ಜೋಹಾನ್ಸ್‌ಬರ್ಗ್(ಡಿ.05): ಕ್ರಿಕೆಟ್‌ನಲ್ಲಿ ಸಂಭ್ರಮಾಚರಣೆ ವಿಶೇಷವಾಗಿರುತ್ತೆ. ಅದರಲ್ಲೂ ಇತ್ತೀಚೆಗೆ ಕ್ರಿಕೆಟಿಗರ ಸೆಲೆಬ್ರೇಷನ್ ಎಲ್ಲರ ಗಮನಸೆಳೆಯುವಂತಿರುತ್ತದೆ. ಡ್ಯಾನ್ಸ್, ಮಿಮಿಕ್ರಿ ಸೇರಿದಂತೆ ಭಿನ್ನವಾದ ಸೆಲೆಬ್ರೇಷನ್ ಟ್ರೆಂಡ್ ಆಗಿ ಬದಲಾಗಿದೆ.  ಇದೀಗ ಸೌತ್ ಆಫ್ರಿಕಾದ  ಎಂಎಸ್ಎಲ್ ಲೀಗ್ ಟೂರ್ನಿಯಲ್ಲಿ ಸ್ಪಿನ್ನರ್ ತಬ್ರೈಜ್ ಶಮ್ಸಿ ವಿಕೆಟ್ ಕಬಳಿಸಿ ವಿಶೇಷ ರೀತಿಯಲ್ಲಿ  ಸೆಲೆಬ್ರೆಟ್ ಮಾಡಿದ್ದಾರೆ.

 

ಇದನ್ನೂ ಓದಿ: ಬುಮ್ರಾ ಬೇಬಿ ಬೌಲರ್ ಎಂದ ರಜಾಕ್; ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಫ್ಯಾನ್ಸ್..!

ಎಂಎಸ್ಎಲ್ ಲೀಗ್ ಟೂರ್ನಿಯಲ್ಲಿ ಆಡುತ್ತಿರುವ ತಬ್ರೈಜ್ ಶಮ್ಸಿ, ಎದುರಾಳಿ ಡೇವಿಡ್ ಮಿಲ್ಲರ್ ವಿಕೆಟ್ ಕಬಳಿಸಿದ್ದಾರೆ. ಮಹತ್ವದ ವಿಕೆಟ್ ಕಬಳಿಸಿದ ಶಮ್ಸಿ, ಸಂಭ್ರಮಚಾರಣೆ ವೇಳೆ ಕೆಂಪು ಬಣ್ಣದ ರಿಬ್ಬನ್ ತೆಗೆದು ಮ್ಯಾಜಿಕ್ ಮೂಲಕ ಕೋಲಾಗಿ ಪರಿವರ್ತಿಸಿದ್ದಾರೆ. 

ಇದನ್ನೂ ಓದಿ: ವಿಶ್ರಾಂತಿಯಲ್ಲಿರುವ ಧೋನಿಯಿಂದ ಆರ್ಕೆಸ್ಟ್ರಾ; ಬಾಲಿವುಡ್ ಹಾಡಿನ ಮೂಲಕ ಶೈನ್!

ಆರ್‌ಸಿಬಿ ತಂಡ ಮಾಜಿ ಸ್ಪಿನ್ನರ್ ಪ್ರತಿ ಬಾರಿ ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ಇದೀಗ ಕ್ರಿಕೆಟ್ ಮೈದಾನದಲ್ಲಿ ಮ್ಯಾಜಿಕ್ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಶಮ್ಸಿ ಮ್ಯಾಜಿಕ್ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಹೊಸ ಸೆಲೆಬ್ರೇಷನ್ ಎಂದು ವ್ಯಾಖ್ಯಾನಿಸಲಾಗುತ್ತಿದೆ.