Asianet Suvarna News Asianet Suvarna News

ವಿಶ್ವಕಪ್ ಫೈನಲ್ ಸೋಲಿನ ನೋವಿಗೆ ಕಣ್ಣೀರಾದ ಟೀಂ ಇಂಡಿಯಾ, ತುಂಬಿ ಬಂತು ಫ್ಯಾನ್ಸ್ ಕಣ್ಣಾಲಿ!

ICC ವಿಶ್ವಕಪ್ ಗೆಲ್ಲಲು ಅರ್ಹ ಅನ್ನೋ ಕಿರೀಟ ಹೊತ್ತುಕೊಂಡೆ ಸಂಪೂರ್ಣ ಟೂರ್ನಿ ಆಡಿದ್ದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಇದು ಎಂತವರಲ್ಲೂ ಕಣ್ಣೀರು ತರಿಸುತ್ತೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಹೊರತಲ್ಲ. ಸೋಲಿನ ಆಘಾತದಲ್ಲಿ ನಾಯಕ ರೋಹಿತ್, ಸಿರಾಜ್ ಸೇರಿದಂತೆ ಬಹುತೇಕ ಕ್ರಿಕೆಟಿಗರು ಕಣ್ಣೀರಾಗಿದ್ದಾರೆ.

Rohit Sharma Siraj And team India players gets emotional after lose against Australia Final ckm
Author
First Published Nov 19, 2023, 10:49 PM IST

ಅಹಮ್ಮದಾಬಾದ್(ನ.19) ಐಸಿಸಿ ವಿಶ್ವಕಪ ಟೂರ್ನಿಯಲ್ಲಿ ಅದ್ವಿತೀಯ ಪ್ರದರ್ಶನ ನೀಡಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿದೆ. ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಭಾರತ ವಿಫಲವಾಗಿತ್ತು. ಇಡೀ ಟೂರ್ನಿಯಲ್ಲಿ ಚಾಂಪಿಯನ್ ಆಟವಾಡಿದ್ದ ಭಾರತ ಫೈನಲ್ ಪಂದ್ಯದಲ್ಲಿ ಸೋಲಿನ ಶಾಕ್ ಟೀಂ ಇಂಡಿಯಾ ಕ್ರಿಕೆಟಿಗರ ದುಃಖದ ಕಟ್ಟೆ ಒಡೆಯುವಂತೆ ಮಾಡಿದೆ. ನಾಯಕ ರೋಹಿತ್ ಶರ್ಮಾ ಕಣ್ಮೀರು ಹಾಕಿದ್ದಾರೆ. ಇತ್ತ ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್ ಸೇರಿದಂತೆ ಕ್ರಿಕೆಟಿಗರು ನೋವು ತಡೆದುಕೊಳ್ಳಲು ಸಾಧ್ಯವಾಗದೆ ಅತ್ತಿದ್ದಾರೆ. ಉಳಿದ ಕೆಲ ಕ್ರಿಕೆಟಿಗರು ಕ್ಯಾಮೆರಾ ಮುಂದೆ ಗಟ್ಟಿಯಾಗಿ ನಿಂತರೂ ಒಳಗಿನಿಂದ ಅಳುತ್ತಲೇ ಇದ್ದಾರೆ. ಈ ದೃಶ್ಯಗಳನ್ನು ನೋಡಿದ ಅಭಿಮಾನಿಗಳ ಕಣ್ಣಾಲಿ ತುಂಬಿ ಬಂದಿದೆ.

ಆಸ್ಟ್ರೇಲಿಯಾ ಗೆಲುವಿನ ದಡ ಸೇರುತ್ತಿದ್ದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಕಣ್ಣುಗಳು ತುಂಬಿದೆ. ಕಣ್ಣೀರು ಜಿನುಗಿದೆ. ರೋಹಿತ್ ಶರ್ಮಾ ಕ್ಯಾಮೆರಾದಿಂದ ದೂರ ಸರಿಯಲು ಯತ್ನಿಸಿದ್ದಾರೆ. ಅಳುತ್ತಲೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಪಿಚ್‌ಲ್ಲೇ ಕಣ್ಣೀರಿಟ್ಟಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಸಂತೈಸಿದರೂ ನೋವು ತಡೆದುಕೊಳ್ಳಲು ಸಾಧ್ಯವಾಗಿಲ್ಲ.

 

 

ಇಂದು, ಎಂದೆಂದು ನಿಮ್ಮ ಜೊತೆ ನಾವಿದ್ದೇವೆ; ಟೀಂ ಇಂಡಿಯಾ ಧೈರ್ಯ ತುಂಬಿದ ಪ್ರಧಾನಿ ಮೋದಿ!

ಇತ್ತ ಕೆಎಲ್ ರಾಹುಲ್ ಮೈದಾನಕ್ಕೆ ಮುಖ ಮುತ್ತಿ ನೋವನ್ನು ನಿಯಂತ್ರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಕ್ಯಾಮೆರಾ ಮುಂದೆ ಕಣ್ಣೀರು ತಡೆದುಕೊಂಡರು ಮುಖದಲ್ಲಿನ ನೋವು ಎಲ್ಲವನ್ನೂ ಹೇಳುತ್ತಿತ್ತು. ಟೀಂ ಇಂಡಿಯಾದ ಪ್ರತಿಯೊಬ್ಬರು ಸೋಲಿನ ನೋವಿನಲ್ಲಿ ಮುಳುಗಿದ್ದಾರೆ. ಈ ದೃಶ್ಯಗಳು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.

 

 

ಹಲವು ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸೋಲು ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಆದರೂ ಚಾಂಪಿಯನ್ ಆಟ ಪ್ರದರ್ಶಿಸಿದ ಭಾರತ ಟ್ರೋಫಿ ಗೆಲ್ಲಲಿಲ್ಲ ಅನ್ನೋ ಕೊರಗು ಕಾಡುತ್ತಿದೆ. ಮುಂದಿನ ಸರಣಿಯಲ್ಲಿ ಟ್ರೋಫಿ ಗೆಲ್ಲುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಭಾರತದ ದಿಟ್ಟ ಹೋರಾಟವನ್ನೂ ಅಭಿಮಾನಿಗಳು ಪ್ರಶಂಸಿಸಿದ್ದಾರೆ. ಟೀಂ ಇಂಡಿಯಾದ ಸೋಲಿನ ನೋವಿನಲ್ಲಿ ನಾವು ಭಾಗಿಗಳು ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

 

 

ತಿಣುಕಾಡಿ ಫೈನಲ್ ಪ್ರವೇಶಿಸಿ ಚಾಂಪಿಯನ್ ಆದ ಆಸ್ಟ್ರೇಲಿಯಾ, ಭಾರತಕ್ಕೆ 2003ರಂತೆ 23ರಲ್ಲೂ ಸೋಲು!

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 240 ರನ್ ಸಿಡಿಸಿ ಆಲೌಟ್ ಆಗಿತ್ತು. ಭಾರತದ ಪರ ನಾಯಕ ರೋಹಿತ್ ಶರ್ಮಾ 47, ವಿರಾಟ್ ಕೊಹ್ಲಿ 54 ಹಾಗೂ ಕೆಎಲ್ ರಾಹುಲ್ 66 ರನ್ ಸಿಡಿಸಿದ್ದರು. ಸುಲಭ ಗುರಿ ಚೇಸ್ ಮಾಡಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಟ್ರಾವಿಸ್ ಹೆಡ್ 137 ರನ್ ಸಿಡಿಸಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.

 

 

Follow Us:
Download App:
  • android
  • ios