ನವದೆಹಲಿ(ಮಾ.26): ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಗಳು ರದ್ದಾಗಿವೆ. ಹೀಗಾಗಿ ಹಲವು ಕ್ರಿಕೆಟಿಗರು ಮೈದಾನಕ್ಕಿಳಿಯದೇ, ಮನೆಯಲ್ಲೇ ಕುಳಿತುಕೊಂಡಿದ್ದಾರೆ. ಇನ್ನು ಐಪಿಎಲ್ ಟೂರ್ನಿಯೂ ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆಯಾದರು, 21 ದಿನಗಳ ಕಾಲ ಭಾರತ ಲಾಕ್‌ಡೌನ್ ಆಗಿರುವುದರಿಂದ ಐಪಿಎಲ್ ಸಹಾ ನಡೆಯುವುದು ಅನುಮಾನ ಎನಿಸಿದೆ. ಆದರೆ ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

PM ಮೋದಿ ಸೂಚನೆ ಪಾಲಿಸಿ, ಭಾರತೀಯರಿಗೆ ಹಿಂದಿಯಲ್ಲಿ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗ!

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೋವಿಡ್ 19 ಸೋಂಕಿನಿಂದ ಬಚಾವಾಗಲು ವಿನೂತನ ಸಲಹೆಯೊಂದನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಜಡ್ಡು, ಏಕದಿನ ಕ್ರಿಕೆಟ್ ಪಂದ್ಯವೊಂದರ ವಿಡಿಯೋವೊಂದನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಸುರಕ್ಷಿತವಾಗಿರಿ, ರನೌಟ್ ಆಗಲು ಹೋಗಬೇಡಿ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯಾವುದದು ವಿಡಿಯೋ? ಅಂತದ್ಧೇನಿದೆ?

 
 
 
 
 
 
 
 
 
 
 
 
 

Stay safe, stay at home. Runout matt hona. ❌ 🎥- @foxcricket @cricketcomau

A post shared by Ravindra Jadeja (@royalnavghan) on Mar 25, 2020 at 1:38am PDT

2019ರಲ್ಲಿ ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ ಸಂಭವಿಸಿದ ರನೌಟ್ ವಿಡಿಯೋವೊಂದನ್ನು ರವೀಂದ್ರ ಜಡೇಜಾ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಒಂಟಿ ರನ್ ಕದಿಯುವ ಯತ್ನದಲ್ಲಿರುವ ಜಡೇಜಾ ಚುರುಕಿನ ಕ್ಷೇತ್ರ ರಕ್ಷಣೆಗೆ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಬೇಕಾಯಿತು. ಇದರೊಂದಿಗೆ ಖವಾಜ ಹಾಗೂ ಶಾನ್ ಮಾರ್ಶ್  ದೊಡ್ಡ ಜತೆಯಾಟಕ್ಕೆ ಬ್ರೇಕ್ ಹಾಕಿದರು.

ಕೊರೋನಾ ಲಾಕ್‌ಡೌನ್: ಲಕ್ಷಾಂತರ ಮೌಲ್ಯದ ಅಕ್ಕಿ ದಾನ ಮಾಡಿದ ದಾದ..!

ಈ ವಿಡಿಯೋ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿರುವ ಕೊರೋನಾ ತಡೆಯಲು ಪ್ರಧಾನಿ ಮೋದಿ ಕರೆಯಂತೆ 21 ದಿನಗಳ ಕಾಲ ಮನೆಯಲ್ಲೇ ಇರಿ. ಈ ಮೂಲಕ ಕೊರೋನಾದಿಂದ ಬಚಾವಾಗಿ ಎನ್ನುವ ಸಂದೇಶ ರವಾನಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಮಾ.24)  ರಾತ್ರಿ 8 ಗಂಟೆಗೆ ದೇಶವನ್ನು ಉದ್ಧೇಶಿಸಿ ಮಾತನಾಡಿ, ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾದಿಂದ ಬಚಾವಾಗಲು 21 ದಿನಗಳ ಕಾಲ ತಮಗೆ ತಾವೇ ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಲ್ಲೇ ಇರಿ. ಇಲ್ಲದಿದ್ದರೆ ದೇಶ ಘೋರ ಪರಿಣಾಮ ಎದುರಿಸುವ ಸಾಧ್ಯತೆಯಿದೆ. 21 ದಿನಗಳ ಮನೆಯಲ್ಲೇ ಇರದಿದ್ದರೆ ದೇಶ 21 ವರ್ಷಗಳ ಹಿಂದೆ ಹೋಗುವ ಅಪಾಯವಿದೆ ಎಂದು ಎಚ್ಚರಿಸಿದ್ದರು. 

ಕೊರೋನಾ ಬಂದಿಲ್ಲ ಅಂತಾ ಓಡಾಡ್ಬೇಡಿ ನೀವು, ದೇಶದಲ್ಲಿ 15ಕ್ಕೇರಿದೆ ಸಾವು; ಮಾ.26ರ ಟಾಪ್ 10 ಸುದ್ದಿ!

ಈಗಾಗಲೇ ಹಲವು ಕ್ರಿಕೆಟಿಗರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನು ಬಾಂಗ್ಲಾದೇಶ ಕ್ರಿಕೆಟಿಗರು ಸರ್ಕಾರಕ್ಕೆ ತಮ್ಮ ಅರ್ಧ ತಿಂಗಳು ಸಂಬಳ ನೀಡಲು ಮುಂದಾಗಿದ್ದಾರೆ. ಇನ್ನು ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅರ್ಧ ಕೋಟಿ ಮೌಲ್ಯದ ಅಕ್ಕಿಯನ್ನು ಅಗತ್ಯವಿರುವ ಜನರಿಗೆ ಉಚಿತವಾಗಿ ಹಂಚುವ ಮೂಲಕ ಹಲವರಿಗೆ ಸ್ಫೂರ್ತಿಯಾಗುವ ಕೆಲಸ ಮಾಡಿದ್ದಾರೆ.