Asianet Suvarna News Asianet Suvarna News

ಉಗ್ರರ ಸಲಹಿದ ಪಾಕಿಸ್ತಾನಕ್ಕೆ ತಕ್ಕ ಪಾಠ; ನ್ಯೂಜಿಲೆಂಡ್ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಪಾಕ್ ಪ್ರವಾಸ ರದ್ದು!

  • ಉಗ್ರರ ಪೋಷಿಸಿದ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ
  • ನ್ಯೂಜಿಲೆಂಡ್ ಪ್ರವಾಸ ರದ್ದು ಮಾಡಿದ ಬೆನ್ನಲ್ಲೇ ಇಂಗ್ಲೆಂಡ್ ಸರದಿ
  • ಭದ್ರತೆ ಕಾರಣದಿಂದ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ಇಂಗ್ಲೆಂಡ್
     
Security threat England call off Pakistan tour after New zealand ckm
Author
Bengaluru, First Published Sep 20, 2021, 11:10 PM IST

ಲಂಡನ್(ಸೆ.20): ಭಯೋತ್ಪಾದನೆಯನ್ನು ಪೋಷಿಸಿ ಅದರಲ್ಲೇ ಜೀವನ ಸಾಗಿಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ತಕ್ಕೆ ಪಾಠವಾಗಿದೆ.  ಭಯೋತ್ಪಾದನೆ ವಿಚಾರ ಬಂದಾಗ ಜಗತ್ತಿನೆದರು ಭಾರತದತ್ತ ಕೈತೋರಿಸುವ ಪಾಕಿಸ್ತಾನಕ್ಕೆ ಇದೀಗ ಹಲ್ಲು ಕಿತ್ತ ಹಾವಿನಂತಾಗಿದೆ. ಭದ್ರತೆ ಕಾರಣದಿಂದ ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ಇಂಗ್ಲೆಂಡ್ ಸರಣಿ ರದ್ದು ಮಾಡಿತ್ತು. ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಪ್ರವಾಸ ರದ್ದು ಮಾಡಿದೆ.

 

ಉಗ್ರರ ದಾಳಿ ಭೀತಿ; ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ನ್ಯೂಜಿಲೆಂಡ್!

ಭದ್ರತಾ ಕಾರಣದಿಂದ ಮುಂದಿನ ತಿಂಗಳು ಪಾಕಿಸ್ತಾನಕ್ಕೆ ಕೈಗೊಳ್ಳಬೇಕಿದ್ದ ಪ್ರವಾಸ ರದ್ದು ಮಾಡುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಎರಡು ಟಿ20 ಹಾಗೂ 3 ಏಕದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸ ಮಾಡಬೇಕಿತ್ತು. ಅಕ್ಟೋಬರ್ 13 ರಿಂದ ಟೂರ್ನಿ ಆರಂಭಗೊಳ್ಳಬೇಕಿತ್ತು. 

ಪಾಕಿಸ್ತಾನದಲ್ಲಿನ ಭದ್ರತೆ ಇಂಗ್ಲೆಂಡ್ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಆಟಗಾರರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್ ಭದ್ರತಾ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಘೋಷಿಸಿದೆ.

ಉಗ್ರರ ಪೋಷಿಸಿ ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ; ಮುಖಭಂಗ ತಪ್ಪಿಸಲು ಹರಸಾಹಸ!

ಆಟಗಾರರು, ಸಿಬ್ಬಂದಿಗಳ ಸುರಕ್ಷತೆ ನಮಗೆ ಅತೀ ಮುಖ್ಯ. ಆಟಗಾರರು ಯಾವುದೇ ಒತ್ತಡವಿಲ್ಲದೆ ಆಡಬೇಕು. ಆದರೆ ಆ ಪರಿಸ್ಥಿತಿ ಪಾಕಿಸ್ತಾನದಲ್ಲಿಲ್ಲ. ಹೀಗಾಗಿ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿಯುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಘೋಷಿಸಿದೆ.

 

ನ್ಯೂಜಿಲೆಂಡ್ ತಂಡ ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ಸರ್ಕಾರ ನೀಡಿದ ಭದ್ರತಾ ಎಚ್ಚರಿಯನ್ನು ಪರಿಗಣಿಸಿತು. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರವಾಸ ರದ್ದು ಮಾಡಿ ತವರಿಗೆ ವಾಪಾಸ್ಸಾಯಿತು. ಇದು ಪಾಕಿಸ್ತಾನ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಕಿಸ್ತಾನ ಅತ್ಯಂತ ಸುರಕ್ಷಿತ ಸ್ಥಳ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು.

ನ್ಯೂಜಿಲೆಂಡ್ ಸರಣಿ ರದ್ದಾದ ಬೆನ್ನಲ್ಲೇ ಪಾಕ್‌ಗೆ ಮತ್ತೊಂದು ಶಾಕ್; ಇಂಗ್ಲೆಂಡ್ ಟೂರ್ನಿ ಅನುಮಾನ!

ಈ ಪ್ರಯತ್ನದ ನಡುವೆ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದು ಮಾಡಿದೆ. ಇದೀಗ ಪಾಕಿಸ್ತಾನದ ಬಳಿ ಉತ್ತರವೇ ಇಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ರಮೀಜ್ ರಾಜಾ ಹತಾಶೆಯಿಂದ ಇಂಗ್ಲೆಂಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

Follow Us:
Download App:
  • android
  • ios