Asianet Suvarna News Asianet Suvarna News

ಕುತೂಹಲ ಘಟ್ಟಕ್ಕೆ ಭಾರತ-ಆಸೀಸ್ ವನಿತಾ ಟೆಸ್ಟ್..!

2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು.

McGrath leads Australia fight but India still in command kvn
Author
First Published Dec 24, 2023, 9:21 AM IST

ಮುಂಬೈ(ಡಿ.24): ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ನಡುವಿನ ಏಕೈಕ ಟೆಸ್ಟ್‌ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ದೊಡ್ಡ ಮುನ್ನಡೆ ಸಾಧಿಸಿದ ಹೊರತಾಗಿಯೂ, ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡಿದೆ. 3ನೇ ದಿನದಂತ್ಯಕ್ಕೆ ಆಸೀಸ್‌ 5 ವಿಕೆಟ್‌ಗೆ 233 ರನ್‌ ಗಳಿಸಿದ್ದು, 46 ರನ್‌ ಮುನ್ನಡೆ ಪಡೆದಿದೆ. ಭಾನುವಾರ ಕೊನೆ ದಿನವಾಗಿದ್ದು, ಭಾರತಕ್ಕೆ ದೊಡ್ಡ ಗುರಿ ನೀಡಲು ಕಾಯುತ್ತಿದೆ.

2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು.

ದುಬಾರಿ ವೇಗಿ ಮಿಚೆಲ್ ಸ್ಟಾರ್ಕ್‌ ಪತ್ನಿ ಅಲೀಸಾ ಹೀಲಿ ಗರ್ಭಿಣಿನಾ? ಐಪಿಎಲ್‌ನಲ್ಲಿ ಕೆಕೆಆರ್‌ಗೆ ಕೈ ಕೊಡ್ತಾರಾ ಆಸೀಸ್ ವೇಗಿ?

ಆಸೀಸ್‌ ತಿರುಗೇಟು: ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಬೆಥ್‌ ಮೂನಿ(33), ಲಿಚ್‌ಫೀಲ್ಡ್‌(18) ಬೇಗನೇ ಔಟಾದರೂ, 3ನೇ ವಿಕೆಟ್‌ಗೆ ಎಲೈಸಿ ಪೆರ್ರಿ ಹಾಗೂ ತಹಿಲಾ ಮೆಗ್ರಾಥ್‌ 84 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 45 ರನ್‌ ಗಳಿಸಿದ್ದ ಪೆರ್ರಿಗೆ ಸ್ನೇಹಾ ರಾಣಾ ಪೆವಿಲಿಯನ್ ಹಾದಿ ತೋರಿದರೆ, ಮೆಗ್ರಾಥ್‌(73) ಅವರನ್ನು ನಾಯಕಿ ಹರ್ಮನ್‌ಪ್ರೀತ್‌ ಔಟ್‌ ಮಾಡಿದರು. ಬಳಿಕ ಬಂದ ಅಲೀಸಾ ಹೀಲಿ(32) ಕೂಡಾ ಹರ್ಮನ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ಸದ್ಯ ಅನಾಬೆಲ್‌ ಸುಥರ್‌ಲಂಡ್‌ ಹಾಗೂ ಆ್ಯಶ್ಲೆ ಗಾರ್ಡ್ನರ್‌ ಕ್ರೀಸ್‌ನಲ್ಲಿದ್ದಾರೆ. ಸ್ನೇಹಾ ರಾಣಾ, ಹರ್ಮನ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: 
ಆಸ್ಟ್ರೇಲಿಯಾ 219/10 ಹಾಗೂ 233/5 (ತಹಿಲಾ 73, ಪೆರ್ರಿ 45, ಹರ್ಮನ್‌ 2-23) 
ಭಾರತ 406/10(ದೀಪ್ತಿ 78, ಪೂಜಾ 47, ಗಾರ್ಡ್ನರ್‌ 4-100)

ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!

01ನೇ ಗರಿಷ್ಠ: 8ನೇ ವಿಕೆಟ್‌ಗೆ ದೀಪ್ತಿ-ಪೂಜಾ 122 ರನ್‌ ಜೊತೆಯಾಟವಾಡಿದರು. ಇದು ಭಾರತ ಪರ ಮಹಿಳಾ ಟೆಸ್ಟ್‌ನಲ್ಲಿ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ಜೊತೆಯಾಟ.

ಭಾರತ ಕಿರಿಯರ ತಂಡಕ್ಕೆ ಡಿ.29ರಿಂದ ತ್ರಿಕೋನ ಸರಣಿ

ನವದೆಹಲಿ: ಮುಂಬರುವ ವಿಶ್ವಕಪ್‌ಗೂ ಮುನ್ನ ಭಾರತ ಅಂಡರ್‌-19 ಪುರುಷರ ತಂಡ ದ.ಆಫ್ರಿಕಾ ಹಾಗೂ ಅಪ್ಘಾನಿಸ್ತಾನ ವಿರುದ್ಧ ತ್ರಿಕೋನ ಸರಣಿಯನ್ನಾಡಲಿದೆ. ಪ್ರತಿ ತಂಡಗಳು 2 ಬಾರಿ ಮುಖಾಮುಖಿಯಾಗಲಿವೆ. ಡಿ.29 ರಂದು ಭಾರತ ತಂಡ ಆಫ್ಘನ್‌ ವಿರುದ್ಧ ಮೊದಲ ಪಂದ್ಯವಾಡಲಿದ್ದು, ಆಫ್ರಿಕಾ ವಿರುದ್ಧ ಜ.2ರಂದು ಸೆಣಸಲಿದೆ. ಜ.10ರಂದು ಫೈನಲ್‌ ನಡೆಯಲಿದೆ. ಎಲ್ಲ ಪಂದ್ಯಗಳು ಜೋಹಾನ್ಸ್‌ಬರ್ಗ್‌ನಲ್ಲಿ ಆಯೋಜನೆಗೊಳ್ಳಲಿವೆ. ಜ.19ರಿಂದ ಅಂಡರ್‌ 19 ವಿಶ್ವಕಪ್‌ ಪ್ರಾರಂಭವಾಗಲಿದೆ.
 

Latest Videos
Follow Us:
Download App:
  • android
  • ios