ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ 'ಚಿಲ್‌ ವಿತ್‌ ಮೈ ಡಾಟರ್‌' ಎಂದು ತಮ್ಮ ಮಗಳ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಲಾಹೋರ್‌ (ಜೂ.16): ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್‌ ಅಖ್ತರ್‌, ಸೋಶಿಯಲ್ ಮೀಡಿಯಾದಲ್ಲಿ 'ಅಯ್ಲೀನ್‌ ಶೇಖ್‌' ಎನ್ನುವ ಹೆಸರಿನ ಹುಡುಗಿಯ ಜೊತೆ ಫೋಟೋವೊಂದನ್ನು ಪೋಸ್ಟ್‌ ಮಾಡಿದ್ದು, 'ಚಿಲ್‌ ವಿತ್‌ ಮೈ ಡಾಟರ್‌' ಎಂದು ಕರೆದಿದ್ದಾರೆ. ಅಯ್ಲೀನ್‌ ಶೇಖ್‌ರನ್ನು ತಮ್ಮ ಮಗಳು ಎಂದು ಕರೆದಿರುವುದು ಕ್ರಿಕೆಟ್‌ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ವಿಶ್ವದ ಅತ್ಯಂತ ಪ್ರಖರ ವೇಗಿಗಳ ಸಾಲಿನಲ್ಲಿ ನಿಲ್ಲುವ ಶೋಯೆಬ್‌ ಅಖ್ತರ್‌, ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದರು. ಅದರೊಂದಿಗೆ ಅಯ್ಲೀನ್‌ ಶೇಖ್‌ರ ಇನ್ಸ್‌ಟಾ ಐಡಿಯನ್ನೂ ಟ್ಯಾಗ್‌ ಮಾಡಿದ್ದರು. ಮಗಳೊಂದಿಗೆ ಚಿಲ್‌ ಮೋಡ್‌ನಲ್ಲಿದ್ದೇನೆ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಅಖ್ತರ್‌ ಸ್ಟೋರಿ ಶೇರ್‌ ಮಾಡಿದ ಬೆನ್ನಲ್ಲಿಯೇ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ನಿಮಗೆ ಇಷ್ಟು ದೊಡ್ಡ ಮಗಳಿರಲು ಹೇಗೆ ಸಾಧ್ಯ ಎಂದೇ ಪ್ರಶ್ನೆ ಮಾಡಿದ್ದಾರೆ. 2014ರ ಜುಲೈ 23 ರಂದು ಶೋಯೆಬ್‌ ಅಖ್ತರ್‌, ರುಬಾಬ್‌ ಖಾನ್‌ರನ್ನು ವಿವಾಹವಾಗಿದ್ದರು.

ಅದರೊಂದಿಗೆ ಇಲ್ಲಿವರೆಗೂ ಅಯ್ಲೀನ್‌ ಶೇಖ್‌ ಎಲ್ಲಿದ್ದಳು ಎಂದೂ ಪ್ರಶ್ನೆ ಮಾಡಲು ಆರಂಭ ಮಾಡಿದ್ದಾರೆ. ಹೆಚ್ಚಿನವರಿಗೆ ಈಕೆ ಅಖ್ತರ್‌ನ ಮಗಳು ಹೌದೋ? ಅಲ್ಲವೋ? ಎನ್ನುವ ಅನುಮಾನವೇ ಹೆಚ್ಚಾಗಿ ಕಾಡಿದೆ. ರುಬಾಬ್‌ ಖಾನ್‌ರನ್ನು ಮದುವೆಯಾಗಿದ್ದ ಶೋಯೆಬ್‌ ಅಖ್ತರ್‌, 2016ರ ನವೆಂಬರ್‌ 7 ರಂದು ತನ್ನ ಮೊದಲ ಪುತ್ರ ಮಿಖೇಲ್‌ ಜನಿಸಿದ್ದಾಗಿ ತಿಳಿಸಿದ್ದರು. ಆ ಬಳಿಕ 2019ರ ಜುಲೈ 14 ರಂದು 2ನೇ ಪುತ್ರ ಜನಿಸಿದ್ದಾಗಿ ಮಾಹಿತಿ ನೀಡಿದ್ದರು. ಅದೇ ವರ್ಷದ ಕೊನೆಯಲ್ಲಿ ತಮ್ಮ 2ನೇ ಮಗನೊಂದಿಗೆ ಫೋಟೋವನ್ನು ಹಂಚಕೊಂಡಿದ್ದ ಅಖ್ತರ್‌, 'ನನ್ನ 2ನೇ ಮಗನನ್ನು ಬಿಟ್ಟಿರಲು ಆಗುತ್ತಿಲ್ಲ. ನೀವೆಲ್ಲಾ ಆಶೀರ್ವಾದ ಮಾಡಿ' ಎಂದು ಟ್ವೀಟ್‌ ಮಾಡಿದ್ದರು.

ಇಲ್ಲಿವರೆಗೂ ಶೋಯೆಬ್‌ ಅಖ್ತರ್‌ ತಮಗೆ ಮಗಳು ಇರುವ ಬಗ್ಗೆ ಎಂದೂ ತಿಳಿಸಿರಲಿಲ್ಲ. ಚಿತ್ರದಲ್ಲಿರುವ ಹುಡುಗಿ ಅಖ್ತರ್‌ ಅವರ ನಿಜವಾದ ಪುತ್ರಿಯೇ ಅಥವಾ ಸಂಬಂಧಿಗಳ ಪುತ್ರಿಯೇ ಎನ್ನುವುದರ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದಾರೆ.

ಬ್ರಿಜ್‌ ವಿರುದ್ಧ ಜಾರ್ಜ್‌ಶೀ​ಟ್‌: 6 ಮಂದಿ ಮೇಲೆ ಲೈಂಗಿಕ ಕಿರುಕುಳ ತನಿಖೆಯಿಂದ ಸಾಬೀತು..!

ಪ್ರಸ್ತುತ ವಿಶ್ಲೇಷಕರಾಗಿರುವ ಶೋಯೆಬ್‌ ಅಖ್ತರ್‌, ಪಾಕಿಸ್ತಾನದ ಪರವಾಗಿ 163 ಏಕದಿನ ಪಂದ್ಯಗಳನ್ನು ಆಡಿದ್ದು, 24.97ರ ಸರಾಸರಿಯಲ್ಲಿ 247 ವಿಕೆಟ್‌ ಉರುಳಿಸಿದ್ದಾರೆ. 46 ಟೆಸ್ಟ್‌ ಪಂದ್ಯಗಳನ್ನೂ ಆಡಿರುವ ಇವರು 178 ವಿಕೆಟ್‌ ಉರುಳಿಸಿದ್ದಾರೆ.

Asia Cup 2023: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕ್‌, ಶ್ರೀಲಂಕಾ ಹೈಬ್ರಿಡ್‌ ಆತಿಥ್ಯ!