Asianet Suvarna News Asianet Suvarna News

ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ಕೆ.. ಪಡಿಕ್ಕಲ್-ಗಾಯಕ್ವಾಡ್‌ಗೆ ಅವಕಾಶ

* ಲಂಕಾ ಎದುರಿನ ಎರಡನೇ ಟಿ20 ಪಂದ್ಯ 
* ಶ್ರೀಲಂಕಾ ಎದುರಿನ ಎರಡನೇ ಪಂದ್ಯಕ್ಕೆ ಶಿಖರ್ ಧವನ್ ಲಭ್ಯ
* ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ಕೆ

SL vs IND 2nd T20I Sri Lanka win toss opt to bowl first mah
Author
Bengaluru, First Published Jul 28, 2021, 8:15 PM IST
  • Facebook
  • Twitter
  • Whatsapp

ಕೊಲಂಬೊ(ಜು.28): ಕೊರೋನಾ ಕಾರಣಕ್ಕೆ  ಸ್ಥಗಿತವಾಗಿದ್ದ  ಪಂದ್ಯದ ಟಾಸ್ ಆಗಿದ್ದು ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಹಾಗೂಅದೇ ರೀತಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಸಂಪೂರ್ಣ ಫಿಟ್‌ ಆಗಿದ್ದು, ಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

ಜುಲೈ 27ರಂದು ಆರಂಭವಾಗಬೇಕಿದ್ದ ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಇನ್ನು ಕೃನಾಲ್‌ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನುಳಿದ ಏಳು ಆಟಗಾರರನ್ನು ಹೋಟೆಲ್‌ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ಕೃನಾಲ್ ಪಾಂಡ್ಯ ಸೇರಿ ಒಟ್ಟು  8 ಆಟಗಾರರು ಲಂಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.

INDvSL 2ನೇ ಪಂದ್ಯ ಕೊರೋನಾ ಕಾರಣ ಮುಂದೂಡಿಕೆ; ಹೊಸ ವೇಳಾಪಟ್ಟಿ ಬಿಡುಗಡೆ!

ಇದು  ಮೊದಲು ಆಡಿದ್ದ ಪಿಚ್ ಆಗಿದ್ದು ಕಳೆದ ರಾತ್ರಿ ಕವರ್ ಆಗಿತ್ತು. ಮೊದಲು ಬೌಲಿಂಗ್ ಮಾಡಿದರೆ ಲಾಭ ಆಗುವ ನಿರೀಕ್ಷೆ ಇರುವುದರಿಂದ ಬೌಲಿಂಗ್ ತೆಗೆದುಕೊಂಡಿದ್ದೇವೆ ಶ್ರೀಲಂಕಾ ನಾಯಕ ದಸುನ್ ಶನಕ  ತಿಳಿಸಿದ್ದಾರೆ.

ನಮಗೆ  ಮೊದಲು ಬ್ಯಾಟಿಂಗ್ ಸಿಕ್ಕಿರುವುದು ಖುಷಿಯೇ ಇದೆ.  ಕೆಲವೊಂದು ಕಾರಣಕ್ಕೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಪಂದ್ಯಕ್ಕೆ ದೀಪಕ್ ಚಹರ್ ಮತ್ತೆ ಮನೀಶ್ ಪಾಂಡೆ ಲಭ್ಯವಿಲ್ಲ ಎಂದು ಭಾರತದ ನಾಯಕ ಶಿಖರ್ ಧವನ್  ತಿಳಿಸಿದ್ದಾರೆ.

ಭಾರತ; ಶಿಖರ್ ಧವನ್(ನಾಯಕ), ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸಾಮ್ಸನ್, ನೀತಿಶ್ ರಾಣಾ, ಭುವನೇಶ್ವರ ಕುಮಾರ್, ನೀತಿಶ್ ರಾಣಾ, ಕುಲದೀಪ್ ಯಾದವ್, ರಾಹುಲ್ ಚಹಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ

 

Follow Us:
Download App:
  • android
  • ios