Asianet Suvarna News Asianet Suvarna News

ನ್ಯೂಜಿಲೆಂಡ್ ಸರಣಿ ರದ್ದಾದ ಬೆನ್ನಲ್ಲೇ ಪಾಕ್‌ಗೆ ಮತ್ತೊಂದು ಶಾಕ್; ಇಂಗ್ಲೆಂಡ್ ಟೂರ್ನಿ ಅನುಮಾನ!

  • ಭದ್ರತೆ ಕಾರಣದಿಂದ ಸರಣಿ ರದ್ದು ಮಾಡಿದ ನ್ಯೂಜಿಲೆಂಡ್
  • ಈ ನಿರ್ಧಾರದ ಬೆನ್ಲಲ್ಲೇ ಇಂಗ್ಲೆಂಡ್ ಸರಣಿ ಅನುಮಾನ
  • ಪಾಕಿಸ್ತಾನ ಪ್ರವಾಸಕ್ಕೆ ಇಂಗ್ಲೆಂಡ್ ಹಿಂದೇಟು
England tour of Pakistan next month thrown into doubt after Zealand abandoned series ckm
Author
Bengaluru, First Published Sep 17, 2021, 9:39 PM IST
  • Facebook
  • Twitter
  • Whatsapp

ಲಂಡನ್(ಸೆ.17): ಉಗ್ರರ ನೆರವಿನಿಂದಲೇ ಉಸಿರಾಡುತ್ತಿದ್ದ ಪಾಕಿಸ್ತಾನ ಪಾಪದ ಕೊಡ ತುಂಬಿದೆ. ಇದೀಗ ಒಂದೊಂದೆ ಹೊಡೆತಕ್ಕೆ ಸಿಲುಕಿ ಪಾಕಿಸ್ತಾನ ನಲುಗುತ್ತಿದೆ. ಭದ್ರತೆ ಕಾರಣದಿಂದ ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ದದ ನಿಗದಿತ ಓವರ್ ಸರಣಿ ರದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮುಂದಿನ ತಿಂಗಳು ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಅನುಮಾನವಾಗಿದೆ.

ಉಗ್ರರ ದಾಳಿ ಭೀತಿ; ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ನ್ಯೂಜಿಲೆಂಡ್!

ನ್ಯೂಜಿಲೆಂಡ್ ತಂಡದ ಮೇಲೆ ಉಗ್ರರ ದಾಳಿ ಕುರಿತು ಬಂದ ಎಚ್ಚರಿಕೆ ಸಂದೇಶದಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸರಣಿ ರದ್ದು ಮಾಡುವ ನಿರ್ಧಾರ ಕೈಗೊಂಡಿತು. ನ್ಯೂಜಿಲೆಂಡ್ ಆಟಗಾರರು ಹೊಟೆಲ್‌ನಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ ಎಂದು ನ್ಯೂಜಿಲೆಂಜ್ ಕ್ರಿಕೆಟ್ ಮಂಡಳಿ ಹೇಳಿದೆ. ನ್ಯೂಜಿಲೆಂಡ್ ಮಂಡಳಿ ಹಾಗೂ ಪ್ರಧಾನಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕರೆ ಮಾಡಿ, ಮನವೋಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಪಾಕಿಸ್ತಾನದ ಭದ್ರತೆ ಇದೀಗ ಇಂಗ್ಲೆಂಡ್ ಆತಂಕಕ್ಕೂ ಕಾರಣವಾಗಿದೆ.

ಆಟಗಾರರಿಗೆ ಭದ್ರತೆ ಅತೀ ಮುಖ್ಯವಾಗಿದೆ. ಆಫ್ಘಾನಿಸ್ತಾನದಲ್ಲಿ ಬೆಳವಣಿಗೆ, ಪಾಕಿಸ್ತಾನದ ಬೆಂಬಲಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಿನ 48 ಗಂಟೆಯಲ್ಲಿ ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸ ಕುರಿತು ನಿರ್ಧರಿಸುವುದಾಗಿ ಹೇಳಿದೆ.

ಉಗ್ರರ ಪೋಷಿಸಿ ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ; ಮುಖಭಂಗ ತಪ್ಪಿಸಲು ಹರಸಾಹಸ!

ಮುಂದಿನ ತಿಂಗಳು ಇಂಗ್ಲೆಂಡ್ ತಂಡ, ಪಾಕಿಸ್ತಾನ ಪ್ರವಾಸಕ್ಕೆ ಮುಂದಾಗಿದೆ. 2005ರ ಬಳಿಕ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ಮುಂದಾಗಿತ್ತು. ಇದೀಗ ಪಾಕಿಸ್ತಾನದಲ್ಲಿನ ಉಗ್ರರ ಬೆದರಿಕೆ, ಭದ್ರತೆ ಕಾರಣ ಇಂಗ್ಲೆಂಡ್ ಕೂಡ ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದೆ.
 

Follow Us:
Download App:
  • android
  • ios