ಆರ್‌ಸಿಬಿಗೆ ದೊಡ್ಡ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟಿಗ..! ಬೆಂಗಳೂರು ತಂಡ ತೊರೆಯೋದು ಗ್ಯಾರಂಟಿ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Australian All rounder Glenn Maxwell Unfollows RCB On Instagram Ahead Of IPL Mega Auction 2025 kvn

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಶುರುವಾಗಿವೆ. ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಆತಂಕ ಮನೆ ಮಾಡುವಂತ ಸುದ್ದಿಯೊಂದು ಹೊರಬದ್ದಿದೆ. 2025ರ ಐಪಿಎಲ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾದ ಅನುಭವಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ.

2025ರ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯುಲಿದೆ. ಈಗಾಗಲೇ ಹಲವು ಫ್ರಾಂಚೈಸಿಗಳು ತಾವು ಯಾವ ಆಟಗಾರರನ್ನು ರೀಟೈನ್ ಮಾಡಿಕೊಂಡರೆ ಲಾಭ ಎನ್ನುವ ಲೆಕ್ಕಾಚಾರ ಹಾಕಲಾರಂಭಿಸಿವೆ. ಕಳೆದ ಆವೃತ್ತಿಯಲ್ಲಿ ವೈಫಲ್ಯ ಅನುಭವಿಸಿದ ಆಟಗಾರರನ್ನು ಕೈಬಿಡಲು ಕೆಲ ಫ್ರಾಂಚೈಸಿಗಳು ಮುಂದಾಗಿವೆ. ಇದರ ಭಾಗವಾಗಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ ಕೇವಲ 52 ರನ್ ಬಾರಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡಲಿದೆ ಎಂದೆಲ್ಲಾ ವರದಿಯಾಗಿತ್ತು. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಆರ್‌ಸಿಬಿ ಇನ್‌ಸ್ಟಾಗ್ರಾಂ ಖಾತೆಯನ್ನು ಅನ್‌ಫಾಲೋ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಬದಲಾವಣೆ ಗ್ಯಾರಂಟಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 2021ರ ಐಪಿಎಲ್ ಹರಾಜಿನಲ್ಲಿ 14.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದಾದ ಬಳಿಕ ಮರು ವರ್ಷ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ರುಪಾಯಿ ನೀಡಿ ಆರ್‌ಸಿಬಿ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು. ಅದೇ ರೀತಿ 2024ರಲ್ಲೂ ಅದೇ ಮೊತ್ತಕ್ಕೆ ರೀಟೈನ್ ಆಗಿದ್ದರು. ಆದರೆ ಕಳೆದ ಆವೃತ್ತಿ ಮ್ಯಾಕ್ಸ್‌ವೆಲ್ ಪಾಲಿಗೆ ದಯನೀಯವೆನಿಸಿಕೊಂಡಿತ್ತು. ಇದಕ್ಕೂ 2021ರ ಐಪಿಎಲ್‌ನಲ್ಲಿ 513 ರನ್ ಸಿಡಿಸಿದ್ದ ಮ್ಯಾಕ್ಸ್‌ವೆಲ್, 2022ರಲ್ಲಿ 301 ರನ್ ಹಾಗೂ 2023ರ ಐಪಿಎಲ್‌ನಲ್ಲಿ ಅಮೂಲ್ಯ 400 ರನ್ ಬಾರಿಸಿದ್ದರು.

ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಫ್ರಾಂಚೈಸಿಗಳ ಮನವಿ: ಆರ್‌ಸಿಬಿಯಲ್ಲೇ ಉಳಿತಾರಾ ಮ್ಯಾಕ್ಸಿ, ಫಾಫ್..?

ಇನ್ನು ಕೆಲ ವರದಿಗಳ ಪ್ರಕಾರ ಆರ್‌ಸಿಬಿ ಫ್ರಾಂಚೈಸಿಯು ತನ್ನ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಟ್ಟು, ಭಾರತೀಯ ಮೂಲದ ಆಟಗಾರನಿಗೆ ನಾಯಕ ಪಟ್ಟ ಕಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕನ್ನಡಿಗ ಕೆ ಎಲ್ ರಾಹುಲ್ ಆರ್‌ಸಿಬಿ ತಂಡದ ನಾಯಕರಾಗಲಿದ್ದಾರೆ ಎಂದೆಲ್ಲಾ ವರದಿಯಾಗುತ್ತಿದೆ. ಸದ್ಯ ಕೆ ಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದು, ಮುಂಬರುವ ಮೆಗಾ ಹರಾಜಿಗೂ ಮುನ್ನ ಲಖನೌ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗುತ್ತಿದೆ.
 

Latest Videos
Follow Us:
Download App:
  • android
  • ios