ಮುಂಬರುವ ಐಪಿಎಲ್ ಮೆಗಾ ಹರಾಜಿನ ಕುರಿತಾಗಿ ಹಲವು ಫ್ರಾಂಚೈಸಿಗಳ ನಡುವೆ ಒಮ್ಮತ ಮೂಡಿಲ್ಲ. ಇದೆಲ್ಲದರ ನಡುವೆ ಕೆಕೆಆರ್ ತಂಡದ ಮಾಲೀಕ ಶಾರುಕ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ: 2025ರ ಐಪಿಎಲ್‌ಗೂ ಮುನ್ನ ನಡೆಯಬೇಕಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬಗ್ಗೆ ತಂಡಗಳ ಮಾಲಿಕರ ನಡುವೆ ಒಮ್ಮತ ಮೂಡಿಬಂದಿಲ್ಲ. ಹರಾಜಿನ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಮಾಲಿಕರ ಜೊತೆ ಬುಧವಾರ ತನ್ನ ಕೇಂದ್ರ ಕಚೇರಿಯಲ್ಲಿ ಬಿಸಿಸಿಐ ಸಭೆ ಆಯೋಜಿಸಿತ್ತು. ಈ ವೇಳೆ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ಮಾಲಿಕ ಶಾರುಖ್‌ ಖಾನ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಮಾಲಿಕ ನೆಸ್‌ ವಾಡಿಯಾ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಮೆಗಾ ಹರಾಜು ನಡೆಸುವುದು ಬೇಡ. ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಬೇಕಿರುವ ಕೆಲ ಆಟಗಾರರನ್ನಷ್ಟೇ ಬದಲಿಸಿಕೊಳ್ಳಲು ಮಿನಿ ಹರಾಜು ನಡೆಸಿದರೆ ಸಾಕು ಎಂದು ಶಾರುಖ್‌ ಖಾನ್ ಹೇಳಿದರು ಎನ್ನಲಾಗಿದ್ದು, ಇದನ್ನು ವಿರೋಧಿಸಿದ ವಾಡಿಯಾ, ಮೆಗಾ ಹರಾಜು ನಡೆಯಬೇಕು. 4ಕ್ಕಿಂತ ಹೆಚ್ಚು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಿಡಬಾರದು ಎಂದು ವಾದಿಸಿದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು ಎಂದು ವರದಿಯಾಗಿದೆ.

ಬ್ಲಡ್‌ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಭಾರತದ ಮಾಜಿ ಕ್ರಿಕೆಟಿಗ ಅನ್ಶುಮನ್‌ ಗಾಯಕ್ವಾಡ್‌..!

ಐಪಿಎಲ್‌: ಕೈಕೊಡುವ ವಿದೇಶಿ ಆಟಗಾರರ ಬಗ್ಗೆ ಫ್ರಾಂಚೈಸಿಗಳಿಂದ ದೂರು

ಮುಂಬೈ: ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿ, ಬಳಿಕ ಟೂರ್ನಿ ಆರಂಭಗೊಳ್ಳುವುದಕ್ಕೆ ಕೆಲವೇ ದಿನ ಬಾಕಿ ಇರುವಾಗ ವೈಯಕ್ತಿಕ ಕಾರಣಗಳ ನೆಪ ಹೇಳಿ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಐಪಿಎಲ್‌ ತಂಡಗಳ ಮಾಲಿಕರು ಬಿಸಿಸಿಐಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ತನ್ನ ಕೇಂದ್ರ ಕಚೇರಿಯಲ್ಲಿ ಐಪಿಎಲ್‌ ತಂಡಗಳ ಮಾಲಿಕರ ಜೊತೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿದರು. 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಆರ್‌ಸಿಬಿಗೆ ದೊಡ್ಡ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟಿಗ..! ಬೆಂಗಳೂರು ತಂಡ ತೊರೆಯೋದು ಗ್ಯಾರಂಟಿ..?

ಪ್ರಮುಖವಾಗಿ ಆಟಗಾರರ ಹರಾಜಿಗೂ ಮುನ್ನ ಎಷ್ಟು ಜನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಎಲ್ಲಾ ಫ್ರಾಂಚೈಸಿಗಳು ಕನಿಷ್ಠ 5-6 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿರುವುದಾಗಿ ಗೊತ್ತಾಗಿದೆ. ಕೆಲ ಫ್ರಾಂಚೈಸಿಗಳು 8 ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಿದರು ಎನ್ನಲಾಗಿದೆ.

ಇದೇ ವೇಳೆ ಇಂಪ್ಯಾಕ್ಟ್‌ ಆಟಗಾರ ನಿಯಮವನ್ನು ಕೈಬಿಡುವಂತೆಯೂ ಫ್ರಾಂಚೈಸಿಗಳು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.