Asianet Suvarna News Asianet Suvarna News

ಉಗ್ರರ ದಾಳಿ ಭೀತಿ; ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ನ್ಯೂಜಿಲೆಂಡ್!

  • ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಟೂರ್ನಿ ರದ್ದು
  • ಮಹತ್ವದ ನಿರ್ಧಾರ ತೆಗೆದುಕೊಂಡ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ
  • ನ್ಯೂಜಿಲೆಂಡ್ ತಂಡದ ಮೇಲೆ ಉಗ್ರರ ದಾಳಿ ಭೀತಿ
Security threat New Zealand abandoned Pakistan tour just few minutes before first ball to be bowled ckm
Author
Bengaluru, First Published Sep 17, 2021, 5:53 PM IST

ರಾವಲ್ಪಿಂಡಿ(ಸೆ.17): ನಮ್ಮದು ಉಗ್ರರ ದೇಶವಲ್ಲ, ಶಾಂತಿ ಸೌಹಾರ್ಧಯುತ ದೇಶ ಎಂದು ಜಗತ್ತಿಗೆ ಬಿಂಬಿಸಲು ಹೊರಟ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳಿಗೆ ಬೆಂಬಲ, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಲೇ ಜೀವನ ಸಾಗಿಸುತ್ತಿರುವ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ. ಕಾರಣ ಬರೋಬ್ಬರಿ 18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ದಿಢೀರ್ ಪ್ರವಾಸ ರದ್ದುಗೊಳಿಸಿದೆ.

ಉಗ್ರರ ದಾಳಿ ಭೀತಿಯಿಂದ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ದದ ಟೂರ್ನಿ ರದ್ದುಗೊಳಿಸಿದೆ. ಇನ್ನೇನು ಮೊದಲ ಪಂದ್ಯ ಆರಂಭವಾಗಬೇಕು ಅನ್ನುವಷ್ಟರಲ್ಲೇ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ, ಏಕಪಕ್ಷೀಯವಾಗಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ನ್ಯೂಜಿಲೆಂಡ್ ತಂಡ ಹಾಗೂ ಪಂದ್ಯದ ಮೇಲೆ ಉಗ್ರರ ದಾಳಿ ಭೀತಿಯಿಂದ ಟೂರ್ನಿ ರದ್ದು ಮಾಡುವುದಾಗಿ ಘೋಷಿಸಿದೆ.

T20 World Cup:'ಟೀಂ ಇಂಡಿಯಾವನ್ನು ಮತ್ತೊಮ್ಮೆ ಸೋಲಿಸಲು ಪ್ರಯತ್ನಿಸುತ್ತೇವೆ'

ನ್ಯೂಜಿಲೆಂಡ್ ನಿರ್ಧಾರ ಪಾಕಿಸ್ತಾನಕ್ಕೆ ಅತೀ ದೊಡ್ಡ ಆಘಾತ ನೀಡಿದೆ. ಇಷ್ಟೇ ಅಲ್ಲ ಉಗ್ರವಾದ ಪೋಷಣೆಗೆ ಪಾಕಿಸ್ತಾನ ಸರಿಯಾದ ಬೆಲೆ ತೆತ್ತಿದೆ. ಕಿವೀಸ್ ಮಂಡಳಿ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ನ್ಯೂಜಿಲೆಂಡ್ ಪ್ರಧಾನಿ ಜೆಸ್ಸಿಂಡಾಗೆ ಕರೆ ಮಾಡಿ ಸಂಪೂರ್ಣ ಭದ್ರತಯ ಭರವಸೆ ನೀಡಿದ್ದಾರೆ. ಆದರೆ ಭದ್ರತಾ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.. ಹೀಗಾಗಿ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಜೆಸ್ಸಿಂಡಾ ಹೇಳಿದ್ದಾರೆ.

 

ನ್ಯೂಜಿಲೆಂಜ್ ತಂಡದ ಮೇಲೆ ಉಗ್ರರ ದಾಳಿ ಎಚ್ಚರಿಯೆನ್ನು ಭದ್ರತೆ ವಿಭಾಗ ನೀಡಿದೆ. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟಿಗರು ಹೋಟೆಲ್‌ನಿಂದ ಹೊರಬಂದಿಲ್ಲ, ಮೈದಾನಕ್ಕೂ ಎಂಟ್ರಿಕೊಟ್ಟಿಲ್ಲ. ಭದ್ರತೆ ಕಾರಣದಿಂದ ಯಾರೂ ಹೊರಹೋಗದಂತೆ ನ್ಯೂಜಿಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮೊದಲ ಏಕದಿನ ಪಂದ್ಯದ ಟಾಸ್‌ಗೂ ಕೆಲ ನಿಮಿಷಗಳ ಮುನ್ನ ಟೂರ್ನಿ ರದ್ದುಗೊಳಿಸುವ ನಿರ್ಧಾರ ಘೋಷಿಸಿತು. 

 

T20 World Cup: ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಬಲಿಷ್ಠ ಟೀಂ ಇಂಡಿಯಾ ಹೆಸರಿಸಿದ ಗಂಭೀರ್

3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. 2003ರಲ್ಲಿ ಕೊನೆಯದಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಮಾಡಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಎಲ್ಲಾ ತಂಡಗಳು ಪಾಕ್ ಪ್ರವಾಸ ನಿರ್ಬಂಧಿಸಿತ್ತು. 2015ರಿಂದ ಪಾಕಿಸ್ತಾನದಲ್ಲಿ ಮತ್ತೆ  ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಗೊಂಡಿದೆ. ಬೆರಳೆಣಿಕೆ ಪಂದ್ಯಗಳು ಮಾತ್ರ ನಡೆದಿದೆ.

ಮುಂಜಾನೆ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಭದ್ರತಾ ಎಚ್ಚರಿಕೆ ನೀಡಲಾಗಿದೆ ಎಂಬ ಕಾರಣದಿಂದ ಏಕಪಕ್ಷೀಯವಾಗಿ ಸರಣಿಯನ್ನು ಮುಂದೂಡಲು ನಿರ್ಧರಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಸರ್ಕಾರ ನ್ಯೂಜಿಲೆಂಡ್ ತಂಡಕ್ಕೆ ಫೂಲ್ ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿ, ಸೇನೆಯನ್ನು ನಿಯೋಜಿಸಿದೆ ಎಂದು ಪಿಸಿಬಿ ಟ್ವೀಟ್ ಮಾಡಿದೆ.
 

Follow Us:
Download App:
  • android
  • ios