Asianet Suvarna News Asianet Suvarna News

ಮುಂಬೈನಲ್ಲಿ ಇತಿಹಾಸ ಬರೆದ ಹರ್ಮನ್‌ ಪಡೆ; ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಆಸೀಸ್ ಹೊಸಕಿ ಹಾಕಿದ ಭಾರತದ ವನಿತೆಯರು..!

ಎರಡನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು.

Sneh Rana Pooja Vastrakar guide India to first ever win vs Australia in Test Cricket kvn
Author
First Published Dec 24, 2023, 2:23 PM IST

ಮುಂಬೈ(ಡಿ.24): ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಅಮೋಘ ಲಯದಲ್ಲಿದ್ದು, ಇದೀಗ ಆಸ್ಟ್ರೇಲಿಯಾ ಎದುರು ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪಂದ್ಯದ ಮೊದಲ ದಿನದಾಟದಿಂದಲೂ ಪ್ರವಾಸಿ ಕಾಂಗರೂ ಪಡೆಯ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದ ಭಾರತ ತಂಡವು, ಕೊನೆಯ ದಿನದಲ್ಲಿ ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ.

ಎರಡನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು.

ಕುತೂಹಲ ಘಟ್ಟಕ್ಕೆ ಭಾರತ-ಆಸೀಸ್ ವನಿತಾ ಟೆಸ್ಟ್..!

ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಬೆಥ್‌ ಮೂನಿ(33), ಲಿಚ್‌ಫೀಲ್ಡ್‌(18) ಬೇಗನೇ ಔಟಾದರೂ, 3ನೇ ವಿಕೆಟ್‌ಗೆ ಎಲೈಸಿ ಪೆರ್ರಿ ಹಾಗೂ ತಹಿಲಾ ಮೆಗ್ರಾಥ್‌ 84 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 45 ರನ್‌ ಗಳಿಸಿದ್ದ ಪೆರ್ರಿಗೆ ಸ್ನೇಹಾ ರಾಣಾ ಪೆವಿಲಿಯನ್ ಹಾದಿ ತೋರಿದರೆ, ಮೆಗ್ರಾಥ್‌(73) ಅವರನ್ನು ನಾಯಕಿ ಹರ್ಮನ್‌ಪ್ರೀತ್‌ ಔಟ್‌ ಮಾಡಿದರು. ಬಳಿಕ ಬಂದ ಅಲೀಸಾ ಹೀಲಿ(32) ಕೂಡಾ ಹರ್ಮನ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು. 3ನೇ ದಿನದಂತ್ಯಕ್ಕೆ ಆಸೀಸ್‌ 5 ವಿಕೆಟ್‌ಗೆ 233 ರನ್‌ ಗಳಿಸಿತ್ತು. ನಾಲ್ಕನೇ ದಿನದಾಟದಲ್ಲಿ ಕಾಂಗರೂ ಪಡೆ ತನ್ನ ಖಾತೆಗೆ ಕೇವಲ 27 ರನ್ ಸೇರಿಸಿ 261 ರನ್‌ಗಳಿಗೆ ಸರ್ವಪತನ ಕಂಡಿತು. 

ಎರಡನೇ ಇನಿಂಗ್ಸ್‌ನಲ್ಲಿ ಭಾರತ ಪರ ಸ್ನೆಹ್ ರಾಣಾ 63 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರಾಜೇಶ್ವರಿ ಗಾಯಕ್ವಾಡ್, ನಾಯಕಿ ಹರ್ಮನ್‌ಪ್ರೀತ್ ಕೌರ್ ತಲ ಎರಡು ಮತ್ತು ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಬುಟ್ಟಿಗೆ ಹಾಕಿಕೊಂಡರು.

ಕಿವುಡರ ಒಲಿಂಪಿಕ್‌ ವಿಜೇತ ವಿರೇಂದರ್‌ ಪದ್ಮಶ್ರೀ ವಾಪಸ್‌!

ಇನ್ನು ಆಸೀಸ್ ಎದುರು ಚೊಚ್ಚಲ ಟೆಸ್ಟ್ ಗೆಲ್ಲಲು ಭಾರತ ಕೇವಲ 75 ರನ್ ಗುರಿ ಪಡೆಯಿತು. ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರಾದರೂ, ನಾಲ್ಕನೇ ಎಸೆತದಲ್ಲಿ ಕಿಮ್ ಗರ್ತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ರಿಚಾ ಘೋಷ್ ಕೂಡಾ 13 ರನ್ ಗಳಿಸಿ ಆಶ್ಲೆ ಗಾರ್ಡ್ನರ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಸ್ಮೃತಿ ಮಂಧನಾ(38) ಹಾಗೂ ಜೆಮಿಯಾ ರೋಡ್ರಿಗ್ಸ್‌(12) ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೈದಾನದಲ್ಲಿ ಮೊಳಗಿದ ವಂದೇ ಮಾತರಂ: 

ಇನ್ನು ಆಸೀಸ್ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡವು ಚೊಚ್ಚಲ ಟೆಸ್ಟ್ ಗೆಲುವು ಸಾಧಿಸುತ್ತಿದ್ದಂತೆಯೇ ಮೈದಾನದಲ್ಲಿ ವಂದೇ ಮಾತರಂ ಹಾಡು ಇಡೀ ಮೈದಾನದಾದ್ಯಂತ ಮೊಳಗಿತು. ಭಾರತೀಯ ಅಭಿಮಾನಿಗಳು ವಂದೇ ಮಾತರಂ ಹಾಡಿ ಈ ಗೆಲುವನ್ನು ಸಂಭ್ರಮಿಸಿದರು. 

ಹೀಗಿತ್ತು ನೋಡಿ ಆ ಕ್ಷಣ

Follow Us:
Download App:
  • android
  • ios