Asianet Suvarna News Asianet Suvarna News

#PinkPromise: ಆರ್‌ಸಿಬಿ-ರಾಯಲ್ಸ್ ನಡುವಿನ ಪಂದ್ಯ 13 ಸಿಕ್ಸರ್ ಸಿಡಿಸಿದ ಬ್ಯಾಟರ್ಸ್‌, 78 ಮನೆ ಬೆಳಗಿದ ಸೋಲಾರ್ ಬೆಳಕು

ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪಂದ್ಯ ವೀಕ್ಷಿಸಲು ಬರುವ ಪ್ರತಿ ಅಭಿಮಾನಿಗಳಿಗೆ ಪ್ರತಿ ಟಿಕೆಟ್‌ಗೆ 100 ರುಪಾಯಿಯಂತೆ ಒಂದು ಪಿಂಕ್ ಜೆರ್ಸಿ ವಿತರಿಸಲಾಗಿತ್ತು. ಇದರ ಜತೆಗೆ ಔರತ್ ಹೈ ತೋ ಭಾರತ್ ಹೈ(ಮಹಿಳೆಯಿದ್ದರೇ, ಭಾರತ ಇರುತ್ತೆ) ಎನ್ನುವ ಘೋಷವಾಕ್ಯದೊಂದಿಗೆ ಕಣಕ್ಕಿಳಿದಿತ್ತು. 

IPL 2024 Rajasthan Royals will solar power 78 homes in the  Pink Promise match versus RCB dedicated to women kvn
Author
First Published Apr 7, 2024, 4:31 PM IST

ಜೈಪುರ(ಏ.07): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಇದೀಗ ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ವಿಶಿಷ್ಠ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದೆ. ಇಲ್ಲಿನ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ಎರಡು ತಂಡಗಳಿಂದ ದಾಖಲಾಗುವ ಪ್ರತಿ ಸಿಕ್ಸರ್‌ಗೆ 6 ಮನೆಗಳಿಗೆ ಸೋಲಾರ್ ಪವರ್ ಒದಗಿಸುವುದಾಗಿ ಘೋಷಿಸಿತ್ತು. ಇದೀಗ ಈ ಪಂದ್ಯದ ಮೂಲಕ ರಾಜಸ್ಥಾನದಲ್ಲಿರುವ 78 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪಂದ್ಯ ವೀಕ್ಷಿಸಲು ಬರುವ ಪ್ರತಿ ಅಭಿಮಾನಿಗಳಿಗೆ ಪ್ರತಿ ಟಿಕೆಟ್‌ಗೆ 100 ರುಪಾಯಿಯಂತೆ ಒಂದು ಪಿಂಕ್ ಜೆರ್ಸಿ ವಿತರಿಸಲಾಗಿತ್ತು. ಇದರ ಜತೆಗೆ ಔರತ್ ಹೈ ತೋ ಭಾರತ್ ಹೈ(ಮಹಿಳೆಯಿದ್ದರೇ, ಭಾರತ ಇರುತ್ತೆ) ಎನ್ನುವ ಘೋಷವಾಕ್ಯದೊಂದಿಗೆ ಕಣಕ್ಕಿಳಿದಿತ್ತು. 

ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು

ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 2019ರಿಂದಲೂ ಮಹಿಳಾ ಸಬಲೀಕರಣದ ಬಗ್ಗೆ ಒತ್ತು ನೀಡುತ್ತಾ ಬಂದಿದೆ. ತಮ್ಮದೇ ಸಮಾಜಸೇವ ಫೌಂಡೇಶನ್ ಮೂಲಕ ಸ್ವಚ್ಛ ವಿದ್ಯುತ್, ಶುದ್ಧ ಕುಡಿಯುವ ನೀರು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ಹೀಗಾಗಿಯೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪಿಂಕ್ ಪ್ರಾಮೀಸ್ ಮೂಲಕ ಇದೀಗ 78 ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವ ಕೆಲಸ ಮಾಡಿದೆ.

13 ಸಿಕ್ಸರ್ 78 ಮನೆಗೆ ಸೋಲಾರ್ ಬೆಳಕು: ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ 13 ಸಿಕ್ಸರ್‌ಗಳು ದಾಖಲಾದವು. ಹೀಗಾಗಿ ಪ್ರತಿ ಸಿಕ್ಸರ್‌ಗೆ 6 ಮನೆಗೆ ಸೋಲಾರ್ ವಿದ್ಯುತ್ ಒದಗಿಸುವ ಭರವಸೆ ನೀಡಿರುವುದರಿಂದ 78 ಮನೆಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ ಸಿಗಲಿದೆ.
 

Follow Us:
Download App:
  • android
  • ios