Asianet Suvarna News Asianet Suvarna News

INDvSL 2ನೇ ಪಂದ್ಯ ಕೊರೋನಾ ಕಾರಣ ಮುಂದೂಡಿಕೆ; ಹೊಸ ವೇಳಾಪಟ್ಟಿ ಬಿಡುಗಡೆ!

  • ಭಾರತ-ಶ್ರೀಲಂಕಾ ನಡುವಿನ 2ನೇ ಪಂದ್ಯ ಮುಂದೂಡಿಕೆ
  • ಕೊರೋನಾ ಕಾರಣ ಪಂದ್ಯ ಮುಂದೂಡಿದ ಲಂಕಾ-ಬಿಸಿಸಿಐ ಮಂಡಳಿ
  • ಹೊಸ ವೇಳಾಪಟ್ಟಿ ಬಿಡುಗಡೆ, ಪಂದ್ಯದ ದಿನಾಂಕ ಬದಲಾವಣೆ
Second Sri Lanka India T20I match postponed due to Coronavirus annouces revised schedule ckm
Author
Bengaluru, First Published Jul 27, 2021, 7:49 PM IST
  • Facebook
  • Twitter
  • Whatsapp

ಕೊಲೊಂಬೊ(ಜು.27): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಗೆ ಕೊರೋನಾ ಹೊಡೆತ ನೀಡಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿತ್ತು. 2ನೇ ಪಂದ್ಯ ಗೆದ್ದು ಸರಣಿ ಗೆಲುವಿನ ತವಕದಲ್ಲಿದ್ದ ಟೀಂ ಇಂಡಿಯಾಗೆ ಆಘಾತ ಕಾದಿತ್ತು. ಕ್ರುನಾಲ್ ಪಾಂಡ್ಯ ಕೊರೋನಾ ದೃಢಪಟ್ಟ ಕಾರಣ ಇಂದು(ಜು.27) ಆಯೋಜಿಸಿದ್ದ 2ನೇ ಟಿ20 ಪಂದ್ಯವನ್ನು ಮುಂದೂಡಲಾಗಿದೆ. ಇದೀಗ ಉಭಯ ಮಂಡಳಿಗಳು ಮಹತ್ವದ ಸಭೆ ನೆಡೆಸಿ ಹೊಸ ವೇಳಾಪಟ್ಟಿ ಪ್ರಕಟಿಸಿದೆ.

India vs Sri Lanka ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್‌:ಎರಡನೇ ಟಿ20 ಪಂದ್ಯ ದಿಢೀರ್ ರದ್ದು..!

ಟೀಂ ಇಂಡಿಯಾ ಅಲ್ರೌಂಡರ್ ಕ್ರುನಾಲ್ ಪಾಂಡ್ಯಗೆ ಕೊರೋನಾ ಪಾಸಿಟೀವ್ ದೃಢಪಟ್ಟಿತ್ತು. ಅನಿವಾರ್ಯವಾಗಿ ಪಂದ್ಯ ಮುಂದೂಡಬೇಕಾಯಿತು.  ಇದೀಗ ಇಂದಿನ ಪಂದ್ಯವನ್ನು ನಾಳೆಗೆ(ಜು.28ಕ್ಕೆ ಮುಂದುಡಲಾಗಿದೆ. ಆದರೆ ಅಂತಿಮ ಟಿ20 ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಭಾರತ-ಶ್ರೀಲಂಕಾ ಟಿ20 ಸರಣಿ ಹೊಸ ವೇಳಾಪಟ್ಟಿ
ಜುಲೈ 28, 2ನೇ ಟಿ20 ಪಂದ್ಯ ಕೊಲೊಂಬೊ
ಜುಲೈ 29, 3ನೇ ಟಿ20 ಪಂದ್ಯ ಕೊಲೊಂಬೊ

Follow Us:
Download App:
  • android
  • ios