ಸಹೋದರ ಅರ್ಜುನ್ ತೆಂಡೂಲ್ಕರ್ ಮದುವೆ ಬೆನ್ನಲ್ಲೇ ಇದೀಗ ಸಾರಾ ತೆಂಡೂಲ್ಕರ್ ತಮ್ಮ ಮದುವೆ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಮದುವೆ ಕುರಿತು ಸಾರಾ ತೆಂಡೂಲ್ಕರ್ ಹೇಳಿದ್ದೇನು?
ಮುಂಬೈ (ಆ.10) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಮದುವೆ ಕುರಿತು ಮೌನ ಮುರಿದಿದ್ದಾರೆ. ಈಗಾಗಲೇ ಸಾರಾ ತೆಂಡೂಲ್ಕರ್ ಹೆಸರು ಟೀಂ ಇಂಡಿಯಾ ಕ್ರಿಕೆಟಿಗ ಶುಬಮನ್ ಗಿಲ್ ಜೊತೆ ಹಲವು ಬಾರಿ ಥಳುಕು ಹಾಕಿಕೊಂಡಿತ್ತು. ಗಾಸಿಪ್ ಸೇರಿದಂತೆ ಹಲವು ಸುದ್ದಿಗಳು ಹರಿದಾಡಿತ್ತು. ಇತ್ತ ಸಹೋದರ ಅರ್ಜುನ್ ತೆಂಡೂಲ್ಕರ್ ಮದುವೆ ಬೆನ್ನಲ್ಲೇ ಇದೀಗ ಎಲ್ಲರು ಸಾರಾ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾರಾ ತೆಂಡೂಲ್ಕರ್ ಮದುವೆ ವಿಚಾರದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಸಚಿನ್ ಪುತ್ರಿ ಹೇಳಿದ್ದೇನು?
ಸಾರಾ ತೆಂಡೂಲ್ಕರ್ ತಮ್ಮ ಸೌಂದರ್ಯ, ಫ್ಯಾಶನ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಾರೆ. ಇದೀಗ ಖಾಸಗಿ ಸಂದರ್ಶನವೊಂದರಲ್ಲಿ ಸಾರಾ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಮದುವೆ, ಭಾವಿ ಪತಿ ಹೇಗಿರಬೇಕು ಅನ್ನೋದು ವಿವರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿ ತೆಂಡೂಲ್ಕರ್ ಅವರ ಪವಿತ್ರ ಬಾಂಧವ್ಯವೇ ತಮ್ಮ ಮದುವೆ ಕಲ್ಪನೆ ಕುರಿತು ಪ್ರೇರಣೆ ಎಂದಿದ್ದಾರೆ. ನನ್ನ ಪೋಷಕರು ಪತಿ ಪತ್ನಿಗಿಂತ ಹೆಚ್ಚಾಗಿ ಉತ್ತಮ ಫ್ರೆಂಡ್ಸ್ ರೀತಿ ಇದ್ದಾರೆ. ಆತ್ಮೀಯವಾಗಿ ಎಲ್ಲವನ್ನು ಹೊಂದಿಸಿಕೊಂಡು ಸತಿ ಪತಿಗಳಾಗಿ, ಉತ್ತಮ ಪೋಷಕರಾಗಿದ್ದಾರೆ. ಅವರ ಬದುಕೇ ನನಗೆ ಪ್ರೇರಣೆ ಎಂದಿದ್ದಾರೆ.
ಸಾರಾ ಭಾವಿ ಪತಿ ಹೇಗಿರಬೇಕು?
ಪೋಷಕರು ಒಬ್ಪರಿಗೊಬ್ಬರು ಗೌರವ ನೀಡುತ್ತಾರೆ. ಅವರ ಪ್ರೀತಿ, ಆತ್ಮೀಯತೆ, ಗೌರವ, ಸ್ನೇಹ ನನ್ನ ಮದುವೆ ಕುರಿತು ಕಲ್ಪಿಸಿಕೊಳ್ಳುವಂತೆ ಮಾಡಿದೆ. ನನ್ನ ಪೋಷಕರಂತೆ ಸಂಗಾತಿ ಉತ್ತಮ ಸ್ನೇಹಿತನಾಗಿರಬೇಕು. ಒಬ್ಬರಿಗೊಬ್ಬರು ತಿಳಿದುಕೊಳ್ಳಬೇಕು. ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಸ್ನೇಹ,ಪ್ರೀತಿ, ಗೌರವ ಮುಖ್ಯವಾಗಿರಬೇಕು. ನನ್ನ ತಂದೆ ತಾಯಿಯಲ್ಲಿ ಕಂಡುಕೊಂಡ ಗುಣಗಳನ್ನೇ ನಾನು ನನ್ನ ಭಾವಿ ಪತಿಯಲ್ಲೂ ಬಯಸುತ್ತೇನೆ ಎಂದು ಸಾರಾ ತೆಂಡೂಲ್ಕರ್ ಹೇಳಿದ್ದಾರೆ.
ನನ್ನ ತಂದೆ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾರೆ. ಅವರ ಗಟ್ಟಿಯಾಗ ಸ್ನೇಹದಿಂದ ಯಾವುದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ. ತಾಳ್ಮೆಯಿಂದಲೇ ಪರಿಹಾರ ಕಂಡುಕೊಳ್ಳುತ್ತಾರೆ. ಈ ರೀತಿಯ ಗುಣಗಳು ಭಾವಿ ಪತಿಯಲ್ಲಿರಬೇಕು ಎಂದು ಸಾರಾ ತೆಂಡೂಲ್ಕರ್ ಹೇಳಿದ್ದಾರೆ. ಸಾರಾ ತನ್ನ ಭಾವಿ ಪತಿ ಗುಣಗಳ ಕುರಿತು ಹೇಳಿಕೆ ನೀಡುತ್ತಿದ್ದಂತೆ ಹಲವರು ಯಾರೂ ಸರಿ ಹೊಂದುತ್ತಾರೆ ಎಂದು ಹಲವು ಹೆಸರುಗಳನ್ನು ಸೂಚಿಸುತ್ತಿದ್ದಾರೆ.
ಸೌಂದರ್ಯ, ಆಸ್ತಿ, ಸ್ಟೇಟಸ್‌ಗಿಂತ ಗುಣ, ಪರಸ್ಪರ ಗೌರವ ಅತೀ ಮುಖ್ಯ ಎಂದು ಸಾರಾ ತೆಂಡೂಲ್ಕರ್ ಹೇಳಿದ್ದಾರೆ. ಸಾರಾ ತೆಂಡೂಲ್ಕರ್ ಮಾತುಗಳು ವೈರಲ್ ಆಗುತ್ತಿದ್ದಂತೆ ಇದೀಗ ಹಲವರ ಶೀಘ್ರದಲ್ಲೇ ಸಾರಾ ತೆಂಡೂಲ್ಕರ್ ಮದುವೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಸಾರಾ ಸಂದರ್ಶನದಲ್ಲಿ ತಮ್ಮ ಬಗ್ಗೆ ಕೇಳಿಬರುತ್ತಿರುವ ಗಾಸಿಪ್ ಕುರಿತು, ಕ್ರಿಕೆಟಿಗರ ಹೆಸರಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಾರಾ ಭಾವಿ ಪತಿ ಕುರಿತು ಚರ್ಚೆಗಳು ಶುರುವಾಗಿದೆ.

