ರಾಂಚಿ(ಡಿ.05): ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ವಾಪಸ್ಸಾಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಸುದೀರ್ಘ ವಿಶ್ರಾಂತಿಯಲ್ಲಿರುವ ಧೋನಿ ಕುಟುಂಬ ಹಾಗೂ ಗೆಳೆಯರ ಜೊತೆ ಹಾಯಾಗಿ ಕಾಲ ಕೆಳೆಯುತ್ತಿದ್ದಾರೆ. ಇದೀಗ ಸಿಕ್ಕಿರುವ ಸಮಯದಲ್ಲಿ ಧೋನಿ ಮೈಕ್ ಹಿಡಿದು ಹಳೇ ಹಿಂದಿ ಹಾಡು ಹಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ; 3 ತಿಂಗಳಲ್ಲಿ ಹೊರಬೀಳಲಿದೆ ಧೋನಿ ಕ್ರಿಕೆಟ್ ಭವಿಷ್ಯ!.

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಬಾಲಿವುಡ್ ಹಳೇ ಹಾಡುಗಳನ್ನು ಗುನುಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ವೇದಿಕೆಗಳಲ್ಲೂ ಹಳೇ ಹಾಡುಗಳನ್ನು ಹೇಳಿದ್ದಾರೆ. ಇದೀಗ ಧೋನಿ ನೆರೆದಿದ್ದವರನ್ನು ರಂಜಿಸಲು ಆರ್ಕೆಸ್ಟ್ರಾ ಸ್ಟೇಜ್ ಹತ್ತಿ ಹಾಡಿನ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಧೋನಿ ಹಿಂದಿಯ ಜಬ್ ಕೋಯಿ ಬಾತ್ ಬಿಗಡ್ ಜಾಯೆ ಹಾಡನ್ನು ಹಾಡಿದ್ದಾರೆ.

 

ಇದನ್ನೂ ಓದಿ; ಹೊಸ ಇನಿಂಗ್ಸ್ ಶುರು ಮಾಡಿದ ಧೋನಿ; ರಾಂಚಿಯಲ್ಲಿ ಯುವಕರಿಗೆ ಕೋಚಿಂಗ್!

ಮೊದಲು ಧೋನಿ ಹಳೇ ಹಾಡನ್ನು  ಹಾಡಿದ್ದಾರೆ. ಈ ವೇಳೆ ನೆರದಿದ್ದವರು ಆನಂದಿಂದ ಆಲಿಸಿದ್ದಾರೆ. ಆದರೆ ಧೋನಿ ಜೊತಾಗಾರ ಹಾಡಿದಾಗ ನೆರದಿದ್ದವರಿಗೆ ನಗು ತಡೆಯಲಾಗಲಿಲ್ಲ. ಧೋನಿ ಈ ಹಿಂದೆ ಹಲವು ಬಾರಿ ಬಾಲಿವುಡ್ ಖ್ಯಾತ್ ಗಾಯಕ ಕಿಶೋರ್ ಕುಮಾರ್ ಹಾಡುಗಳನ್ನು ಗುನುಗಿದ್ದಾರೆ. ಇದೀಗ ಮ್ಯೂಸಿಕ್ ಜೊತೆಗೆ ಹಾಡಿದ್ದಾರೆ.

ಇದನ್ನೂ ಓದಿ; ಮದ್ವೆವರೆಗೆ ಪುರುಷರೆಲ್ಲರೂ ಸಿಂಹ: ಧೋನಿ ಮಾತಿನ ಮೋಡಿಗೆ ಸಲಾಂ!

ವಿಶ್ವಕಪ್ ಟೂರ್ನಿ ಬಳಿಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಧೋನಿ, ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದಧ ಸರಣಿ, ಬಾಂಗ್ಲಾದೇಶ ವಿರುದ್ಧದ ಸರಣಿ ಹಾಗೂ ಇದೀಗ ವಿಂಡೀಸ್ ವಿರುದ್ದದ ಸರಣಿಗೆ ಧೋನಿ ಆಯ್ಕೆಯಾಗಿಲ್ಲ. ಹೀಗಾಗಿ ಧೋನಿ  ವಿದಾಯಕ್ಕೆ ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: