Asianet Suvarna News Asianet Suvarna News

IPL 2022 ಸಂಜು, ಶಿಮ್ರೊನ್ ಹೋರಾಟ, ಕೆಕೆಆರ್‌ಗೆ 153 ರನ್ ಟಾರ್ಗೆಟ್

  • ಹಾಫ್ ಸೆಂಚುರಿ ಸಿಡಿಸಿದ ನಾಯಕ ಸಂಜು ಸ್ಯಾಮ್ಸನ್
  • ಶಿಮ್ರೊನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್
  • ಐಪಿಎಲ್ 2022 ಟೂರ್ನಿಯ 47ನೇ ಲೀಗ್ ಹೋರಾಟ
Sanju Samson help Rajasthan Royals to set 153 runs target to  Kolkata Knight Riders ckm
Author
Bengaluru, First Published May 2, 2022, 9:21 PM IST | Last Updated May 2, 2022, 9:29 PM IST

ಮುಂಬೈ(ಮೇ.02): ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ, ಶಿಮ್ರೊನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್‌ನಿಂದ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.  ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್  5 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಫೋಟಕ ಆರಂಭ ಸಿಗಲಿಲ್ಲ. ದೇವದತ್ ಪಡಿಕ್ಕಲ್ ಕೇವಲ  2 ರನ್ ಸಿಡಿಸಿ ನಿರ್ಗಮಿಸಿದರು. ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಹೋರಾಟದಿಂದ ರಾಜಸ್ಥಾನ ಚೇತರಿಸಿಕೊಂಡಿತು. ಜೋಸ್ ಬಟ್ಲರ್ 22 ರನ್ ಸಿಡಿಸಿ ನಿರ್ಗಮಿಸಿದರು

RCB playoffs scenarios: 5 ಪಂದ್ಯ ಸೋತರೇನಂತೆ ಈಗಲೂ ಇದೆ RCBಗೆ ಪ್ಲೇ ಆಫ್‌ಗೇರಲು ಅವಕಾಶ..!

ಸಂಜು ಸ್ಯಾಮ್ಸನ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ತಂಡ ಸೇರಿಕೊಂಡ ಕರುಣ್ ನಾಯರ್ ಅಬ್ಬರಿಸಲಿಲ್ಲ. ಕೇವಲ 13 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ಸ್ಯಾಮ್ಸನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.ರಿಯಾನ್ ಪರಾಗ್ ಕೇವಲ 19 ರನ್ ಸಿಡಿಸಿ ಔಟಾದರು. 

ಹೋರಾಟ ನೀಡಿದ ಸಂಜು ಸ್ಯಾಮ್ಸನ್ 49 ಎಸೆತದಲ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿದರು.115 ರನ್‌ಗಳಿಗೆ ರಾಜಸ್ಥಾನ ರಾಯಲ್ಸ್ 5 ವಿಕೆಟ್ ಕಳೆದುಕೊಂಡಿತು.ಕೋಲ್ಕತಾ ನೈಟ್ ರೈಡರ್ಸ್ ದಾಳಿಗೆ ರಾಜಸ್ಥಾನ ಉತ್ತರಿಸಲು ತಡಕಾಡಿತು. 

ಅಂತಿಮ ಹಂತದಲ್ಲಿ ಶಿಮ್ರೊನ್ ಹೆಟ್ಮೆಯರ್ ಹಾಗೂ ರವಿಚಂದ್ರನ್ ಅಶ್ವಿನ್ ಹೋರಾಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಯಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ರಾಜಸ್ಥಾನಕ್ಕೆ ಶಿಮ್ರೊನ್ ಹೆಟ್ಮೆಯರ್ ರನ್ ವೇಗ ನೀಡಿದರು. 

IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!

ಹೆಟ್ಮೆಯರ್ ಅಜೇಯ 27 ರನ್ ಸಿಡಿಸಿದರೆ, ಅಶ್ವಿನ್ ಅಜೇಯ 6 ರನ್ ಸಿಜಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿತು.

ಕೆಕೆಆರ್ ಬೌಲಿಂಗ್
ಕೆಕೆಆರ್ ಪರ ಟಿಮ್ ಸೌಥಿ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಉಮೇಶ್ ಯಾದವ್ 1, ಅಂಕುಲ್ ರಾಯ್ 1, ಶಿವಂ ಮಾವಿ 1 ವಿಕೆಟ್ ಕಬಳಿಸಿದರು. ಆದರೆ ಸುನಿಲ್ ನರೈನ್ ವಿಕೆಟ್ ಕಬಳಿಸಲಿಲ್ಲ. 4.80 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.

ಗೆಲುವಿನ ಲೆಕ್ಕಾಚಾರದಲ್ಲಿ ಕೆಕೆಆರ್, ರಾಜಸ್ಥಾನ
ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್  ನಡುವಿನ ಪಂದ್ಯದಲ್ಲಿ ಲೆಕ್ಕಾಚಾರಗಳು ಅಡಗಿವೆ. ಕೆಕೆಆರ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಸತತ 5 ಸೋಲು ಕಂಡಿರುವ ಕೆಕೆಆರ್ 8ನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದ ಕೆಕೆಆರ್, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 7ನೇ ಸ್ಥಾನಕ್ಕೆ ಜಿಗಿಯಲಿದೆ. ಇತ್ತ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಗೆಲುವು ಬೇಕೆ ಬೇಕು.

ರಾಜಸ್ಥಾನ ರಾಯಲ್ಸ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 14 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಏರಿಕೆ ಕಾಣದಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಲಖನೌ ಸೂಪರ್  ಜೈಂಟ್ಸ್ 3ನೇ ಸ್ಥಾನಕ್ಕೆ ಕುಸಿಯಲಿದೆ. 
 

Latest Videos
Follow Us:
Download App:
  • android
  • ios