ಪಾಕ್ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ನೀಡಿದ ಹೇಳಿಕೆಗೆ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಬೆಂಗಳೂರು[ಡಿ.05]: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಬೇಬಿ ಬೌಲರ್ ಎಂದು ಲಘುವಾಗಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್’ಗೆ ಟೀಂ ಇಂಡಿಯಾ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದಾರೆ.

ಬುಮ್ರಾ ನನ್ನ ಮುಂದೆ ‘ಬೇಬಿ ಬೌಲರ್‌’ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್..!

ಪಾಕ್ ಸುದ್ದಿಸಂಸ್ಥೆಯ ವರದಿಗಾರ ಇಡೀ ಜಗತ್ತೇ ಬುಮ್ರಾ ಅವರನ್ನು ಶ್ರೇಷ್ಠ ಬೌಲರ್ ಎಂದು ಕರೆಯುತ್ತಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ರಜಾಕ್’ರನ್ನು ಪ್ರಶ್ನಿಸಿದರು. ಆಗ ರಜಾಕ್, ನಾನು ವಾಸೀಂ ಅಕ್ರಂ, ಗ್ಲೆನ್ ಮೆಗ್ರಾಥ್ ಅವರಂತಹ ಬೌಲರ್’ಗಳನ್ನು ಎದುರಿಸಿದ್ದೇನೆ. ಆಗ ಬುಮ್ರಾ ಬೌಲಿಂಗ್ ಮಾಡಿದ್ದರೂ ಅವರ ಮೇಲೆ ಸವಾರಿ ಮಾಡುತ್ತಿದ್ದೆ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.

ಇನ್ನೊಂದೇ ಸಿಕ್ಸರ್, ಅಪರೂಪದ ದಾಖಲೆ ಬರೆಯಲು ರೋಹಿತ್ ರೆಡಿ

ರಜಾಕ್ ಈ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಭಾರತೀಯ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ವರ್ಷದ ಅತಿದೊಡ್ಡ ಜೋಕ್ಸ್ ಎಂದಿದ್ದರೆ, ಮತ್ತೆ ಕೆಲವರು, ನಿವೃತ್ತಿ ಜೀವನವನ್ನು ಎಂಜಾಯ್ ಮಾಡಿ ಎಂದು ಕಾಲೆಳೆದಿದ್ದಾರೆ.

ಯಾರೆಲ್ಲಾ ಏನಂದ್ರು, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್... 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…