Asianet Suvarna News Asianet Suvarna News

ಅವನಿಗೇನೂ ಶುಭ ಕೋರಲ್ಲ; ಆದ್ರೆ ಆತ ದುಡಿಯೋ ದುಡ್ಡಲ್ಲಿ ಹೆಚ್ಚು ಲಾಭ ಬಂದ್ರೆ ಸಾಕೆಂದ Mohammed Shami ಮಾಜಿ ಪತ್ನಿ

ಅವರು ತಂಡದಲ್ಲಿ ಹೆಚ್ಚು ಸಮಯ ಇದ್ದಷ್ಟು, ತನ್ನ ಹಾಗೂ ತನ್ನ ಮಗಳ ಭವಿಷ್ಯ ಹೆಚ್ಚು ಭದ್ರವಾಗಿರುತ್ತದೆ ಎಂದು ಮೊಹಮ್ಮದ್‌ ಶಮಿ ಮಾಜಿ ಪತ್ನಿ ಹಸಿನ್‌ ಜಹಾನ್‌ ಹೇಳಿದ್ದಾರೆ. 

wont give best wishes to mohammed shami says india pacers ex wife hasin jahan watch video ash
Author
First Published Nov 8, 2023, 2:04 PM IST

ನವದೆಹಲಿ (ನವೆಂಬರ್ 8, 2023): ಐಸಿಸಿ ಕ್ರಿಕೆಟ್‌ ವಿಶ್ವಕಪ್ 2023ಯಲ್ಲಿ ಭಾರತ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್‌ ಶಮಿ ಅದ್ಭುತ ಫಾರ್ಮ್‌ನಲ್ಲಿದ್ದು, ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು, ಮೊಹಮ್ಮದ್‌ ಶಮಿ ಅವರ ಅದ್ಭುತ ಪ್ರದರ್ಶನಕ್ಕೆ ಅವರ ಮಾಜಿ ಪತ್ನಿ ಹಸಿನ್‌ ಜಹಾನ್‌ ಪ್ರತಿಕ್ರಿಯೆ ಹೇಗಿದೆ ಗೊತ್ತಾ?  

ಈ ಸಂಬಂಧ ಮಾಧ್ಯಮವೊಂದಕ್ಕೆ ಮಾತನಾಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್, ಅವರು ತಂಡದಲ್ಲಿ ಹೆಚ್ಚು ಸಮಯ ಇದ್ದಷ್ಟು, ತಮ್ಮ ಭವಿಷ್ಯವನ್ನು ಭದ್ರಪಡಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಐಸಿಸಿ ವಿಶ್ವಕಪ್ 2023 ರಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿರುವ ಭಾರತೀಯ ವೇಗದ ಬೌಲರ್‌ ಮೊಹಮ್ಮದ್‌ ಶಮಿಗೆ ಶುಭ ಕೋರಲು ನಿರಾಕರಿಸಿದ್ದಾರೆ.

ಇದನ್ನು ಓದಿ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಮನುಷ್ಯನೇ ಅಲ್ಲ: ವಿಶ್ವಕಪ್‌ನಲ್ಲಿ ಕ್ರೇಜಿ ಆಟವಾಡಿದ ಆರ್‌ಸಿಬಿ ಬ್ಯಾಟರ್‌ಗೆ ನೆಟ್ಟಿಗರ ಮೆಚ್ಚುಗೆ

ಭಾರತದ ಅಭಿಯಾನದ ಮೊದಲ 4 ಪಂದ್ಯಗಳನ್ನು ಆಡದಿದ್ದರೂ, ಉಳಿದ 4 ಏಕದಿನ ಪಂದ್ಯಗಳಿಂದಲೇ ಮೊಹಮ್ಮದ್‌ ಶಮಿ 7.00 ಸರಾಸರಿಯಲ್ಲಿ 16 ವಿಕೆಟ್‌ಗಳೊಂದಿಗೆ ತಂಡದ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಕೊನೆಯ ನಾಲ್ಕು ಪಂದ್ಯಗಳಲ್ಲಿ ಶಮಿ ಈಗಾಗಲೇ 2 ಬಾರಿ ಐದು ವಿಕೆಟ್‌ ಮತ್ತು ಒಮ್ಮೆ 4 ವಿಕೆಟ್ ಪಡೆದಿದ್ದಾರೆ.

33 ವರ್ಷ ವಯಸ್ಸಿನ ಮೊಹಮ್ಮದ್‌ ಶಮಿ ಮೊದಲ ನಾಲ್ಕು ಪಂದ್ಯಗಳನ್ನು ಆಡದಿದ್ದರೂ ಈ ವಿಶ್ವಕಪ್‌ನಲ್ಲಿ 4ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆದರೆ, ಈ ಬಗ್ಗೆ ಖುಷಿ ಪಡದ ಶಮಿ ಮಾಜಿ ಪತ್ನಿ, ಶಮಿ ದೇಶಕ್ಕಾಗಿ ಒಳ್ಳೆಯದನ್ನು ಮಾಡಿದರೆ ಅವರು ಚೆನ್ನಾಗಿ ಸಂಪಾದಿಸುತ್ತಾರೆ ಮತ್ತು ತನಗೆ ಹಾಗೂ ತನ್ನ ಮಗಳು ಐರಾಗೆ ಹಣ ಒದಗಿಸಲು ಸಾಧ್ಯವಾಗುತ್ತದೆ ಎಂದು ಹಸಿನ್‌ ಜಹಾನ್ ಹೇಳಿದ್ದಾರೆ. ‘’ಏನೇ ಆಗಲಿ, ಅವರು (ಶಮಿ) ಉತ್ತಮ ಪ್ರದರ್ಶನ ನೀಡಿದರೆ, ಭಾರತ ತಂಡದಲ್ಲಿ ಉಳಿದುಕೊಂಡು ಚೆನ್ನಾಗಿ ಗಳಿಸಿದರೆ, ಅದು ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತದೆ’’ ಎಂದಿದ್ದಾರೆ ಹಸನ್‌ ಜಹಾನ್.

ಇದನ್ನೂ ಓದಿ: 'ದೇಶಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..?' ವೇಗಿ ಮೊಹಮ್ಮದ್ ಶಮಿಯ ಹೇಳಿಕೆ ಈಗ ವೈರಲ್..!

ಇಡೀ ದೇಶವೇ ಮೊಹಮ್ಮದ್‌ ಶಮಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವಾಗ, ಮಾಜಿ ಪತ್ನಿ ಹಸಿನ್‌ ಜಹಾನ್ ಮಾತ್ರ ತಮ್ಮ ಮಾಜಿ ಪತಿಗೆ ಉಳಿದ ಪಂದ್ಯಗಳಿಗೆ ಶುಭ ಹಾರೈಸುವ ಆಸಕ್ತಿಯೇ ಇಲ್ಲ ಅನ್ನೋದು ವಿಪರ್ಯಾಸ. ನ್ಯೂಸ್ ನೇಷನ್‌ ಮಾದ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಸಿನ್‌ ಜಹಾನ್, "ನಾನು ಟೀಮ್ ಇಂಡಿಯಾಗೆ ನನ್ನ ಶುಭಾಶಯಗಳನ್ನು ನೀಡುತ್ತೇನೆ. ಆದರೆ ಅವರಿಗಲ್ಲ" ಎಂದೂ ಹೇಳಿದ್ದಾರೆ.

ಮೊಹಮ್ಮದ್ ಶಮಿ vs ಹಸಿನ್ ಜಹಾನ್
ಮೊಹಮ್ಮದ್‌ ಶಮಿ ವಿರುದ್ಧ ಹಸಿನ್‌ ಜಹಾನ್‌, ವ್ಯಭಿಚಾರ, ವೈವಾಹಿಕ ಅತ್ಯಾಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿದ್ದಾರೆ. ಅಲ್ಲದೆ, ಅವರು ತನ್ನ ಆರೋಪಗಳ ಪುರಾವೆಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಿಡುಗಡೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಅವರು ತಮ್ಮ ಏಕೈಕ ಮಗುವನ್ನು ಸಹ ಅವರ ಕಸ್ಟಡಿಯಲ್ಲೇ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಮೊಹಮ್ಮದ್ ಶಮಿ ಸಾಧನೆಗೆ ಧರ್ಮದ ಲೇಬಲ್: ಕ್ರಿಕೆಟ್ನಲ್ಲಿ ಧರ್ಮವನ್ನ ಎಳೆದು ತಂದ ಪಾಕಿಗಳು..!

ಆದರೆ, ಮೊಹಮ್ಮದ್‌ ಶಮಿ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದರು ಮತ್ತು ಅವರ ಪತ್ನಿ ರಾಕ್ಷಸಿ ಎಂದು ಹೇಳಿದರು ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳ ಕುರಿತು ಮಾತನಾಡುವಾಗ 'ನಾನು ನನ್ನ ದೇಶಕ್ಕೋಸ್ಕರ ಸಾಯಬಹುದು. ಆದರೆ ಎಂದಿಗೂ ದ್ರೋಹ ಮಾಡುವುದಿಲ್ಲ' ಎಂದು ಹೇಳಿದ್ದರು. ಶಮಿ ವಿರುದ್ಧದ ಬಂಧನ ವಾರಂಟ್ ಮೇಲಿನ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್ ತನ್ನ ಮನವಿಯನ್ನು ವಜಾಗೊಳಿಸಿದ ನಂತರ ಜಹಾನ್ ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios