ಟಿ೨೦ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ, ಇಂಗ್ಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬಟ್ಲರ್ (68)ರನ್ ಗಳಿಸಿದರೂ ಇಂಗ್ಲೆಂಡ್ 132 ರನ್‌ಗಳಿಗೆ ಸೀಮಿತವಾಯಿತು. ವರುಣ್ 3 ವಿಕೆಟ್ ಪಡೆದರು. ಅಭಿಷೇಕ್ ಶರ್ಮಾ (79)ರನ್ ಚಚ್ಚಿದ ಭಾರತ 12.5 ಓವರ್‌ಗಳಲ್ಲಿ ಗುರಿ ತಲುಪಿತು. ಅರ್ಶ್ದೀಪ್ 2 ವಿಕೆಟ್ ಪಡೆದು ಭಾರತದ ಪರ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಕೋಲ್ಕತಾ: ಮುಂದಿನ ಟಿ20 ವಿಶ್ವಕಪ್‌ಗೆ ಇನ್ನೂ 1 ವರ್ಷವಿದ್ದು, ತವರಿನಲ್ಲೇ ನಡೆಯಲಿರುವ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸವನ್ನು ಭಾರತ ತಂಡ ಸರಿಯಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯು ಟಿ20 ವಿಶ್ವಕಪ್‌ನ ಸಿದ್ಧತೆಯ ಭಾಗವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ, ಬುಧವಾರ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಂಡ್ ಪ್ರದರ್ಶನ ತೋರಿದ ಭಾರತ 7 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆಯಿತು.

Add Asianetnews Kannada as a Preferred SourcegooglePreferred

ಭಾರತ ಕ್ರಿಕೆಟ್ ತಂಡದ ಸಂಯೋಜನೆಯು ಬಲಿಷ್ಠವಾಗಿತ್ತು. ಹಲವು ಬೌಲಿಂಗ್ ಆಯ್ಕೆಗಳ ಜೊತೆ ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್ ಬಲವನ್ನು ಹೊಂದಿದ್ದ ಭಾರತ, ಇಂಗ್ಲೆಂಡನ್ನು ಚೆಂಡಾಡಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಪ್ರವಾಸಿ ತಂಡದ ಆತ್ಮವಿಶ್ವಾಸವನ್ನು ಪವರ್ -ಪ್ಲೇನಲ್ಲಿ ಕುಗ್ಗಿಸಿತು. ನಾಯಕ ಜೋಸ್ ಬಟ್ಲರ್‌ ಏಕಾಂಗಿ ಹೋರಾಟ ತಂಡವನ್ನು 20 ಓವರಲ್ಲಿ 132 ರನ್‌ಗೆ ತಲುಪಿಸಿತು. ಬ್ಯಾಟಿಂಗ್‌ಗೆ ಅನುಕೂಲಕಾರಿಯಾಗಿದ್ದ ಪಿಚ್‌ನಲ್ಲಿ ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಮೊದಲು ಸಂಜು ಸ್ಯಾಮನ್ ಹಾಗೂ ಆನಂತರ ಅಭಿಷೇಕ್ ಶರ್ಮಾರ ಸ್ಫೋಟಕ ಆಟ ನೆರವಾಯಿತು. ಕೇವಲ 12.5 ಓವರಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಭಾರತ-ಇಂಗ್ಲೆಂಡ್ ಟಿ20 ಸರಣಿ: ಟಿವಿ, ಮೊಬೈಲ್‌ನಲ್ಲಿ ಎಲ್ಲಿ ನೋಡ್ಬೋದ್?

ಗಸ್ ಆ್ಯಟಿನ್ಸನ್‌ ಎಸೆದ ಇನ್ನಿಂಗ್ಸ್‌ನ 2ನೇ ಓವರಲ್ಲಿ 22 ರನ್ ದೋಚಿದ ಸ್ಯಾಮನ್ 20 ಎಸೆತದಲ್ಲಿ 26 ರನ್ ಗಳಿಸಿ ಔಟಾದರು. ಬಳಿಕ ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ಚಚ್ಚಿದ ಅಭಿಷೇಕ್, ಕೇವಲ 34 ಎಸೆತದಲ್ಲಿ 5 ಬೌಂಡರಿ, 8 ಸಿಕರ್‌ಗಳೊಂದಿಗೆ 79 ರನ್ ಸಿಡಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು. ಅಭಿಷೇಕ್‌ ಶರ್ಮಾ ಹೊಡೆತಗಳಿಗೆ ಇಂಗ್ಲೆಂಡ್ ಬೌಲರ್‌ಗಳ ಬಳಿ ಉತ್ತರವೇ ಇರಲಿಲ್ಲ. ತಿಲಕ್ ವರ್ಮಾ (ಔಟಾಗದೆ 19) ತಂಡವನ್ನು ಜಯದ ದಡ ಸೇರಿಸಿದರು.

ಅರ್ಶ್ದೀಪ್ ಮಿಂಚು: ಫಿಲ್ ಸಾಲ್ಸ್ (0) ಹಾಗೂ ಬೆನ್ ಡಕೆಟ್ (4)ರನ್ನು ಪೆವಿಲಿಯನ್‌ಗಟ್ಟಿದ ಅಶ್ ೯ದೀಪ್ ಸಿಂಗ್ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ಪವರ್-ಪ್ಲೇನಲ್ಲಿ ಕೇವಲ 46 ರನ್ ಗಳಿಸಿದ ಇಂಗ್ಲೆಂಡನ್ನು ಆ ಬಳಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಕಾಡಿದರು. ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ 44 ಎಸೆತದಲ್ಲಿ 68 ರನ್ ಗಳಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಮೊದಲ 6 ಓವರಲ್ಲಿ 22 ಎಸೆತದಲ್ಲಿ 34 ರನ್ ಚಚ್ಚಿದ್ದ ಬಟ್ಲರ್‌ಗೆ ನಂತರದ 10 ಓವರಲ್ಲಿ ಎದುರಿಸಲು ಸಿಕ್ಕಿದ್ದು ಕೇವಲ 20 ಎಸೆತ. ಇದು ಇಂಗ್ಲೆಂಡ್‌ಗೆ ಮಾರಕವಾಯಿತು. ಆಲ್ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ಗೆ ತಲಾ 2 ವಿಕೆಟ್ ದೊರೆಯಿತು.

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್; 13 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲು ಕಿಂಗ್ ಕೊಹ್ಲಿ ರೆಡಿ!

ಅತಿಹೆಚ್ಚು ವಿಕೆಟ್: ಅರ್ಶ್ದೀಪ್ ಸಿಂಗ್ ನಂ.1

ಭಾರತ ಪರ ಅಂ.ರಾ.ಟಿ20ಯಲ್ಲಿ ಅತಿಹೆಚ್ಚು ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ಅರ್ಶ್ ದೀಪ್ ಸಿಂಗ್ ಮೊದಲ ಸ್ಥಾನಕ್ಕೇರಿದ್ದಾರೆ. ಎಡಗೈ ವೇಗಿ 61 ಪಂದ್ಯಗಳಲ್ಲಿ 97 ವಿಕೆಟ್ ಕಬಳಿಸಿದ್ದು, 96 ವಿಕೆಟ್‌ ಪಡೆದಿರುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್‌ರನ್ನು ಹಿಂದಿಕ್ಕಿದರು.

ಸ್ಕೋರ್: ಇಂಗ್ಲೆಂಡ್ 20 ಓವರಲ್ಲಿ 132/10 (ಬಟ್ಲರ್ 68, ಬ್ರೂಕ್ 17, ವರುಣ್ 3-23), ಭಾರತ 12.5 ಓವರಲ್ಲಿ 133/3 (ಅಭಿಷೇಕ್ 79, ಸ್ಯಾಮನ್ 26, ಆರ್ಚರ್ 2-21)
ಪಂದ್ಯಶ್ರೇಷ್ಠ: ವರುಣ್ ಚಕ್ರವರ್ತಿ,