಲುವು ದಾಖಲಿಸಿತು. 3 ಪಂದ್ಯಗಳಲ್ಲಿ ಭಾರತ ಸೋಲು ಕಂಡರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಮೂಲಕ 430 ಪಾಯಿಂಟ್ಸ್ ಗಳಿಸಿದೆ.
ಟೀಂ ಇಂಡಿಯಾಗೆ ಇನ್ನೂ ಒಂದು ಸರಣಿ ಬಾಕಿ ಇದೆ. ಫೆಬ್ರವರಿ ತಿಂಗಳಲ್ಲಿ ಭಾರತ ತಂಡ, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಈ ಮೂಲಕ ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ.
2020ರ ನವೆಂಬರ್ ತಿಂಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಇದೀಗ 3ನೇ ಸ್ಥಾನಕ್ಕೆ ಜಾರಿದೆ. ಕಾರಣ ಆಸ್ಟ್ರೇಲಿಯಾ 14 ಪಂದ್ಯಗಳಲ್ಲಿ 4 ಪಂದ್ಯ ಸೋತಿದ್ದರೆ, 2 ಪಂದ್ಯ ಡ್ರಾ ಮಾಡಿಕೊಂಡಿದೆ.
ಆಸ್ಟ್ರೇಲಿಯಾಗೆ ಇನ್ನೊಂದು ಸರಣಿ ಬಾಕಿ ಇದೆ. ಟೆಸ್ಟ್ ಸರಣಿಗಾಗಿ ಸೌತ್ ಆಫ್ರಿಕಾ ಪ್ರವಾಸ ತೆರಳಲು ಆಸೀಸ್ ಸಜ್ಜಾಗಿದೆ. ಆದರೆ ಸರಣಿ ಆಯೋಜನೆ ಕುರಿತು ಇನ್ನೂ ಯಾವುದೇ ಖಚಿತತೆ ಇಲ್ಲ. ಸರಣಿ ಆಯೋಜನೆಗೊಂಡರೂ ಅಗ್ರಸ್ಥಾನಕ್ಕೇರುವುದು ಕಷ್ಟದ ಮಾತು
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಇನ್ನು ಯಾವುದೇ ಸರಣಿಗಳಿಲ್ಲ. ಹೀಗಾಗಿ ನ್ಯೂಜಿಲೆಂಡ್ ಅಗ್ರಸ್ಥಾನಕ್ಕೇರುವುದು ಕಷ್ಟ
2019-21ರ ಸಾಲಿನ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಬಹುತೇಕ ಪಕ್ಕಾ ಆಗಿದೆ. ಲಾರ್ಡ್ಸ್‌ನಲ್ಲಿ ಈ ವರ್ಷದ ಅಂತ್ಯದಲ್ಲಿ ಫೈನಲ್ ಪಂದ್ಯ ನಡೆಯಲಿದೆ.