Test Cricket  

(Search results - 475)
 • ashes

  SPORTS15, Sep 2019, 12:23 PM IST

  ಆ್ಯಷಸ್‌ ಕದನ: ಡ್ರಾನತ್ತ ಅಂತಿಮ ಟೆಸ್ಟ್

  ಪಂದ್ಯದ 3ನೇ ದಿನ​ವಾದ ಶನಿ​ವಾರ ವಿಕೆಟ್‌ ನಷ್ಟ​ವಿ​ಲ್ಲದೆ 9 ರನ್‌ಗಳಿಂದ ಆಟ ಮುಂದು​ವ​ರಿ​ಸಿದ ಇಂಗ್ಲೆಂಡ್‌, ಜೋ ಡೆನ್ಲಿ (94) ಹಾಗೂ ಬೆನ್‌ ಸ್ಟೋಕ್ಸ್‌ರ ಅರ್ಧ​ಶ​ತಕಗಳ ನೆರ​ವಿ​ನಿಂದ ಉತ್ತಮ ಸ್ಥಿತಿ ತಲು​ಪಿತು.

 • Rohit Sharma
  Video Icon

  SPORTS13, Sep 2019, 2:26 PM IST

  ವಿರೇಂದ್ರ ಸೆಹ್ವಾಗ್ ಸಾಲಿಗೆ ಸೇರಿದ ಮುಂಬೈಕರ್ ರೋಹಿತ್ ಶರ್ಮಾ

  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಕಳೆದೆರಡು ವರ್ಷಗಳಿಂದ ನೀರಸ ಪ್ರದರ್ಶನ ತೋರಿದ್ದ ಕೆ.ಎಲ್ ರಾಹುಲ್’ಗೆ ಕೋಕ್ ನೀಡಲಾಗಿದೆ. ಎಂ.ಎಸ್.ಕೆ. ಪ್ರಸಾದ್ ರೋಹಿತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲೇ ರೋಹಿತ್ ಆರಂಭಿಕನಾಗಿ ಕಣಕ್ಕಿಳಿದರೆ, ಡೆಲ್ಲಿ ಡ್ಯಾಶರ್ ವಿರೇಂದ್ರ ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ. ಈ ಮೊದಲು ಸೆಹ್ವಾಗ್’ರಂತೆ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿರುವ ರೋಹಿತ್ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಮಾಲ್ ಮಾಡ್ತಾರಾ ಎನ್ನುವುದು ಈಗಿನ ಕುತೂಹಲ...   

 • Mitch Marsh

  SPORTS13, Sep 2019, 1:19 PM IST

  ಆ್ಯಷಸ್ ಕದನ: ಆಸ್ಟ್ರೇಲಿಯಾ ವೇಗಿಗಳ ದಾಳಿಗೆ ಕುಸಿದ ಇಂಗ್ಲೆಂಡ್

  ಗುರುವಾರ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ ತಂಡಕ್ಕೆ ಆಹ್ವಾನಿಸಿತು. ಆಸೀಸ್ ವೇಗಿಗಳನ್ನು ಎದುರಿಸಲು ಮತ್ತೊಮ್ಮೆ ಪರದಾಡಿದ ಆತಿಥೇಯರು 300 ರನ್’ಗಳೊಳಗಾಗಿ ಕುಸಿಯುವ ಭೀತಿಯಲ್ಲಿದ್ದಾರೆ. ಮಿಚೆಲ್ ಮಾರ್ಶ್ 4 ಹಾಗೂ ಪ್ಯಾಟ್ ಕಮಿನ್ಸ್ ಮತ್ತು ಜೋಸ್ ಹೇಜಲ್’ವುಡ್ ತಲಾ 2 ವಿಕೆಟ್ ಪಡೆದರು. 

 • Team India New
  Video Icon

  SPORTS12, Sep 2019, 6:27 PM IST

  ತವರಿನಲ್ಲಿ ಟೀಂ ಇಂಡಿಯಾಗೆ ಕಾದಿದೆಯಾ ಮುಖಭಂಗ..?

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಮುಗ್ಗರಿಸಲಿದೆಯಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಅರೇ ಇದೇನಪ್ಪಾ, ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಒಂದೇ ಒಂದು ಸೋಲು ಕಾಣದೇ ಸರಣಿ ಗೆದ್ದುಕೊಂಡು ಬಂದಿರುವ ಟೀಂ ಇಂಡಿಯಾಗೆ ಸೋಲಿನ ಭೀತಿಯೇ ಎನ್ನಬಹುದು. ಆದರೆ ಬಲಿಷ್ಠ ಹರಿಣಗಳನ್ನು ಎದುರಿಸಲು ಇನ್ನೂ ಟೀಂ ಇಂಡಿಯಾ ಆಟಗಾರರು ಅಭ್ಯಾಸವನ್ನೇ ಆರಮಭಿಸಿಲ್ಲ. ಎಲ್ಲರೂ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
   

 • team india kali patti

  SPORTS12, Sep 2019, 4:56 PM IST

  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಆಘಾತ!

  ಸೌತ್ ಆಫ್ರಿಕಾ ವಿರುದ್ಧದ  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡ ಆಯ್ಕೆ ಮಾಡಿದೆ. ಟೆಸ್ಟ್ ತಂಡದಲ್ಲಿ ಯಾರಿಗೆ ಸ್ಥಾನ?  ಯಾರಿಗೆ ಕೊಕ್? ಇಲ್ಲಿದೆ ವಿವರ.

 • aussies

  SPORTS12, Sep 2019, 12:10 PM IST

  ಆ್ಯಷಸ್ ಕದನ: ಸರಣಿ ಜಯದ ನಿರೀಕ್ಷೆಯಲ್ಲಿ ಆಸೀಸ್..!

  3ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಹೆಡಿಂಗ್ಲೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಗೆಲುವು ಪಡೆದಿದ್ದ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ 4ನೇ ಟೆಸ್ಟ್‌ನಲ್ಲಿ ಮತ್ತದೇ ಕಳಪೆ ಪ್ರದರ್ಶನ ನೀಡಿತು. ಆ್ಯಷಸ್ ಗೆಲ್ಲುವ ಅವಕಾಶವನ್ನು ಇಂಗ್ಲೆಂಡ್ ಈಗಾಗಲೇ ಕೈ ಚೆಲ್ಲಿದೆ. ಕನಿಷ್ಠ ಪಕ್ಷ ಕೊನೆ ಟೆಸ್ಟ್ ಗೆದ್ದರೆ ಆತಿಥೇಯರು ಸರಣಿ ಸೋಲುವುದನ್ನು ತಪ್ಪಿಸಬಹುದು. 
   

 • Team india vs West Indies test

  SPORTS12, Sep 2019, 10:30 AM IST

  ಆಫ್ರಿಕಾ ಟೆಸ್ಟ್‌ಗೆ ಯಾರು ಇನ್..? ಯಾರು ಔಟ್..?

  ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಗುರುವಾರ ಸಭೆ ಸೇರಲಿದ್ದು, ಇದೇ ವೇಳೆ ಭಾರತ ತಂಡದಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಹಾಗೆ ದ.ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಯೂ ನಡೆಯಲಿದೆ. 

 • england team discuss in ashes

  SPORTS11, Sep 2019, 8:42 PM IST

  ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

  ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್‌ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

 • rohit sharma test

  SPORTS11, Sep 2019, 1:00 PM IST

  ರೋಹಿತ್‌ ಓಪನರ್ ಆಗೋದು ಪಕ್ಕಾ..! ಯಾಕಂದ್ರೆ..?

  ಏಕ​ದಿನ ಹಾಗೂ ಟಿ20 ಮಾದ​ರಿಯಲ್ಲಿ ಅದ್ಭುತ ಲಯ​ದ​ಲ್ಲಿ​ರುವ ರೋಹಿತ್‌ ಶರ್ಮಾ, ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿರೀ​ಕ್ಷಿತ ಯಶಸ್ಸು ಸಾಧಿ​ಸಿಲ್ಲ. ರೋಹಿತ್‌ ಈ ವರೆಗೂ 27 ಟೆಸ್ಟ್‌ಗಳನ್ನು ಆಡಿದ್ದು ಒಮ್ಮೆಯೂ ಆರಂಭಿ​ಕ​ನಾಗಿ ಕಣ​ಕ್ಕಿ​ಳಿ​ದಿಲ್ಲ. ಆದರೆ ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ ಮುಂಬೈ ಪರ ಆರಂಭಿ​ಕ​ನಾಗಿ ಆಡಿದ ಅನು​ಭವ ಹೊಂದಿ​ದ್ದಾರೆ. 

 • Rohit Sharma

  SPORTS11, Sep 2019, 9:58 AM IST

  ರಾಹುಲ್‌ ಬದಲು ರೋಹಿತ್‌ ಟೆಸ್ಟ್‌ ಓಪ​ನರ್‌?

  ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಪ್ರತಿ ಪಂದ್ಯವೂ ಮಹ​ತ್ವ​ದಾ​ಗಿದ್ದು, ಭಾರತ ಯಾವ ಎದು​ರಾ​ಳಿ​ಯನ್ನೂ ಲಘು​ವಾಗಿ ಪರಿ​ಗ​ಣಿ​ಸಲು ಸಾಧ್ಯ​ವಿಲ್ಲ. ಹೀಗಾಗಿ, ಪ್ರತಿ​ಯೊಂದು ಸಮಸ್ಯೆಗೂ ಶೀಘ್ರದಲ್ಲಿ ಸೂಕ್ತ ಪರಿ​ಹಾರ ಹುಡು​ಕಿ​ಕೊ​ಳ್ಳು​ವ ಅನಿ​ವಾ​ರ್ಯತೆ ಎದು​ರಾ​ಗಿದೆ.

 • Video Icon

  SPORTS10, Sep 2019, 4:51 PM IST

  ಕರುಣ್ ನಾಯರ್‌ಗೆ ಮತ್ತೆ ಸಿಗುತ್ತಾ ಟೀಂ ಇಂಡಿಯಾದಲ್ಲಿ ಸ್ಥಾನ..?

  ಕರುಣ್ ನಾಯರ್ ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಕ್ರಿಕೆಟಿಗ. ಆಡಿದ ಮೂರನೇ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದ ಕರುಣ್’ಗೆ ಆಡಲು ಅವಕಾಶ ಸಿಕ್ಕಿದ್ದು, ಕೇವಲ 6 ಟೆಸ್ಟ್ ಪಂದ್ಯಗಳನ್ನು ಮಾತ್ರ. ಆದರೆ ದೇಶಿ ಕ್ರಿಕೆಟ್’ನಲ್ಲಿ ಭರ್ಜರಿ ರನ್ ಕಲೆಹಾಕುತ್ತಿರುವ ಕರುಣ್ ನಾಯರ್’ಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಾ..?  ಕರುಣ್ ನಾಯರ್’ಗೆ ಲೇಡಿ ಲಕ್ ಕೈ ಹಿಡಿಯುತ್ತಾ..? ಈ ಕುರಿತಾದ ವರದಿ ಇಲ್ಲಿದೆ ನೋಡಿ...   
   

 • কেএল রাহুলের ছবি
  Video Icon

  SPORTS10, Sep 2019, 4:00 PM IST

  KL ರಾಹುಲ್ ಫ್ಲಾಪ್: ಸ್ಥಾನ ತುಂಬಲು ರೆಡಿಯಾದ ಮೂವರು ಕ್ರಿಕೆಟಿಗರು..!

  ಕಳೆದೆರಡು ವರ್ಷಗಳಿಂದಲೂ ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಕೆ.ಎಲ್ ಕಳಪೆ ಬ್ಯಾಟಿಂಗ್ ಪದೇ ಪದೇ ಮುಂದುವರೆದಿದೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್’ನಲ್ಲೂ ರಾಹುಲ್’ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ರಾಹುಲ್ ಅವರನ್ನು ಡ್ರಾಪ್ ಮಾಡುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಸ್ಥಾನ ತುಂಬಲು ಮೂವರು ಕ್ರಿಕೆಟಿಗರು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • Afghanistan

  SPORTS9, Sep 2019, 9:19 PM IST

  ಬಾಂಗ್ಲಾ ಮಣಿಸಿದ ಆಸ್ಟ್ರೇಲಿಯಾ ದಾಖಲೆ ಸರಿಗಟ್ಟಿದ ಅಫ್ಘಾನಿಸ್ತಾನ!

  ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲುವು ಸಾಧಿಸೋ ಮೂಲಕ ಇತಿಹಾಸ ರಚಿಸಿದೆ. ಇಷ್ಟೇ ಅಲ್ಲ ಆಸ್ಟ್ರೇಲಿಯಾ ಸಾಧನೆಯನ್ನೂ ಸರಿಗಟ್ಟಿದೆ. ಜೊತೆಗೆ ಹಲವು ದಾಖಲೆ ಬರೆದಿದೆ. ಆಫ್ಘಾನ್ ಭರ್ಜರಿ ಗೆಲುವು ಹಾಗೂ ದಾಖಲೆ ವಿವರ ಇಲ್ಲಿದೆ. 

 • ashes win

  SPORTS9, Sep 2019, 6:09 PM IST

  ಆ್ಯಷಸ್ ಕದನ: ಪಾಂಟಿಂಗ್, ಕ್ಲಾರ್ಕ್‌ಗೆ ಆಗದ್ದು, ಪೈನೆ ಮಾಡಿ ತೋರ್ಸಿದ್ರು..!

  2001ರಲ್ಲಿ ಆಸ್ಟ್ರೇಲಿಯಾ ಕಡೆಯ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ 4-1 ಆ್ಯಷಸ್ ಸರಣಿ ಗೆದ್ದು ಇತಿಹಾಸ ಬರೆದಿತ್ತು. ಆ ಬಳಿಕ ರಿಕಿ ಪಾಂಟಿಂಗ್ ಹಾಗೂ ಮೈಕೆಲ್ ಕ್ಲಾರ್ಕ್ ನೇತೃತ್ವದ ಆಸೀಸ್ ಪಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತಾದರೂ ಬರಿಗೈನಲ್ಲೇ ವಾಪಾಸ್ಸಾಗಿತ್ತು. ಆದರೆ ಟಿಮ್ ಪೈನೆ ನೇತೃತ್ವದ ತಂಡ ಸಾಂಪ್ರಾದಾಯಿಕ ಎದುರಾಳಿಯ ನೆಲದಲ್ಲೇ ಇನ್ನೊಂದು ಟೆಸ್ಟ್ ಪಂದ್ಯ ಬಾಕಿ ಇರುವಾಗಲೇ ಆ್ಯಷಸ್ ಕಪ್ ತವರಿಗೆ ಕೊಂಡ್ಯೊಯುವುದನ್ನು ಖಚಿತ ಪಡಿಸಿಕೊಂಡಿದೆ.

 • Rashid Khan

  SPORTS9, Sep 2019, 12:33 PM IST

  ಆಫ್ಘಾನಿಸ್ತಾನ ಗೆಲುವಿಗೆ ಬೇಕು ಕೇವಲ 4 ವಿಕೆಟ್..!

  398 ರನ್‌ಗಳ ಬೃಹತ್ ಸವಾಲನ್ನು ಬೆನ್ನತ್ತಿದ ಬಾಂಗ್ಲಾ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದು, 5ನೇ ಹಾಗೂ ಕೊನೆಯ ದಿನದಾಟದಲ್ಲಿ ಉಳಿದ 4 ವಿಕೆಟ್‌ಗಳಿಂದ 262 ರನ್‌ಗಳಿಸಬೇಕಿದೆ. 4ನೇ ದಿನದಾಟದಲ್ಲಿ ಕೆಲ ಹೊತ್ತು ಮಳೆ ಅಡ್ಡಿಪಡಿಸಿತು.