Asianet Suvarna News Asianet Suvarna News

ಕಾನೂನಿನ ಲೋಪದಿಂದಾಗಿ ಫಿಕ್ಸಿಂಗ್ ಕೇಸ್‌ನಿಂದ ಶ್ರೀಶಾಂತ್ ಬಚಾವಾದರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ತನಿಖಾಧಿಕಾರಿ

ಶ್ರೀಶಾಂತ್ 2013ರಲ್ಲಿ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್‌ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. 

S Sreesanth Got Away Due To Lack Of Sports Law Says IPS officer Neeraj Kumar kvn
Author
First Published Apr 8, 2024, 11:42 AM IST

ನವದೆಹಲಿ: ಭಾರತದ ಮಾಜಿ ವೇಗಿ ಶ್ರೀಶಾಂತ್ ವಿರುದ್ಧ ಐಪಿಎಲ್‌ನ ಸ್ಪಾಟ್ ಪ್ರಕರಣದಲ್ಲಿ ಸಾಕ್ಷ್ಯಾಧಾ ರಗಳಿದ್ದರೂ ಕಾನೂನಿನಲ್ಲಿನ ಲೋಪದಿಂದಾಗಿ ಬಚಾವಾದರು ಎಂದು ಬಿಸಿಸಿಐನ ಮಾಜಿ ಭದ್ರತಾ ಅಧಿಕಾರಿ, ಫಿಕಿಂಗ್ ತನಿಖಾಧಿಕಾರಿಯಾಗಿದ್ದ ನೀರಜ್ ಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. 

ನೀರಜ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಜಿಂಬಾಬ್ವೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕ್ರೀಡೆಯಲ್ಲಿನ ಫಿಕ್ಸಿಂಗ್ ಗೆ ಕಠಿಣ ಕಾನೂನುಗಳಿವೆ. ಆದರೆ ಭಾರತದಲ್ಲಿ ಸೂಕ್ತ ಕಾನೂನಿಲ್ಲ, ಫಿಕ್ಸಿಂಗ್ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ, ಮೋಸ ಹೋದ ವ್ಯಕ್ತಿಯನ್ನು ನಮಗೆ ತೋರಿಸಿ ಎಂದು ನ್ಯಾಯಾಲಯ ಹೇಳುತ್ತದೆ. ಹೀಗಾದರೆ ಕಠಿಣ ಶಿಕ್ಷೆ ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ. 

ಶ್ರೀಶಾಂತ್ 2013ರಲ್ಲಿ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್‌ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು.

IPL 2024: ಚೆನ್ನೈನಲ್ಲಿಂದು ಸಿಎಸ್‌ಕೆ vs ಕೆಕೆಆರ್ ನಡುವೆ ಹೈವೋಲ್ಟೇಜ್‌ ಕದನ..! 

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಕೇರಳ ಮೂಲದ ವೇಗಿ ಎಸ್ ಶ್ರೀಶಾಂತ್, 2013ರಲ್ಲಿ ಸ್ಪಾಟ್‌ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದು, 2015ರವರೆಗೂ ಕಂಬಿ ಎಣಿಸಿದ್ದ ಶ್ರೀಶಾಂತ್, ಕಾನೂನು ಹೋರಾಟ ನಡೆಸಿ ಬಂಧನ ಮುಕ್ತರಾಗಿದ್ದರು. ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಅವರಿದ್ದು ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದ್ದು, ಶ್ರೀಶಾಂತ್ ಅಜೀವ ಶಿಕ್ಷೆಯ ಬದಲಾಗಿ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸಿತ್ತು. 

13-09-2013ರಲ್ಲಿ ಶ್ರೀಶಾಂತ್ ಮೇಲೆ ಅಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಶ್ರೀಶಾಂತ್ ಜೊತೆ ರಾಜಸ್ಥಾನ ರಾಯಲ್ಸ್ ಆಟಗಾರರಾದ ಅಜಿತ್ ಚಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಮೇಲೂ ಅಜೀವ ನಿಷೇಧ ಹೇರಲಾಗಿತ್ತು. ಆದರೆ ಫಿಕ್ಸಿಂಗ್ ನಡೆಸಿದ ಕುರಿತು ಯಾವುದೇ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ಶ್ರೀಶಾಂತ್ ಮೇಲಿನ ಆರೋಪಗಳನ್ನು ತಳ್ಳಿಹಾಕಿತು. ಅಲ್ಲದೆ ಕೇಸ್‌ನಿಂದ ಮುಕ್ತಗೊಳಿಸಿತು.

#PinkPromise: ಆರ್‌ಸಿಬಿ-ರಾಯಲ್ಸ್ ನಡುವಿನ ಪಂದ್ಯ 13 ಸಿಕ್ಸರ್ ಸಿಡಿಸಿದ ಬ್ಯಾಟರ್ಸ್‌, 78 ಮನೆ ಬೆಳಗಿದ ಸೋಲಾರ್ ಬೆಳಕು

ಕಾನೂನು ಹೋರಾಟದಲ್ಲಿ ಶ್ರೀಶಾಂತ್ ಮೇಲುಗೈ ಸಾಧಿಸುತ್ತಿದ್ದಂತೆ ಬಿಸಿಸಿಐ ಪಟ್ಟು ಸಡಿಲಿಸಿತು. ಎಸ್ ಶ್ರೀಶಾಂತ್ ಮೇಲಿನ ನಿಷೇಧದ ಅವಧಿಯನ್ನು 7 ವರ್ಷಕ್ಕೆ ಕಡಿತಗೊಳಿಸಿತು. ನಿಷೇಧ ಶಿಕ್ಷೆ ಮುಗಿಸಿದ ಬಳಿಕ 2020ರ ಬಳಿಕ ಕ್ರಿಕೆಟ್‌ಗೆ ಮರಳಿದ್ದ ಶ್ರೀಶಾಂತ್, ಕೇರಳ ಪರ ರಣಜಿ ತಂಡದಲ್ಲೂ ಆಡಿದ್ದರು.

Follow Us:
Download App:
  • android
  • ios