ನಾಡಾ 11 ಭಾರತ ಪುರುಷ ಮತ್ತು ೩ ಮಹಿಳಾ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಿದೆ. ಸೂರ್ಯಕುಮಾರ್, ಬುಮ್ರಾ, ಗಿಲ್, ಪಂತ್, ಹಾರ್ದಿಕ್, ರಾಹುಲ್ ಮತ್ತು ಇತರರು ಪುರುಷರ ಪಟ್ಟಿಯಲ್ಲಿದ್ದಾರೆ. ಶಫಾಲಿ, ದೀಪ್ತಿ, ರೇಣುಕಾ ಮಹಿಳಾ ತಂಡದಿಂದ ಆಯ್ಕೆಯಾಗಿದ್ದಾರೆ. ಪಂದ್ಯಗಳ ಮೊದಲು ಮತ್ತು ಆಟದ ಸಮಯದಲ್ಲಿಯೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗುವುದು.
ನವದೆಹಲಿ: ರಾಷ್ಟ್ರೀಯ ಉದ್ದೀಪನಾ ನಿಗ್ರಹ ಸಂಸ್ಥೆ(ನಾಡಾ) ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ರಿಕೆಟಿಗರನ್ನು ಡೋಪಿಂಗ್ ಟೆಸ್ಟ್‌ಗೆ ಒಳಪಡಿಸಲು ಮುಂದಾಗಿದೆ ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಟೀಂ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಭಾರತ ಟೆಸ್ಟ್ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ, ಭಾರತ ಏಕದಿನ ತಂಡದ ಉಪನಾಯಕ ಶುಭ್‌ಮನ್ ಗಿಲ್, ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸೇರಿದಂತೆ ಪ್ರಮುಖ ಭಾರತ ಪುರುಷರ ತಂಡದ 11 ಆಟಗಾರರು ಡೋಪಿಂಗ್ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ಪಟ್ಟಿಯಲ್ಲಿರುವ ಸ್ಟಾರ್ ಅಟಗಾರರೆಂದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಅರ್ಶದೀಪ್ ಸಿಂಗ್ ಹಾಗೂ ತಿಲಕ್ ವರ್ಮಾ ಡೋಪಿಂಗ್ ಟೆಸ್ಟ್‌ಗೆ ಒಳಗಾಗಲಿದ್ದಾರೆ.
ಈಡನ್‌ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಟೀಂ ಇಂಡಿಯಾ; ಟಿ20 ಸರಣಿಯಲ್ಲಿ ಶುಭಾರಂಭ
ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಶಫಾಲಿ ವರ್ಮಾ, ಆಲ್ರೌಂಡರ್ ದೀಪ್ತಿ ಶರ್ಮಾ, ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ ಕೂಡಾ ಡೋಪಿಂಗ್ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.
ಮುಂಬರುವ ಸೀಮಿತ ಓವರ್‌ಗಳ ಸರಣಿಗೂ ಮುನ್ನ ಈ ಆಟಗಾರರ ಪೈಕಿ ಕೆಲವು ಕ್ರಿಕೆಟಿಗ ಮೂತ್ರದ ಸ್ಯಾಂಪಲ್‌ಗಳನ್ನು ನಾಡಾ ಸಂಗ್ರಹಿಸಿದೆ ಎನ್ನಲಾಗಿದೆ. ಇನ್ನು ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೇ ನಾಡಾ ಅಧಿಕಾರಿಗಳು ಮೈದಾನಕ್ಕೆ ಬಂದು ಸ್ಯಾಂಪಲ್‌ಗಳನ್ನು ಸಂಗ್ರಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ರಣಜಿ ಟ್ರೋಫಿ: ಟೀಂ ಇಂಡಿಯಾ ಸ್ಟಾರ್ಸ್ ಕಣಕ್ಕೆ! ಇಂದಿನಿಂದ ಪಂದ್ಯಾಟ ಆರಂಭ
ಇನ್ನು ಇದರ ಜತೆಗೆ ಅಗತ್ಯ ಬಿದ್ದರೇ ಆಟಗಾರರಿಗೆ ತಮ್ಮ ಸ್ವಂತ ನಿವಾಸ, ಈ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್‌ಗಳನ್ನು ನಾಡಾಗೆ ನೀಡಬೇಕು ಹಾಗೂ ನಾಡಾ ಅಧಿಕಾರಿಗಳಿಗೆ ಟೆಸ್ಟಿಂಗ್ ಸಂದರ್ಭದಲ್ಲಿ ಆಟಗಾರರು ಸಹಕರಿಸಬೇಕು ಎಂದು ಸೂಚಿಸಿದೆ.
ಅಂದಹಾಗೆ ಟೀಂ ಇಂಡಿಯಾ ಕ್ರಿಕೆಟಿಗರು ಡೋಪಿಂಗ್ ಟೆಸ್ಟ್‌ಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು 2020ರಲ್ಲಿ ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಸ್ಮೃತಿ ಮಂಧನಾ ಹಾಗೂ ದೀಪ್ತಿ ಶರ್ಮಾ ಕೂಡಾ RTP ಲಿಸ್ಟ್‌ನಲ್ಲಿದ್ದಾರೆ.
