ಹಾರ್ದಿಕ್ ಪಾಂಡ್ಯಾ ರಾಂಚಿಗೆ ಬಂದಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಅವರು ಧೋನಿ ಜೊತೆ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  

ನವದೆಹಲಿ: ಎಲ್ಲರಿಗೂ ಗೊತ್ತಿರುವಂತೆ ಹಾರ್ದಿಕ್ ಪಾಂಡ್ಯಾ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಡುವಿನ ಒಡನಾಟ ಕ್ರಿಕೆಟ್ ಮೈದಾನದಿಂದಾಚೆಗೂ ತುಂಬಾ ಚೆನ್ನಾಗಿದೆ. ಆಲ್‌ರೌಂಡರ್ ಪಾಂಡ್ಯಾ ಹಲವು ಈಗಾಗಲೇ ಹಲವು ಬಾರಿ ಲೆಜೆಂಡ್ ಆಟಗಾರ ಮಹೇಂದ್ರ ಸಿಂಗ್ ಧೋನಿಯನ್ನು ಗೌರವಿಸುವ ಸಂದರ್ಭವನ್ನು ಎಂದೂ ಮಿಸ್ ಮಾಡಿಲ್ಲ. ಹೀಗಾಗಿಯೇ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಾವಳಿಗೂ ಮೊದಲು ಅವರು ಧೋನಿಯನ್ನು ಭೇಟಿಯಾಗಿರುವುದರಲ್ಲಿ ಯಾರಿಗೂ ಅಚ್ಚರಿ ಇಲ್ಲ. ಭಾರತ ತಂಡದ ಉಪನಾಯಕನಾಗಿರುವ ಹಾರ್ದಿಕ್‌ ಪಾಂಡ್ಯಾಗೆ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಮಹತ್ವದ್ದಾಗಿದೆ. ಹಾರ್ದಿಕ್ ಪಾಂಡ್ಯಾ ರಾಂಚಿಗೆ ಬಂದಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಅವರು ಧೋನಿ ಜೊತೆ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಶೋಲೆ (Sholey Movie) ಸಿನಿಮಾದಲ್ಲಿರುವಂತೆ ಬೈಕ್‌ನಲ್ಲಿ ಹಾರ್ದಿಕ್ ಪಾಂಡ್ಯಾ (Hardik Pandya) ಕುಳಿತಿದ್ದರೆ, ಅಟ್ಯಾಚ್ ಆಗಿರುವ ಸೈಡ್ ಕಾರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕುಳಿತಿದ್ದಾರೆ. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯಾ ಶೋಲೆ -2 ಕಮಿಂಗ್ ಎಂದು ಕ್ಯಾಪ್ಟನ್ ನೀಡಿದ್ದಾರೆ. 1975ರಲ್ಲಿ ತೆರೆಕಂಡ ಶೋಲೆ ಸಿನಿಮಾದಲ್ಲಿ ಬಾಲಿವುಡ್‌ ಲೆಜೆಂಡ್‌ಗಳಾದ ನಟ ಧರ್ಮೆಂದ್ರ (Dharmendra) ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachan) ಕೂಡ ಇದೇ ರೀತಿಯ ಬೈಕ್‌ನಲ್ಲಿ ಇಬ್ಬರು ಹಾಡುತ್ತಾ ಸಾಗುವ ಸೀನ್ ಇದೆ ಅದೇ ರೀತಿ ಇಲ್ಲಿ ಹಾರ್ದಿಕ್ ಪಾಂಡ್ಯಾ ಆ ಸಿನಿಮಾದ ಪಾತ್ರಗಳಾದ ಜೈ ಹಾಗೂ ವೀರೂಗೆ ಧೋನಿ ಹಾಗೂ ತಮ್ಮನ್ನು ಹೋಲಿಸಿಕೊಂಡಿದ್ದಾರೆ. 

ಹಾರ್ದಿಕ ಪಾಂಡ್ಯ- ವಿರಾಟ್‌ ಕೊಹ್ಲಿ: ಟಾಪ್ ಕ್ರಿಕೆಟರ್ಸ್‌ಗಳ ಹಾಟ್‌ ಪತ್ನಿಯರು

ಬಾಲಿವುಡ್ ಸಿನಿಮಾ ರಂಗದಲ್ಲೇ ಒಂದು ಬ್ಲಾಕ ಬಸ್ಟರ್ ಮೂವಿ ಆಗಿರುವ ಶೋಲೆ ಸಿನಿಮಾ ಸ್ಟೈಲ್‌ನ ಈ ಬೈಕ್‌ಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಬೈಕ್‌ನ ಡ್ರೈವರ್ ಸೀಟ್‌ನಲ್ಲಿ ಹಾರ್ದಿಕ್ ಕುಳಿತಿದ್ದರೆ, ಪಕ್ಕದ ಸೈಡ್ ಕಾರ್‌ನಲ್ಲಿ (Side car) ಧೋನಿ ಕುಳಿತು ಫೋಟೋಗೆ ಸಖತ್ ಫೋಸ್ ನೀಡಿದ್ದಾರೆ. 

ಸಿನಿಮಾಗೂ ಕ್ರಿಕೆಟ್ ಲೋಕಕ್ಕೂ ಅವಿನಾಭಾವ ಸಂಬಂಧ ಅನೇಕ ಕ್ರಿಕೆಟ್ ತಾರೆಯರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಆದರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ತನ್ನ ಹೆಸರಿನಲ್ಲೇ ಪ್ರೊಡಕ್ಷನ್ ಹೌಸ್‌ ಒಂದನ್ನು ತೆರೆದಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಎಂಬ ಸಂಸ್ಥೆ ತೆರೆದಿರುವ ಧೋನಿ ಮುಂದೆ ಸಿನಿಮಾದಲ್ಲಿ ನಟಿಸಿದರು ಅಚ್ಚರಿ ಏನಿಲ್ಲ. ದಕ್ಷಿಣ ಭಾರತದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಧೋನಿ ಈ ಪ್ರೊಡಕ್ಷನ್ ಹೌಸ್ ಅನ್ನು ಸ್ಥಾಪಿಸಿದ್ದು, ಇದಕ್ಕೆ ಪತ್ನಿ ಸಾಕ್ಷಿ ಸಾರಥ್ಯವಿದೆ. ತಮಿಳು (Tamil), ತೆಲುಗು (Telugu) ಮಲೆಯಾಳಂ ಭಾಷೆಯಲ್ಲಿ ಸಿನಿಮಾ ನಿರ್ಮಿಸುವ ಗುರಿ ಹೊಂದಿರುವ ಧೋನಿ ಎಂಟರ್‌ಟೈನ್‌ಮೆಂಟ್ (Dhoni entertainment) ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಸ್ಕ್ರಿಪ್ಟ್ ರೈಟರ್‌ಗಳೊಂದಿಗೆ ವೈಜ್ಞಾನಿಕ ಕಾದಂಬರಿ, ಸಸ್ಪೆನ್ಸ್ ಥ್ರಿಲ್ಲರ್, ಅಪರಾಧ ಕಥೆ, ನಾಟಕ ಮತ್ತು ಹಾಸ್ಯ ಸೇರಿದಂತೆ ಅತ್ಯಾಕರ್ಷಕ ಮತ್ತು ಅರ್ಥಪೂರ್ಣ ಕಂಟೆಂಟ್ ರಚಿಸಲು ಮತ್ತು ನಿರ್ಮಿಸಲು ಮಾತುಕತೆ ನಡೆಸುತ್ತಿದೆ.

ನಿಧಾನಗತಿ ಬ್ಯಾಟಿಂಗ್‌: ಧೋನಿ ಮೇಲೆ ಸಿಟ್ಟಾಗಿದ್ದ ರವಿಶಾಸ್ತ್ರಿ..!

ಇತ್ತ ಹಾರ್ದಿಕ್ ಪಾಂಡ್ಯಾಗೆ ಈಗಾಗಲೇ ಐರ್ಲೆಂಡ್, ಶ್ರೀಲಂಕಾ (Sri Lanka), ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತದ ತಂಡವನ್ನು ಮುನ್ನಡೆಸಿರುವ ಅನುಭವ ಇದ್ದು, ಜೊತೆಗೆ 2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ ತಂಡವನ್ನು ಮುಂದುವರೆಸಿ ತಮ್ಮ ಉತ್ತಮ ನಾಯಕತ್ವವನ್ನು ತೋರಿಸಿದ್ದಾರೆ. ಹೀಗಾಗಿ ಅನೇಕ ಹಿರಿಯರು ಆತನಿಗೆ ನಾಯಕ ಪಟ್ಟದ ಸಲಹೆ ನೀಡಿದ್ದರು. ಈ ಮಧ್ಯೆ ಈಗ ಪಾಂಡ್ಯಾ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುಂದುವರೆಸುತ್ತಿದ್ದಾರೆ. 

Scroll to load tweet…