ತಿಸಾರ ಪೆರೇರಾ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಬಾರಿಸಿ ಅಬ್ಬರಿಸಿದ್ದಾರೆ. ಆ ವಿಡಿಯೋವೀಗ ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೊಲಂಬೊ(ಮಾ.29): ಶ್ರೀಲಂಕಾದ ಸ್ಟಾರ್ ಆಲ್ರೌಂಡರ್‌ ತಿಸಾರ ಪೆರೇರಾ 'ಲಿಸ್ಟ್‌ ಎ' ಟೂರ್ನಿಯೊಂದರಲ್ಲಿ ಸತತ 6 ಎಸೆತಗಳಿಗೆ 6 ಸಿಕ್ಸರ್‌ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಲಂಕಾದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಪನಗೊಡ ಆರ್ಮಿ ಗ್ರೌಂಡ್‌ನಲ್ಲಿ ಶ್ರೀಲಂಕಾ ಆರ್ಮಿ ತಂಡದ ಪರ ಕಣಕ್ಕಿಳಿದಿದ್ದ ಪೆರೇರಾ ಬ್ಲೂಮ್‌ಫೀಲ್ಡ್‌ ಕ್ರಿಕೆಟ್‌ ಅಂಡ್‌ ಅಥ್ಲೆಟಿಕ್‌ ಕ್ಲಬ್‌ ವಿರುದ್ದ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಬ್ಲೂಮ್‌ಫೀಲ್ಡ್‌ ಕ್ರಿಕೆಟ್‌ ಅಂಡ್‌ ಅಥ್ಲೆಟಿಕ್‌ ಕ್ಲಬ್‌ ವಿರುದ್ದ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ ಚಚ್ಚುವ ಯುವರಾಜ್ ಸಿಂಗ್, ಹರ್ಷೆಲ್ ಗಿಬ್ಸ್‌ ಅವರಂತಹ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ನಾನು 5ನೇ ಸಿಕ್ಸ್‌ ಬಾರಿಸಬೇಕೆಂದುಕೊಂಡಿದ್ದೆ, ಅದರೆ..? ಯುವಿ ಬಿಚ್ಚಿಟ್ಟ ಸೀಕ್ರೇಟ್‌ ಇದು..!

ತಿಸಾರ ಪೆರೇರಾ ಕೇವಲ 13 ಎಸೆತಗಳಲ್ಲಿ 52 ರನ್‌ ಸಿಡಿಸುವ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಅರ್ಧಶತಕ ಬಾರಿಸಿದ ಕೀರ್ತಿಗೂ ಎಡಗೈ ಬ್ಯಾಟ್ಸ್‌ಮನ್‌ ಭಾಜನರಾಗಿದ್ದಾರೆ. ತಿಸಾರ ಈ ಇನಿಂಗ್ಸ್‌ನಲ್ಲಿ 8 ಮನಮೋಹಕ ಸಿಕ್ಸರ್‌ಗಳು ಸೇರಿದ್ದವು. 50 ಓವರ್‌ಗಳ ಏಕದಿನ ಪಂದ್ಯವನ್ನು ಮಳೆಯಿಂದಾಗಿ 41 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಪೆರೆರಾ ಕ್ರೀಸ್‌ಗಿಳಿದಾಗ ಕೇವಲ 20 ಎಸೆತಗಳು ಮಾತ್ರ ಬಾಕಿ ಇದ್ದವು. ಆದರೆ ಪೆರೇರಾ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಶ್ರೀಲಂಕಾ ಆರ್ಮಿ ಕ್ಲಬ್‌ 318 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಪೆರೇರಾ ಬಾರಿಸಿದ ಸಿಕ್ಸರ್‌ ವಿಡಿಯೋ ಇಲ್ಲಿದೆ ನೋಡಿ

YouTube video player