* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮಳೆ ಭೀತಿ* ಐದನೇ ದಿನದಾಟದ ಹವಾಮಾನ ವರದಿ ಬಹಿರಂಗ* ಐದನೇ ದಿನದಾಟ ಸಾಂಗವಾಗಿ ನಡೆಯುವುದು ಬಹುತೇಕ ಪಕ್ಕಾ

ಸೌಥಾಂಪ್ಟನ್‌(ಜೂ.22): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಮಳೆ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಆದರೆ ಐದನೇ ದಿನದಾಟ ಯಾವುದೇ ಅಡಚಣೆಯಿಲ್ಲದೇ ನಡೆಯುವ ಸಾಧ್ಯತೆಯಿದೆ.

ಹೌದು, ಸದ್ಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ 4 ದಿನಗಳು ಮುಕ್ತಾಯವಾಗಿದ್ದು, ಈ ಪೈಕಿ ಎರಡು ದಿನಗಳ ಕಾಲ ಒಂದೇ ಒಂದು ಎಸೆತ ಕಾಣದೇ ಪಂದ್ಯ ರದ್ದಾಗಿದೆ. ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಸರಿಯಾಗಿ ಭರ್ತಿ ಎರಡು ದಿನ ಕೂಡಾ ಪಂದ್ಯಾಟ ನಡೆದಿಲ್ಲ. ಸೌಥಾಂಪ್ಟನ್‌ನಲ್ಲಿ ಬೆಳಗಿನ ಹೊತ್ತಿಗೆ ಮೋಡ ಕವಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಬೀಳುವ ಸೂಚನೆಯಿದೆ. ಗರಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಯುಕೆ ಹವಾಮಾನ ಇಲಾಖೆ ತಿಳಿಸಿದೆ.

Scroll to load tweet…

ಜೂನ್‌ 18(ಮೊದಲ ದಿನ)ರ ಶುಕ್ರವಾರ ಹಾಗೂ ಜೂನ್ 21(ನಾಲ್ಕನೇ ದಿನದಾಟ)ರ ಸೋಮವಾರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ಒಂದು ಎಸೆತವೂ ಕಾಣದೇ ದಿನದಾಟ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ಕೇವಲ 64.4 ಓವರ್‌ ಬೌಲಿಂಗ್ ಮಾಡಲಷ್ಟೇ ಸಾಧ್ಯವಾಗಿತ್ತು. ಮೂರನೇ ದಿನ ಭಾರತ ವಿರುದ್ದ ಕೇನ್‌ ವಿಲಿಯಮ್ಸನ್‌ ಪಡೆ ಕೊಂಚ ಹಿಡಿತ ಸಾಧಿಸಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡಿದ್ದರೆ, ಇತ್ತ ನ್ಯೂಜಿಲೆಂಡ್ ಮೂರನೇ ದಿನದಾಟದಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 101 ರನ್‌ ಕಲೆಹಾಕಿದೆ.

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್

ಮಳೆ ಹಾಗೂ ತಾಂತ್ರಿಕ ಅಡಚಣೆಯಿಂದ ವ್ಯರ್ಥವಾದ ಓವರ್‌ಗಳನ್ನು ಸರಿದೂಗಿಸಲು ಐಸಿಸಿ ಮೇ 23ನೇ ದಿನವನ್ನು ಮೀಸಲು ದಿನವಾಗಿ ಇಟ್ಟಿದೆ. ಹೀಗಾಗಿ ಇನ್ನೆರಡು ದಿನ ಮಳೆ ಅಡಚಣೆ ಮಾಡದಿದ್ದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.