Asia Cup 2023: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪಾಕ್, ಶ್ರೀಲಂಕಾ ಹೈಬ್ರಿಡ್ ಆತಿಥ್ಯ!
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಪಂದ್ಯಗಳು ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.
ನವದೆಹಲಿ (ಜೂ.15): ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಾಗಿ ತಿಳಿಸಿದೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾ ಹಾಗೂ ನೇಪಾಳ ತಂಡಗಳು ಭಾಗವಹಿಸಿಲಿದ್ದು ಆಗಸ್ಟ್ 31 ರಿಂದ ಸೆಪ್ಟೆಂಬರ್ 17ರವರೆಗೆ ಟೂರ್ನಿ ನಡೆಯಲಿದೆ ಎಂದು ತಿಳಿಸಿದೆ. ಒಟ್ಟು 13 ಏಕದಿನ ಪಂದ್ಯಗಳು ನಡೆಯಲಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದರೆ, ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳಲಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಒಂದೇ ಆವೃತ್ತಿ ಎರಡು ದೇಶಗಳಲ್ಲಿ ನಡೆಯಲಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಅತಿಥ್ಯ ವಹಿಸಿಕೊಳ್ಳಬೇಕಿತ್ತು. ಆದರೆ, ಪಾಕಿಸ್ತಾನದಲ್ಲಿ ಭಾರತ ತಂಡ ಪಂದ್ಯವಾಡಲು ಕೇಂದ್ರ ಸರ್ಕಾರದ ಅನುಮತಿ ನೀಡೋದಿಲ್ಲ. ಇದಕ್ಕಾಗಿ ಟೂರ್ನಿಯನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದರೆ, ಪಾಕಿಸ್ತಾನ ಇದಕ್ಕೆ ನಿರಾಕರಿಸಿತ್ತು. ಕೊನೆಗೆ ಎಸಿಸಿ ಸಭೆಯಲ್ಲಿ ಈ ಬಾರಿಯ ಏಷ್ಯಾಕಪ್‌ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ನೀಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿದ್ದಾರೆ. ಆರು ತಂಡಗಳು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದ್ದು, ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿದೆ. ಇಲ್ಲಿನ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಬಹುತೇಕ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲು ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಗರಿಷ್ಠ ಮೂರು ಭಾರತ-ಪಾಕಿಸ್ತಾನ ಮುಖಾಮುಖಿ ನೋಡುವ ಅವಕಾಶ ಸಿಗಲಿದೆ. ಪಾಕಿಸ್ತಾನ ಚರಣದ ಏಷ್ಯಾಕಪ್ ಪಂದ್ಯಗಳು ಲಾಹೋರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ಏಷ್ಯಾಕಪ್ಗೆ ಪಾಕ್, ಶ್ರೀಲಂಕಾ ಆತಿಥ್ಯ? ಹೈಬ್ರಿಡ್ ಮಾದರಿಗೆ ಬಿಸಿಸಿಐ ಸಮ್ಮತಿ?
ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ತಿಕ್ಕಾಟ ಇರುವ ಕಾರಣ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿ ಏಷ್ಯಾಕಪ್ ಆಡಲು ನಿರಾಕರಿಸಿತ್ತು. ಇದೇ ಕಾರಣಕ್ಕಾಗಿ ಹೈಬ್ರಿಡ್ ಮಾದರಿಯನ್ನು ಶಿಫಾರಸು ಮಾಡಲಾಗಿತ್ತು. ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನವೇ ಪ್ರಧಾನ ಆತಿಥ್ಯ ರಾಷ್ಟ್ರವಾಗಿದ್ದರೂ, ಪಾಕಿಸ್ತಾನದಲ್ಲಿ ಏಷ್ಯಾಕಪ್‌ನ ನಾಲ್ಕು ಪಂದ್ಯಗಳಷ್ಟೇ ನಡೆಯಲಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ಯುಎಇಯಲ್ಲಿ ಟೂರ್ನಿ ನಡೆಸುವ ಯೋಜನೆಯನ್ನೂ ಮಾಡಲಾಗಿತ್ತು. ಆದರೆ, ಯುಎಇ ತಟಸ್ಥ ಸ್ಥಳವನ್ನು ಬಾಂಗ್ಲಾದೇಶ ನಿರಾಕರಣೆ ಮಾಡಿತ್ತು. ಸೆಪ್ಟೆಂಬರ್ ಸಮಯದಲ್ಲಿ ಯುಎಇಯಲ್ಲಿ ಅತಿಯಾದ ಬಿಸಿಲಿನ ವಾತಾವರಣ ಇರುತ್ತದೆ ಎನ್ನುವ ಕಾರಣ ನೀಡಿ ಬಾಂಗ್ಲಾದೇಶ ನಿರಾಕರಿಸಿತ್ತು.
ಕ್ರಿಕೆಟ್‌ನಲ್ಲೂ ಗ್ಯಾರೆಂಟಿ ಸದ್ದು, ವಿಶ್ವಕಪ್ ಪಾಲ್ಗೊಳ್ಳುವಿಕೆ ಖಚಿತಪಡಿಸಲು ಪಾಕಿಸ್ತಾನಕ್ಕೆ ಐಸಿಸಿ ಸೂಚನೆ!
ಭಾರತ ತಂಡ ಏಷ್ಯಾಕಪ್‌ನಲ್ಲಿ ಯಾವಾಗಲೂ ಪ್ರಾಬಲ್ಯ ಸಾಧಿಸಿದೆ. ಇಲ್ಲಿಯವರೆಗಿನ ಇತಿಹಾಸದಲ್ಲಿ ಏಷ್ಯಾಕಪ್‌ನ 15 ಆವೃತ್ತಿಗು ನಡೆದಿದ್ದು, ಇದರಲ್ಲಿ ಭಾರತ ತಂಡ ಅತಿ ಹೆಚ್ಚು 7 ಬಾರಿ (1984, 1988, 1990–91, 1995, 2010, 2016, 2018) ಪ್ರಶಸ್ತಿ ಗೆದ್ದಿದೆ. 6 ಬಾರಿ (1986, 1997, 2004, 2008, 2014, 2022) ಚಾಂಪಿಯನ್ ಆಗಿರುವ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಮಾತ್ರ (2000, 2012) ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ.