* ಐಪಿಎಲ್‌ ಫೈನಲ್‌ಗೂ ಮುನ್ನ ಕಾಂಟ್ರವರ್ಸಿ ಬಿರುಗಾಳಿ* ಐಫಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್-ರಾಜಸ್ಥಾನ ರಾಯಲ್ಸ್ ಸೆಣಸಾಟ* ಐಪಿಎಲ್ ಪ್ರಸಾರಕರ ಹಕ್ಕು ಪಡೆದಿರುವ ಸಂಸ್ಥೆಯ ಮೇಲೆ ಕಿಡಿಕಾರಿದ ಸಂಜು ಸ್ಯಾಮ್ಸನ್ ಪತ್ನಿ

ಅಹಮದಾಬಾದ್​(ಮೇ.30): 15ನೇ ಐಪಿಎಲ್​​​ ಫೈನಲ್ (IPL 2022 Final)​ ಪಂದ್ಯ. 1 ಲಕ್ಷದ 25 ಸಾವಿರ ಪ್ರೇಕ್ಷಕರ ಸಮ್ಮುಖ. ವಿಶ್ವದ ಬಹುದೊಡ್ಡ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಮಹಾಫೈನಲ್​​. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್​ ಟೈಟನ್ಸ್ (Rajasthan Royals vs Gujarat Titans)​ ಟೀಮ್ಸ್​ ಫೈನಲ್​​ನಲ್ಲಿ ಕಾದಾಡಿದವು. ಇಡೀ ಕ್ರಿಕೆಟ್​ ಜಗತ್ತು ಈ ಬಿಗ್​​​​​​​ ಫೈನಲ್​​ ಮ್ಯಾಚ್​ ಅನ್ನ ಭಾರೀ ಕೌತುಕತೆಯಿಂದ ವೀಕ್ಷಿಸಿತು. ಆದ್ರೆ ಇನ್ನೊಂದೆಡೆ ಇಂತಹ ಹೈವೋಲ್ಟೇಜ್​​​​​ ಪಂದ್ಯಕ್ಕೂ ಮುನ್ನ ಒಂದು ಕಾಂಟ್ರವರ್ಸಿ ಬಿರುಗಾಳಿ ಬೀಸಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ಫೈನಲ್​​ ಪಂದ್ಯಕ್ಕಿಂತ ಈ ಕಾಂಟ್ರವರ್ಸಿಯೇ ಹೆಚ್ಚು ಸುದ್ದಿಯಲ್ಲಿತ್ತು. 

IPL ಪ್ರಸಾರಕರ ವಿರುದ್ಧ ಗುಡುಗಿದ ಸ್ಯಾಮ್ಸನ್​​ ಪತ್ನಿ:

ಯಸ್​​, ಇನ್ನೇನು ರಾಜಸ್ಥಾನ ಹಾಗೂ ಗುಜರಾತ್ ನಡುವಿನ ಫೈನಲ್​​ ಬ್ಯಾಟಲ್​​ಗೆ ಕೆಲವೇ ಗಂಟೆಗಳಷ್ಟೇ ಬಾಕಿ ಇತ್ತು. ಈ ನಡುವೆ ಇದ್ದಕ್ಕಿದ್ದಂತೆ ರಾಜಸ್ಥಾನ ತಂಡದ ಕ್ಯಾಪ್ಟನ್​​ ಸಂಜು ಸ್ಯಾಮ್ಸನ್ (Sanju Samson) ಪತ್ನಿ ಐಪಿಎಲ್​​ ಆಯೋಜಕರ ವಿರುದ್ಧ ಫುಲ್​ ಗರಂ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಐಪಿಎಲ್​​​​ ಪ್ರಸಾರಕರಿಗೆ ಮುಟ್ಟಿ ನೋಡಿಕೊಳ್ಳುವಂತ ಆನ್ಸರ್​ ಕೊಟ್ಟಿದ್ದಾರೆ. ಎರಡು ತಿಂಗಳ ಹಿಂದಿನ ನಿರ್ಲಕ್ಷ್ಯ ಪ್ರಸಾರಕರಿಗೆ ದೊಡ್ಡ ಕಪಾಳಮೋಕ್ಷಕ್ಕೆ ಕಾರಣವಾಗಿದೆ.

ಕೆರಳಿದ ಚಾರುಲತಾ 9 ತಂಡಗಳಿವೆ ರಾಜಸ್ಥಾನ ಎಲ್ಲಿ:

ಈ ಸೀಸನ್​​​​ ಆರಂಭದಲ್ಲಿ, ಐಪಿಎಲ್ ಪ್ರಸಾರಕರು ಎಲ್ಲಾ ನಾಯಕರು ಕಾಣಿಸಿಕೊಂಡ ಅನಿಮೇಟೆಡ್ ವೀಡಿಯೊವನ್ನು ಮಾಡಿದರು. ಆದರೆ ರಾಜಸ್ಥಾನ ಕ್ಯಾಪ್ಟನ್​​​ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ. ಆವೃತ್ತಿ ಆರಂಭದಿಂದ ಇಲ್ಲಿಯವರೆಗೆ ಸೈಲೆಂಟಾಗಿದ್ದ ಸ್ಯಾಮ್ಸನ್​ ಪತ್ನಿ ಚಾರುಲತಾ ನಿನ್ನೆ ರಾಜಸ್ಥಾನ ತಂಡ ಕಡೆಗಣನೆಗೆ ಪ್ರಸಾರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ತಂಡಗಳ ನಾಯಕರಿರುವಾಗ ಅನಿಮೇಟೆಡ್ ವಿಡಿಯೋದಲ್ಲಿ ಸಂಜು ಸ್ಯಾಮ್ಸನ್‌ರನ್ನ ಮಾತ್ರ ಏಕೆ ತೋರಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ತನ್ನ ಪತಿ ಐಪಿಎಲ್ ಜಾಹೀರಾತುದಾರರಿಗೆ ಒಡ್ಡಿಕೊಂಡಿದ್ದಾನೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೆ ಮುಂದುವರಿದು, ಐಪಿಎಲ್ ಟ್ರೋಫಿ ರೇಸ್ ತೋರಿಸುವ ಈ ಅನಿಮೇಟೆಡ್ ವಿಡಿಯೋವನ್ನು ನಿರೂಪಕರು ಮೊದಲ ದಿನವೇ ಪ್ರಸಾರ ಮಾಡಿದ್ದಾರೆ. ಗುಲಾಬಿ ಬಣ್ಣದ ಜರ್ಸಿಯನ್ನು ಏಕೆ ಮಿಸ್ ಮಾಡಿಕೊಳ್ಳಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈಗ ನೋಡಿ ರಾಜಸ್ತಾನ ಫೈನಲ್ ತಲುಪಿದೆ'' ಎಂದು ಶೀರ್ಷಿಕೆ ನೀಡಲಾಗಿದೆ. ಅವರು ತಮ್ಮ ಸ್ಟೋರಿಯ ಮುಂದಿನ ಪೋಸ್ಟ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ತಲುಪುತ್ತಿರುವ ಚಿತ್ರವನ್ನು ಹಂಚಿಕೊಂಡು ಪ್ರಸಾರಕರಿಗೆ ಸಖತ್​ ಟಕ್ಕರ್​ ಕೊಟ್ಟಿದ್ದಾರೆ.

IPL Awards 2022: ಉಮ್ರಾನ್ ಮಲಿಕ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

ಒಟ್ಟಿನಲ್ಲಿ ಪತ್ನಿಯ ಕಾಂಟ್ರವರ್ಸಿ ಪೋಸ್ಟ್​​​​​​​​ ಮೂಲಕ ಸಂಜು ಸ್ಯಾಮ್ಸನ್​​ ಹೆಸರು ಮುನ್ನಲೆಗೆ ಬಂದಿದೆ. ಈ ವಿವಾದ ಇಲ್ಲೆಗೆ ಕೊನೆಗೊಳ್ಳುತ್ತಾ ? ಇಲ್ಲ ಪ್ರಸಾರಕರು ಇದಕ್ಕೆ ಪ್ರತಿಕ್ರಿಯಿಸಿ ಇನ್ನಷ್ಟು ದೊಡ್ಡದಾಗುತ್ತಾ ? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

ಗುಜರಾತ್‌ ಟೈಟಾನ್ಸ್‌ 15ನೇ ಆವೃತ್ತಿಯ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್‌, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆದ್ದು ಸಂಭ್ರಮಿಸಿತು. ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 20 ಓವರಲ್ಲಿ 9 ವಿಕೆಟ್‌ಗೆ 130 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಸುಲಭ ಟಾರ್ಗೆಟ್‌ ಬೆನ್ನತ್ತಿದ ಗುಜರಾತ್‌, ಆರಂಭಿಕ ಆಘಾತದ ಹೊರತಾಗಿಯೂ ಎದೆಗುಂದದೆ ಗುರಿ ತಲುಪಿತು. ಶುಭ್‌ಮನ್‌ ಗಿಲ್‌ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.