IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!
- ಧೋನಿ ನಾಯಕತ್ವದ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲವು
- ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 13 ರನ್ ಗೆಲುವು
- ಬದಲಾಯತು ಚೆನ್ನೈ ಸೂಪರ್ ಕಿಂಗ್ಸ್ ಅದೃಷ್ಠ
ಪುಣೆ(ಮೇ.01): ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸೋತು ಕಂಗಾಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಧೋನಿ ನಾಯಕತ್ವದಲ್ಲಿ ಗೆಲುವಿನ ಹಳಿಗೆ ಮರಳಿದೆ. 15ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 8 ಪಂದ್ಯಗಳ ಬಳಿಕ ನಾಯಕತ್ವ ವಹಿಸಿಕೊಂಡ ಎಂ.ಎಸ್.ಧೋನಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್‌ಕೆ 13 ರನ್ ಗೆಲುವು ದಾಖಲಿಸಿದೆ.
ಗೆಲುವಿಗೆ 203ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆತ್ಮವಿಶ್ವಾಸ ಆರಂಭದಲ್ಲೇ ಕುಗ್ಗಿತು. ಬೃಹತ್ ಮೊತ್ತ,ಧೋನಿ ನಾಯಕತ್ವ ಹೈದರಾಬಾದ್ ತಂಡಕ್ಕೆ ಸವಾಲಾಗಿ ಪರಿಣಮಿಸಿತು. ಆದರೆ ಅಭಿಶೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 58 ರನ್ ಜೊತೆಯಾಟ ನೀಡಿದರು. 24 ಎಸೆತದಲ್ಲಿ 39 ರನ್ ಸಿಡಿಸಿ ಅಭಿಷೇಕ್ ಶರ್ಮಾ ಔಟಾದರು.
IPL 2022: ರಾಜಸ್ಥಾನ ರಾಯಲ್ಸ್ ಎದುರು ಗೆದ್ದ ಬೆನ್ನಲ್ಲೇ ಮಹತ್ವದ ಹೇಳಿಕೆ ನೀಡಿದ ರೋಹಿತ್ ಶರ್ಮಾ..!
ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ ಡಕೌಟ್ ಆದರು. ಆ್ಯಡಿನ್ ಮರ್ಕ್ರಮ್ ಕೇವಲ 17 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಕೇನ್ ವಿಲಿಯಮ್ಸನ್ 37 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು. ಆದರೆ ನಿಕೋಲಸ್ ಪೂರನ್ ಹೋರಾಟ ಹೈದರಾಬಾದ್ ತಂಡದಲ್ಲಿ ಸಣ್ಣದೊಂದು ಗೆಲುವಿನ ಆಸೆ ಚಿಗುರಿಸಿತ್ತು.
ಶಶಾಂಕ್ ಸಿಂಗ್ ಹಾಗೂ ವಾಶಿಂಗ್ಟನ್ ಸುಂದರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಬ್ಬರಿಸಿದ ಪೂರನ್ ಹಾಫ್ ಸಂಚುರಿ ಸಿಡಿಸಿದರು. ಪೂರನ್ 33 ಎಸೆತದಲ್ಲಿ ಅಜೇಯ 64 ರನ್ ಸಿಡಿಸಿ ಗೆಲುವಿಗಾಗಿ ಶ್ರಮಿಸಿದರು. ಆದರೆ ತಂಡ ಗೆಲುವಿನ ದಡ ಸೇರಲಿಲ್ಲ. ಅಂತಿಮವಾಗಿ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು. ಇದರೊಂದಿಗೆ ಧೋನಿ ಪಡೆ 13 ರನ್ ಗೆಲುವು ಸಾಧಿಸಿತು.
IPL 2022: ಆರ್‌ಸಿಬಿಗೆ ಹ್ಯಾಟ್ರಿಕ್, ಟೈಟಾನ್ಸ್ ಪ್ಲೇ ಆಫ್ ಹಾದಿ ಸುಗಮ
ಐಪಿಎಲ್: ಋುತುರಾಜ್ ವೇಗದ ಸಾವಿರ ರನ್
ಪುಣೆ: ಚೆನ್ನೈ ಸೂಪರ್ ಕಿಂಗ್‌್ಸ ಆರಂಭಿಕ ಆಟಗಾರ ಋುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಕೇವಲ 31 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರ್ತಿಗೊಳಿಸಿದ್ದು, ವೇಗದ ಸಾವಿರ ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾನುವಾರ ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ನ ಸಚಿನ್ ತೆಂಡುಲ್ಕರ್ 31 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದರು. ಸುರೇಶ್ ರೈನಾ(34), ರಿಷಬ್ ಪಂತ್(35) ನಂತರದ ಸ್ಥಾನಗಳಲ್ಲಿದ್ದಾರೆ. ಇನ್ನು ಪಂಂದ್ಯದಲ್ಲಿ ಋುತುರಾಜ್-ಡೆವೋನ್ ಕಾನ್‌ವೇ ಮೊದಲ ವಿಕೆಟ್‌ಗೆ 182 ರನ್ ಜೊತೆಯಾಟವಾಡಿದ್ದು, ಮೊದಲ ವಿಕೆಟ್‌ಗೆ 4ನೇ ಗರಿಷ್ಠ ಜೊತೆಯಾಟ ಎನಿಸಿಕೊಂಡಿದೆ. ಸನ್ರೈಸರ್ಸ್ನ ವಾರ್ನರ್-ಬೇರ್‌ಸ್ಟೋವ್ 2017ರಲ್ಲಿ ಮೊದಲ ವಿಕೆಟ್‌ಗೆ 185 ರನ್ ಜೊತೆಯಾಟವಾಡಿದ್ದರು.
ಪುಣೆ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್‌್ಸ 3ನೇ ಗೆಲುವು ಸಾಧಿಸಿದೆ. ಮತ್ತೊಮ್ಮೆ ಧೋನಿ ನಾಯಕತ್ವದೊಂದಿಗೆ ಕಣಕ್ಕಿಳಿದ ತಂಡ ಭಾನುವಾರ ಸನ್‌ರೈಸರ್ಸ್ ವಿರುದ್ಧ 13 ರನ್ ಜಯಗಳಿಸಿತು. ಸತತ 5 ಪಂದ್ಯಗಳನ್ನು ಗೆದ್ದು ಬೀಗಿದ್ದ ಸನ್‌ರೈಸರ್ಸ್ ಬಳಿಕ ಸತತ 2ನೇ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 2 ವಿಕೆಟ್ ಕಳೆದುಕೊಂಡು 202 ರನ್ ಕಲೆ ಹಾಕಿತು. ಋುತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್‌ವೇ(ಔಟಾಗದೆ 85) ಮೊದಲ ವಿಕೆಟ್‌ಗೆ 182 ರನ್ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಗಾಯಕ್ವಾಡ್(99) ಶತಕದ ಅಂಚಿನಲ್ಲಿ ಎಡವಿದರು. ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ 6 ವಿಕೆಟ್‌ಗೆ 189 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಿಕೋಲಸ್ ಪೂರನ್(64) ಹೋರಾಟ ತಂಡಕ್ಕೆ ಗೆಲುವು ತಂದು ಕೊಡಲಿಲ್ಲ. ಮುಖೇಶ್ 4 ವಿಕೆಟ್ ಪಡೆದರು.