ಕ್ರಿಕೆಟ್ ಜಗತ್ತಿನ ಹೊಸ ರನ್ ಮಷಿನ್! ಸರ್ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಲಂಕಾ ಬ್ಯಾಟರ್
ಶ್ರೀಲಂಕಾದ ಅದ್ಭುತ ಪ್ರತಿಭೆ ಕಮಿಂಡು ಮೆಂಡಿಸ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ರನ್ ಮಷೀನ್ ಎನಿಸಿಕೊಂಡಿದ್ದಾರೆ.
ಕೊಲಂಬೊ: ಕುಮಾರ್ ಸಂಗಾಕ್ಕಾರ ನಂತರ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಅಂತಹ ಮತ್ತೊಬ್ಬ ಬ್ಯಾಟರ್ ಹುಟ್ಟಿಕೊಂಡಿರಲಿಲ್ಲ. ಆದ್ರೀಗ, ಕಮಿಂಡು ಮೆಂಡಿಸ್ ಆ ಭರವಸೆ ಹುಟ್ಟಿಸಿದ್ದಾನೆ. ಇದೇ ಪ್ರದರ್ಶನ ಮುಂದುರಿದ್ರೆ, ಭವಿಷ್ಯದಲ್ಲಿ ಶ್ರೀಲಂಕಾ ಲೆಜೆಂಡ್‌ಗಳ ಸಾಲಿಗೆ ಸೇರೋದ್ರಲ್ಲಿ ಅನುಮಾನವೇ ಇಲ್ಲ. ಯಾರು ಆ ಆಟಗಾರ ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ವಿರಾಟ್ ಕೊಹ್ಲಿಯ ಕೈ ತಪ್ಪುತ್ತಾ ಸೆಂಚುರಿ ಕಿಂಗ್ ಪಟ್ಟ?
ವಿರಾಟ್ ಕೊಹ್ಲಿ! ಮಾಡರ್ನ್ ಡೇ ಕ್ರಿಕೆಟ್‌ನ ಗ್ರೇಟೆಸ್ಟ್ ಬ್ಯಾಟರ್. ರನ್, ಸೆಂಚುರೀಸ್, ರೆಕಾರ್ಡ್ಸ್ ಎಲ್ಲದರಲ್ಲೂ ಕೊಹ್ಲಿಯೇ ಕಿಂಗ್. ಕೊಹ್ಲಿ ಆಡಿರೋ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್‌ಗಳು ಒಂದೆರಡಲ್ಲ. ಇದೇ ಕಾರಣಕ್ಕೆ ಕೊಹ್ಲಿಯನ್ನು ರನ್ ಮಷಿನ್ ಅಂತ ಕರೆಯಲಾಗುತ್ತೆ. ಆದ್ರೀಗ, ಶ್ರೀಲಂಕಾದ ಈ ಕ್ರಿಕೆಟರ್ ಕೊಹ್ಲಿಯ ರನ್ ಮಷಿನ್ ಪಟ್ಟದ ಮೇಲೆ ಕಣ್ಣಾಕ್ಕಿದ್ದಾನೆ. ಕೊಹ್ಲಿಯಿಂದಲೇ ಸಾಧ್ಯವಾಗದಂತಹ ದಾಖಲೆಯನ್ನ ಬರೆದಿದ್ದಾನೆ.
ಕಮಿಂಡು ಮೆಂಡಿಸ್ ಕ್ರಿಕೆಟ್ ಜಗತ್ತಿನ ಹೊಸ ಸೆನ್ಸೇಷನ್. ಶ್ರೀಲಂಕಾ ಕ್ರಿಕೆಟ್‌ನ ನಯಾ ಸೂಪರ್ ಸ್ಟಾರ್. 25 ವರ್ಷದ ಈ ಯಂಗ್‌ಸ್ಟರ್, ಅದ್ಭುತ ಬ್ಯಾಟಿಂಗ್ನಿಂದ ಮಿಂಚುತ್ತಿದ್ದಾನೆ. ಪ್ರತಿ ಪಂದ್ಯದಲ್ಲೂ ರನ್ ಹೊಳೆಯನ್ನೇ ಹರಿಸುತ್ತಿದ್ದಾನೆ. ಈವರೆಗೂ ಆಡಿರೋ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 9 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದ್ದಾನೆ. 5 ಬಾರಿ ಶತಕದ ಗಡಿ ತಲುಪಿದ್ದಾನೆ. ಈತನ ಕನ್ಸಿಸ್ಟೆನ್ಸಿಗೆ ಅಭಿಮಾನಿಗಳು ಬೆರಗಾಗಿದ್ದಾರೆ.
ಕೊಹ್ಲಿ ಆಟ ನೋಡಲು 58 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ 15 ವರ್ಷದ ಅಭಿಮಾನಿ! ವಿಡಿಯೋ ವೈರಲ್
ನ್ಯೂಜಿಲೆಂಡ್ ವಿರುದ್ಧ ಕಮಿಂಡು ಮೆಂಡಿಸ್ ಆರ್ಭಟ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೆಂಡೀಸ್ ಅದ್ಭುತ ಪ್ರದರ್ಶನ ನೀಡಿದ್ದ. 5 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 53.41ರ ಸರಾಸರಿಯಲ್ಲಿ 267 ರನ್ ಕಲೆಹಾಕಿದ್ದ. ಇದ್ರಲ್ಲಿ 2 ಅರ್ಧಶತಕ ಮತ್ತು 1 ಶತಕ ಸೇರಿದ್ವು. ಈಗ ತವರಿನಲ್ಲೂ ಈ ಎಡಗೈ ಬ್ಯಾಟರ್ ಆರ್ಭಟ ಮುಂದುವರಿದೆ.
ಸದ್ಯ ಶ್ರೀಲಂಕಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡ್ತಿದೆ. ಈ ಸರಣಿಯಲ್ಲಿ ಮೆಂಡಿಸ್ ಅಬ್ಬರಿಸ್ತಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಮೆಂಡಿಸ್, 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲೂ ಸೆಂಚುರಿ ಬಾರಿಸಿದ್ದಾನೆ. 2ನೇ ದಿನದಾಟದ ಅಂತ್ಯಕ್ಕೆ ಅಜೇಯ 182 ರನ್‌ಗಳಿಸಿದ್ದಾನೆ.
ಮೆಂಡಿಸ್ ಈವರೆಗು 8 ಟೆಸ್ಟ್‌ಗಳನ್ನಾಡಿದ್ದು, 8ಕ್ಕೆ 8 ಟೆಸ್ಟ್‌ಗಳಲ್ಲೂ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾನೆ. ಇದ್ರೊಂದಿಗೆ 147 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಅಲ್ಲದೇ, ಕೇವಲ 13 ಇನ್ನಿಂಗ್ಸ್ಗಳಲ್ಲೇ ಸಾವಿರ ರನ್ ಮೈಲಿಗಲ್ಲನ್ನು ತಲುಪಿದ್ದಾನೆ. ಆ ಮೂಲಕ ಲೆಜೆಂಡ್, ಸರ್ ಡಾನ್ ಬ್ರಾಡ್ಮನ್ ನಂತರ ಅತಿಕಡಿಮೆ ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾನೆ.
ಟೀಂ ಇಂಡಿಯಾ ಕ್ರಿಕೆಟಿಗನ ಸಹೋದರ, ಪ್ರತಿಭಾನ್ವಿತ ಬ್ಯಾಟರ್ ಭೀಕರ ಅಪಘಾತ, ಕ್ರಿಕೆಟರ್ ತಂದೆಗೂ ಗಾಯ!
ಶ್ರೀಲಂಕಾ ಕ್ರಿಕೆಟ್ನ ಲೆಜೆಂಡ್ ಆಗ್ತಾರಾ ಮೆಂಡಿಸ್?
ಯೆಸ್, ಕುಮಾರ್ ಸಂಗಾಕ್ಕಾರ ನಂತರ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಅಂತಹ ಮತ್ತೊಬ್ಬ ಬ್ಯಾಟರ್ ಹುಟ್ಟಿಕೊಂಡಿರಲಿಲ್ಲ. ಆದ್ರೀಗ, ಕಮಿಂಡು ಮೆಂಡಿಸ್ ಆ ಭರವಸೆ ಹುಟ್ಟಿಸಿದ್ದಾನೆ. ಇದೇ ಪ್ರದರ್ಶನ ಮುಂದುವರಿದ್ರೆ, ಭವಿಷ್ಯದಲ್ಲಿ ಶ್ರೀಲಂಕಾ ಲೆಜೆಂಡ್‌ಗಳ ಸಾಲಿಗೆ ಸೇರೋದ್ರಲ್ಲಿ ಅನುಮಾನವೇ ಇಲ್ಲ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್