'RCB-CSK ಮ್ಯಾಚೇ ಸಖತ್ ಆಗಿತ್ತು..' ಕೆಕೆಆರ್ ಚಾಂಪಿಯನ್ ಆದ ಬೆನ್ನಲ್ಲೇ Worst IPL Final ಟ್ರೆಂಡಿಂಗ್!
ಕೆಕೆಆರ್ ತಂಡ ಎಂಟು ವಿಕೆಟ್‌ನಿಂದ ಸನ್‌ರೈಸರ್ಸ್ ತಂಡವನ್ನು ಸೋಲಿಸಿ, ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ Worst IPL Final ಟ್ರೆಂಡಿಂಗ್ ಆಗಿದೆ.
ಬೆಂಗಳೂರು (ಮೇ.26): ಇಲ್ಲಿಯವರೆಗಿನ ಐಪಿಎಲ್ ಇತಿಹಾಸದ ಅತ್ಯಂತ ನೀರಸ ಫೈನಲ್ ಈ ಬಾರಿ ದಾಖಲಾಗಿದೆ. 2022ರ ಐಪಿಎಲ್ ಫೈನಲ್ ಪಂದ್ಯವೇ ನೀರಸ ಎಂದವರಿಗೆ ಈ ಬಾರಿ ಫೈನಲ್ ಅದಕ್ಕಿಂತ ಹೆಚ್ಚಿನ ಬೋರ್ ಹೊಡೆಸಿದೆ. ಪಂದ್ಯದ ಮೊದಲ ಹಾಫ್ ಮುಗಿಯುವ ವೇಳೆಗಾಗಲೇ ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋದು ನಿಶ್ಚಿತವಾಗಿತ್ತು. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕಟ್ ಅಭಿಮಾನಿಗಳು ಕೂಡ ಈವರೆಗಿನ ಅತ್ಯಂತ ಕೆಟ್ಟ ಐಪಿಎಲ್ ಫೈನಲ್ ಎಂದು 2024ರ ಐಪಿಎಲ್ ಫೈನಲ್ ವಿರುದ್ಧ ಟೀಕೆ ಮಾಡಿದ್ದಾರೆ. ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಡ್ ರೈಡರ್ಸ್ ತಂಡ 8 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಪಂದ್ಯದ ಸೋಲು ಗೆಲುವು, ಒತ್ತಟ್ಟಿಗಿರಲಿ, ಅದರೆ, ಅತ್ಯಂತ ಏಕಪಕ್ಷೀಯ ಫೈನಲ್ ಪಂದ್ಯ ಇದಾಗಿತ್ತು. ಕಡಿಮೆ ರನ್ ಬಾರಿಸಿದ್ದ ಸನ್‌ರೈಸರ್ಸ್ ತಂಡ ಕನಿಷ್ಠ ಹೋರಾಟ ನೀಡುವ ಲಕ್ಷಣವನ್ನೂ ತೋರಿಸಲಿಲ್ಲ. ಇದಕ್ಕಿಂತ ಪ್ಲೇ ಆಫ್ ರೇಸ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ಆಡಿದ್ದ ತಮ್ಮ ಕೊನೆಯ ಲೀಗ್ ಪಂದ್ಯವೇ ಫೈನಲ್ ರೀತಿ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2024: ಐಪಿಎಲ್ ಫೈನಲ್‌ನಲ್ಲಿ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ ಸನ್‌ರೈಸರ್ಸ್!
'ಪ್ರಾಮಾಣಿಕವಾಗಿ ಇದುವರೆಗೆ ಆಡಿದ ಕೆಟ್ಟ ಐಪಿಎಲ್ ಫೈನಲ್ ಆಗಿದೆ, csk vs rcb ಮ್ಯಾಚ್ ಇದ್ದಕ್ಕಿಂತ ಹೆಚ್ಚು ಎಕ್ಸೈಟ್‌ಮೆಂಟ್ ಆಗಿತ್ತು. ಆ ಪಂದ್ಯ ಫೈನಲ್‌ಗಿಂತ ತೀವ್ರವಾಗಿತ್ತು' ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಚಿದಂಬರಂ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡ ಸನ್‌ರೈಸರ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ 10 ವರ್ಷಗಳ ನಂತರ ಟ್ರೋಫಿಯನ್ನು ಜಯಿಸಿತು. ಇದು ಕೆಕೆಆರ್ ತಂಡಕ್ಕೆ ಮೂರನೇ ಐಪಿಎಲ್ ಟ್ರೋಫಿ ಎನಿಸಿದೆ.
ಶಾರುಖ್ ಖಾನ್ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್ಡೇಟ್ ಕೊಟ್ಟ ನಟಿ ಜೂಹಿ ಚಾವ್ಲಾ
ಇನ್ನು ಪಂದ್ಯದ ದಾಖಲೆಗಳ ವಿಚಾರಕ್ಕೆ ಬರೋದಾದರೆ, ಫೈನಲ್ ಪಂದ್ಯವನ್ನು ಕೆಕೆಆರ್ 57 ಎಸೆತಗಳು ಇರುವಂತೆ ಗೆದ್ದುಕೊಂಡಿತು. ಇದು ಐಪಿಎಲ್‌ನ ಪ್ಲೇಆಫ್‌ನಲ್ಲೇ ಅತೀ ದೊಡ್ಡ ಅಂತರದ ಗೆಲುವು ಎನಿಸಿದೆ. ಹಾಗೂ ಕೆಕೆಆರ್‌ನ 2ನೇ ಅತಿದೊಡ್ಡ ಗೆಲುವು ಆಗಿದೆ. ಸನ್‌ರೈಸರ್ಸ್ ವಿರುದ್ಧ 57 ಎಸೆತಗಳು ಬಾಕಿ ಇರುವಂತೆ ಗೆದ್ದಿರುವುದು ಕೂಡ ದಾಖಲೆ.
ಇನ್ನು ಐಪಿಎಲ್ ಟೂರ್ನಿಯೊಂದರಲ್ಲೇ ಅತೀ ಕಡಿಮೆ ಸೋಲು ಕಂಡ ಚಾಂಪಿಯನ್ ತಂಡ ಎನ್ನುವ ಜಂಟಿ ದಾಖಲೆಯನ್ನೂ ಕೆಕೆಆರ್ ಮಾಡಿತು. ಕೆಕೆಆರ್ ಹಾಲಿ ವರ್ಷದಲ್ಲಿ ಕೇವಲ ಮೂರು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. 2008ರಲ್ಲಿ ರಾಜಸ್ಥಾನ ರಾಯಲ್ಸ್ ಕೂಡ ಇಷ್ಟೇ ಪಂದ್ಯದಲ್ಲಿ ಸೋಲು ಕಂಡಿತ್ತು. 2002ರಲ್ಲಿ ಗುಜರಾತ್ ತಂಡ 4 ಪಂದ್ಯದಲ್ಲಿ ಸೋಲು ಕಂಡಿತ್ತು. 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರು ಸೋಲು ಕಂಡಿದ್ದರೂ, ಸೂಪರ್‌ಓವರ್‌ನಲ್ಲಿ ಎರಡು ಬಾರಿ ಸೋಲು ಕಂಡಿತ್ತು.